ಕ್ರೀಡೆ

ಕಿರಿಯರ ಫುಟ್​ಬಾಲ್​ಗೆ ರೊನಾಲ್ಡೊ ಪುತ್ರ ಪದಾರ್ಪಣೆ

ಅಂಟಲ್ಯ (ಟರ್ಕಿ): ಫುಟ್​ಬಾಲ್​ ಸೂಪರ್​ಸ್ಟಾರ್​ ಕ್ರಿಶ್ಚಿಯಾನೊ ರೊನಾಲ್ಡೊ ಅವರ ಹಿರಿಯ ಪುತ್ರ ಕ್ರಿಶ್ಚಿಯಾನೊ ಡಾಸ್​ ಸ್ಯಾಂಟೋಸ್​, ಪೋರ್ಚುಗಲ್​ 16 ವಯೋಮಿತಿ ತಂಡದ ಪರ ಗುರುವಾರ ಪದಾರ್ಪಣೆ ಮಾಡಿದರು.

ಕ್ರಿಶ್ಚಿಯಾನಿನ್ಹೋ ಎಂದೂ ಕರೆಯಲ್ಪಡುವ 15 ವರ್ಷದ ಸ್ಯಾಂಟೋಸ್​, ಟರ್ಕಿ ವಿರುದ್ಧದ ಫೆಡರೇಷನ್​ ಕಪ್​ ಪಂದ್ಯದ 90ನೇ ನಿಮಿಷದಲ್ಲಿ ಬದಲಿಗರಾಗಿ ಕಣಕ್ಕಿಳಿದರು. ಪಂದ್ಯದಲ್ಲಿ ಪೋರ್ಚುಗಲ್​ 2-0 ಅಂತರದಿಂದ ಜಯಿಸಿತು. ಸೌದಿ ಅರೇಬಿಯಾದಲ್ಲಿ ತಂದೆಯ ಅಲ್​ ನಾಸರ್​ ಕ್ಲಬ್​ನ ಯೂತ್​ ಅಕಾಡೆಮಿ ಪರವೂ ಆಡುವ ಸ್ಯಾಂಟೋಸ್​, ಈ ಹಿಂದೆ ಪೋರ್ಚುಗಲ್​ 15 ವಯೋಮಿತಿ ತಂಡದಲ್ಲೂ ಸ್ಥಾನ ಪಡೆದಿದ್ದರು.