ಕ್ರೀಡೆ

ಹಾರ್ದಿಕ್ ಪಾಂಡ್ಯ - ನತಾಶಾ ಕುಟುಂಬಕ್ಕೆ ಹೊಸ ಅತಿಥಿಗಳು..!

ಬೆಂಗಳೂರು: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟ್ಯಾನ್​ಕೋವಿಕ್​ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಈ ಜೋಡಿ ಶೀಘ್ರವೇ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಕರೊನಾ ವೈರಸ್​ ಭೀತಿಯಿಂದಾಗಿ ಮನೆಯಲ್ಲೇ ಲಾಕ್​ ಆಗಿರುವ ಹಾರ್ದಿಕ್ ​ಪಾಂಡ್ಯ ಕ್ರಿಕೆಟ್​ ಚಟುವಟಿಕೆಯಿಂದ ದೂರವಿದ್ದಾರೆ. ಇದರ ಬೇಸರ ಕಳೆಯಲು ಪಾಂಡ್ಯಗೆ ಇನ್​ಸ್ಟಾಗ್ರಾಂ ಪ್ರಮುಖ ಅಸ್ತ್ರವಾಗಿದೆ. ಮೂರು ಮುದ್ದು ನಾಯಿ ಮರಿಗಳನ್ನು ಖರೀದಿಸಿರುವ ಹಾರ್ದಿಕ್ ​ ಪಾಂಡ್ಯ, ಇಸ್ಟಾಗ್ರಾಂನಲ್ಲಿ ಪತ್ನಿ ನತಾಶಾ ಅವರನ್ನು ಕಾಲ ಮೇಲೆ ಮಲಗಿಸಿಕೊಂಡು, ನಾಯಿ ಮರಿಗಳ ಚಿತ್ರದೊಂದಿಗೆ ಫ್ಯಾಮಿಲಿ ಎಂದು ಬರೆದುಕೊಂಡಿದ್ದಾರೆ.

ನತಾಶಾ ಇತ್ತೀಚೆಗಷ್ಟೇ ಬೇಬಿ ಬಂಪ್​ ಫೋಟೋಗಳನ್ನು ಇನ್​ಸ್ಟಾದಲ್ಲಿ ಪ್ರಕಟಿಸಿದ್ದರು. ಈ ಜೋಡಿ ಪ್ರತಿದಿನ ಒಂದಿಲ್ಲೊಂದು ಚಿತ್ರ ಪ್ರಕಟಿಸುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತದೆ. ಲಾಕ್​ಡೌನ್​ ವೇಳೆ ಸರಳವಾಗಿ ವಿವಾಹವಾಗಿತ್ತು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಮೇ 31 ರಂದು ಹಾರ್ದಿಕ್ ಪಾಂಡ್ಯ ಹೇಳಿಕೊಂಡಿದ್ದರು. ಜತೆಗೆ ಸೀಮಂತ ಕಾರ್ಯಕೂಡ ಮಾಡಿದ್ದರು.

ಪತ್ನಿ ನತಾಶಾಗಾಗಿ ಮುದ್ದು ನಾಯಿಮರಿಗಳನ್ನು ಖರೀದಿಸಿರುವ ಹಾರ್ದಿಕ್ ಪಾಂಡ್ಯ, ಗರ್ಭಿಣಿ ಪತ್ನಿಯನ್ನು ಖುಷಿಯಿಂದ ಇಡಲು ಪ್ರಯತ್ನಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್​ ಪಾಂಡ್ಯ ಜತೆಗೂಡಿ ಜುಲೈ 7 ರಂದು ಎಂಎಸ್​ ಧೋನಿ ಜನ್ಮದಿನಕ್ಕೆ ಶುಭಾಶಯ ಕೋರಲು ರಾಂಚಿಗೆ ತೆರಳಿದ್ದರು.