ಕ್ರೀಡೆ

6ನೇ ಬಾರಿ ಚಾಂಪಿಯನ್​ ಪಟ್ಟಕೇರಲು CSK ಸಜ್ಜು! ಹರಾಜಿನಲ್ಲಿ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ

ನವದೆಹಲಿ: ದುಬೈನಲ್ಲಿ ನಡೆದ ಎರಡು ದಿನಗಳ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಮೊದಲ ದಿನದ ಅಂತ್ಯಕ್ಕೆ ಭಾರತೀಯ ಆಟಗಾರರಾದ ರಿಷಭ್ ಪಂತ್ ಮತ್ತು ಶ್ರೇಯಸ್​ ಅಯ್ಯರ್​ ದುಬಾರಿ ಮೊತ್ತಕ್ಕೆ ಖರೀದಿಯಾದರೆ, ವಿದೇಶಿ ಆಟಗಾರರು ಸಾಧಾರಣ ಮೊತ್ತಕ್ಕೆ ಆಯಾ ತಂಡದ ಪಾಲಾದರು. ಮೊದಲ ದಿನವೇ ಖರೀದಿಯಲ್ಲಿ ಎಲ್ಲರ ಗಮನಸೆಳೆದಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ಮ್ಯಾನೇಜ್​ಮೆಂಟ್​, ಎರಡನೇ ದಿನಕ್ಕೆ ಕಾಲಿಟ್ಟ ಬಿಡ್ಡಿಂಗ್​ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಆಟಗಾರರ ಬದಲಿಗೆ ಯಾರಿಗೂ ಬೇಡವಾದ ಯುವ ಹಾಗೂ ಹೊಸ ಆಟಗಾರರನ್ನು ಖರೀದಿ ಮಾಡುವಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿದೆ. ಎರಡನೇ ದಿನದ ಬಿಡ್ಡಿಂಗ್​ನಲ್ಲಿಯೂ ತನ್ನ ಕಿಲಾಡಿತನ ತೋರಿದ ಚೆನ್ನೈ ಸೂಪರ್ ಕಿಂಗ್ಸ್ (CSK)​, ಆಲ್​ರೌಂಡರ್​ ಸ್ಯಾಮ್​ ಕರನ್​, ದೀಪಕ್ ಹೂಡಾರಂತಹ ಆಟಗಾರರನ್ನು ಕೇವಲ 3 ಕೋಟಿ ರೂ. ಬಜೆಟ್​ನೊಳಗೆ ಖರೀದಿ ಮಾಡಿ, ಇತರೆ ಫ್ರಾಂಚೈಸಿಗಳಿಗೆ ತಾವೇನು? ಗೆಲ್ಲಲು ಪ್ಲ್ಯಾನ್​ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟಿದೆ.

ಹರಾಜಿನಲ್ಲಿ CSK ಖರೀದಿಸಿದ ಪ್ಲೇಯರ್ಸ್ ಪಟ್ಟಿ​

1. ಡೆವೊನ್ ಕಾನ್ವೇ – 6.25 ಕೋಟಿ ರೂ.

2. ರಾಹುಲ್ ತ್ರಿಪಾಠಿ – 3.4 ಕೋಟಿ ರೂ.

3. ರಚಿನ್ ರವೀಂದ್ರ – 4 ಕೋಟಿ ರೂ.

4. ರವಿಚಂದ್ರನ್ ಅಶ್ವಿನ್ – 9.75 ಕೋಟಿ ರೂ.

5. ಖಲೀಲ್ ಅಹಮದ್ – 4.80 ಕೋಟಿ ರೂ.

6. ನೂರ್ ಅಹಮದ್ – 10 ಕೋಟಿ ರೂ.

7. ಸ್ಯಾಮ್ ಕರನ್​ – 2.40 ಕೋಟಿ ರೂ.

8. ವಿಜಯ್ ಶಂಕರ್ – 1.2 ಕೋಟಿ ರೂ.

9. ಶೇಕ್ ರಶೀದ್ - 30 ಲಕ್ಷ ರೂ.

10. ಅಂಶುಲ್ ಕಾಂಬೋಜ್ - 3.4 ಕೋಟಿ ರೂ.

11. ಮುಖೇಶ್ ಚೌಧರಿ - 30 ಲಕ್ಷ ರೂ.

12. ದೀಪಕ್ ಹೂಡಾ - 1.7 ಕೋಟಿ ರೂ.

13. ಗುರ್ಜಪ್ನೀತ್ ಸಿಂಗ್ - 2.2 ಕೋಟಿ ರೂ.

14. ನಾಥನ್ ಎಲ್ಲಿಸ್ - 2 ಕೋಟಿ ರೂ.

15. ಜೇಮಿ ಓವರ್ಟನ್ - 1.5 ಕೋಟಿ ರೂ.

16. ಕಮಲೇಶ್ ನಾಗರಕೋಟಿ - 30 ಲಕ್ಷ ರೂ.

17. ರಾಮಕೃಷ್ಣ ಘೋಷ್ - 30 ಲಕ್ಷ ರೂ.

18. ಶ್ರೇಯಸ್ ಗೋಪಾಲ್ - 30 ಲಕ್ಷ ರೂ.

19. ವಂಶ್ ಬೇಡಿ - 55 ಲಕ್ಷ ರೂ.

20. ಅಂದ್ರೆ ಸಿದ್ದಾರ್ಥ್ - 30 ಲಕ್ಷ ರೂ.

ಉಳಿಸಿಕೊಂಡಿರುವ ಆಟಗಾರರ ಪಟ್ಟಿ

ರುತುರಾಜ್ ಗಾಯಕ್ವಾಡ್, ಮತೀಶಾ ಪತಿರಾನ, ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಎಂ.ಎಸ್. ಧೋನಿ.

ರಿಲೀಸ್​ ಆದ ಆಟಗಾರರ ಪಟ್ಟಿ

ಮೊಯಿನ್ ಅಲಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರ್ಗೇಕರ್, ಅಜಯ್ ಮಂಡಲ್, ಮುಖೇಶ್ ಚೌಧರಿ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ಶರಚ್‌ಉಲ್ ತೀಕ್ಷಣ, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ರಿಚರ್ಡ್ ಗ್ಲೀಸನ್, ಅವನೀಶ್ ರಾವ್ ಅರವೆಲ್ಲಿ, ಡೆವೊನ್ ಕಾನ್ವೇ.