ಕ್ರೀಡೆ

ಈ 3 ಸ್ಪಿನ್​ ಮಾಂತ್ರಿಕರ ಮೇಲೆ CSK ಕಣ್ಣು! ಇವರೇನಾದ್ರೂ ತಂಡಕ್ಕೆ ಬಂದ್ರೆ ಮತ್ತೊಮ್ಮೆ ಚಾಂಪಿಯನ್​​ ಪಟ್ಟ ಖಚಿತ

ನವದೆಹಲಿ: ಐಪಿಎಲ್​ 18ನೇ ಆವೃತ್ತಿ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಈಗಾಗಲೇ ಹಲವು ವಿಷಯಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಲು ಆರಂಭಿಸಿವೆ. ಮುಂಬರುವ​ ಸೀಸನ್​ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ನಿರೀಕ್ಷೆಗಳೇ ಸದ್ಯ ಜೋರಾಗಿದ್ದು, ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಆಯಾ ಫ್ರಾಂಚೈಸಿಗಳ ಕ್ಯಾಪ್ಟನ್​ಗಳು ಸೇರಿದಂತೆ ಸ್ಟಾರ್​ ಆಟಗಾರರು ಈಗಿರುವ ತಮ್ಮ ತಂಡ ಬಿಟ್ಟು ಬೇರೆ ತಂಡಗಳಿಗೆ ಸೇರುತ್ತಾರೆ ಎಂಬ ಸುದ್ದಿಗಳು ಐಪಿಎಲ್ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಇನ್ನು ಇದೇ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಕ್ಷನ್​ನತ್ತ ಎದುರುನೋಡುತ್ತಿರುವ ಐದು ಬಾರಿ ಚಾಂಪಿಯನ್ಸ್​ ತಂಡ ಚೆನ್ನೈ ಸೂಪರ್ ಕಿಂಗ್ಸ್​, ಈ ಮೂವರು ಸ್ಪಿನ್​ ಮಾಂತ್ರಿಕರನ್ನು ಖರೀದಿಸಲು ಹದ್ದಿನ ಕಣ್ಣಿಟ್ಟಿದೆ.

ಐಪಿಎಲ್​ ಇತಿಹಾಸದಲ್ಲಿಯೇ ಅತ್ಯಂತ ಬಲಿಷ್ಠ ಹಾಗೂ ಚಾಂಪಿಯನ್ಸ್​ ತಂಡ ಎಂದೇ ಗುರುತಿಸಿಕೊಂಡಿರುವ ಸಿಎಸ್​ಕೆ ಫ್ರಾಂಚೈಸಿ, ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಂತರದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ ಮುಂದಿನ ತಿಂಗಳಲ್ಲಿ ನಡೆಯಲಿರುವ ಐಪಿಎಲ್​ 2025ರ ಹರಾಜು ಪ್ರಕ್ರಿಯೆಯಲ್ಲಿ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಉಳಿಸಿಕೊಳ್ಳಲು ಚಿಂತನೆ ನಡೆಸುತ್ತಿರುವ ಫ್ರಾಂಚೈಸಿ, ಟೀಮ್​ಗೆ ಸ್ಪಿನ್ನರ್​ಗಳಿದ್ದರೆ ಮತ್ತಷ್ಟು ಬಲ ಎಂಬ ನಿರ್ಧಾರವನ್ನು ಮಾಡಿಕೊಂಡಿದೆ.

ಈ ಹಿಂದಿನಿಂದಲೂ ಟಿ20 ಕ್ರಿಕೆಟ್​ನಲ್ಲಿ ಸ್ಪಿನ್ನರ್​ಗಳ ಕೈಚಳಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ಹಲವು ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಯಾರನ್ನು ಕರೆದುಕೊಳ್ಳುವುದು ಒಳಿತು ಎಂಬ ಗೊಂದಲದಲ್ಲಿರುತ್ತದೆ. ಇಲ್ಲಿ ತಮ್ಮಿಷ್ಟದ ಬೌಲರ್​ನನ್ನು ತಂಡಕ್ಕೆ ಖರೀದಿ ಮಾಡುವುದು ಎಷ್ಟು ಮುಖ್ಯವೋ, ಟೀಮ್​ಗೆ ಸೂಕ್ತವಾದ ಬೌಲರ್​ ಯಾರೆಂಬುದನ್ನು ಮೊದಲು ಸರಿಯಾಗಿ ನಿರ್ಧರಿಸುವುದು ಅಷ್ಟೇ ಮುಖ್ಯ. ಸದ್ಯ ಹೀಗಿರುವಾಗ ಮೊದಲಿನಿಂದಲೂ ಸ್ಪಿನ್​ ಮಾಂತ್ರಿಕರನ್ನೇ ಹೆಚ್ಚು ಟಾರ್ಗೆಟ್​ ಮಾಡುವ ಸಿಎಸ್​ಕೆ, ಈ ಬಾರಿ ಕಣ್ಣಿಟ್ಟಿರುವ ಆ ಮೂವರು ಬೌಲರ್​ಗಳು ಯಾರು ಎಂಬುದು ಈ ಕೆಳಕಂಡಂತಿದೆ ಗಮನಿಸಿ.

2025ರ ಐಪಿಎಲ್​ಗೆ ಸಿಎಸ್​ಕೆ ಕಣ್ಣಿಟ್ಟಿರುವ 3 ಸ್ಪಿನ್ನರ್ಸ್​:

  • ರವಿಚಂದ್ರನ್ ಅಶ್ವಿನ್ (ಪ್ರಸ್ತುತ ರಾಜಸ್ಥಾನ ರಾಯಲ್ಸ್​)
  • ಆರ್. ಸಾಯಿ ಕಿಶೋರ್ (ಗುಜರಾತ್ ಟೈಟನ್ಸ್​)
  • ವರುಣ್ ಚಕ್ರವರ್ತಿ (ಕೊಲ್ಕತ ನೈಟ್​ ರೈಡರ್ಸ್​)