ಕಾರಿನಲ್ಲಿ ಕುಳಿತು ಸಿಗರೇಟ್ ಸೇದಿದ ಯಜುವೇಂದರ್ ಚಹಲ್
- ಕಾರಿನಲ್ಲಿ ಕುಳಿತು ಸಿಗರೇಟ್ ಸೇದಿದ ಯಜುವೇಂದರ್ ಚಹಲ್
- ಸೋಶಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
- ಇದೇ ತಪ್ಪನ್ನು ಸಾಮಾನ್ಯ ಜನ ಮಾಡಿದ್ದರೆ ಟ್ರಾಫಿಕ್ ಪೊಲೀರು ಸುಮ್ಮನಿರುತ್ತಿದ್ದರಾ? ನೆಟ್ಟಿರಗ ಪ್ರಶ್ನೆ
- ಈ ವಿಡಿಯೋ ಬಗ್ಗೆ ಸ್ಪಷ್ಟಣೆ ನೀಡದ ಯುಜಿ
ವೈರಲ್: ಭಾರತದ ಪುರುಷರ ಕ್ರಿಕೆಟ್ ತಂಡದ ಖ್ಯಾತ ಸ್ಪಿನ್ ಬೌಲರ್ ಯಜುವೇಂದರ್ ಜಹಲ್ ಇತ್ತೀಚೆಗೆ ತಮ್ಮ ಬೌಲಿಂಗ್ನ ಬದಲಾಗಿ ಇತರೆ ವಿಷಯಗಳಿಂದಾಗಿಯೇ ಸುದ್ದಿಯಲ್ಲಿರುತ್ತಾರೆ. ಈಗ ಇ ಯುಜಿ (Yuzvendra Chahal Smoking) ಕಾರಿನಲ್ಲಿ ಕುಳಿತು ಸ್ಟೈಲಾಗಿ ಸಿಗರೇಟ್ನ್ನು ಸೇದುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸೋಶಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಭಾರತದ ಖ್ಯಾತ ಸ್ಪಿನ್ ಬೌಲರ್ ಯಜುವೇಂದರ್ ಜಹಲ್ ತಮ್ಮ ಐಶಾರಾಮಿ ಕಾರಿನ್ನು ಚಲಾಯಿಸುತ್ತಾ ಸಿಗರೇಟನ್ನು ಸೇದಿ ನಂತರ ರಸ್ತೆ ಮೇಲೆ ಎಸೆಯುವುದನ್ನು ನಾವು ನೋಡ ಬಹುದಾಗಿದೆ. ಆದರೆ ಈ ವಿಡಿಯೋನಲ್ಲಿ ಇರುವವನು ನಿಜವಾಗಿಯೂ ಯಜುವೇಂದರ್ ಜಹಲ್ನೇ ಅಥವಾ ಇಲ್ಲವೇ ಎಂದು ಇಲ್ಲಿವರೆಗೆ ತಿಳಿದು ಬಂದಿಲ್ಲ. ಹಾಯೆಗೇ ಈ ವಿಡಿಯೋವನ್ನು ಯಾವಾಗ ಸೆರೆ ಹಿಡಿದಿದ್ದು ಎನ್ನುವ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
ನಾನು ಕುಡಿತ ಬಿಟ್ಟಿದ್ದೇನೆ: ಚಹಲ್!
ಆರ್ಸಿಬಿಯ ಹಾಗೂ ದಕ್ಷಿಣಾಫ್ರಿಕಾ ತಂಡದ ಮಾಜಿ ಆಟಗಾರ ಎ.ಬಿ.ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನೆಲ್ನ ಸಂದರ್ಶನದಲ್ಲಿ ಮಾತನಾಡಿದ್ದ ಯುಜಿ, ನನಗೆ ಈಗ 35 ವಯಸ್ಸು, ನಾನು ಆರೋಗ್ಯವಂತನಾಗಿರಬೇಕು, ನನ್ನ ತಂಡಕ್ಕೆ ಶೇ.100 ಅಲ್ಲ 150 ರಷ್ಟು ಕೊಡುಗೆ ನೀಡಬೇಕು, ಹೀಗಾಗಿ ಕಳೆದ ಆರು ತಿಂಗಳಿನಿಂದ ಮಧ್ಯಪಾನವನ್ನು ನಿಲ್ಲಿಸಿದ್ದೆನೆ ಎಂದು ಅವರು ಹೇಳಿದ್ದರು.
ಸ್ಪಷ್ಟಣೆ ನೀಡದ ಯುಜಿ
ಈ ವಿಡಿಯೀ ಈದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಆದರೆ ಈ ಕುರಿತು ಯಜುವೇಂದರ್ ಜಹಲ್ ಇಲ್ಲಿವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನಾಗಲಿ ಅಥವಾ ಸ್ಪಷ್ಟಣೆಯನ್ನಾಗಲಿ ನೀಡಿಲ್ಲ. ಆದರೆ ಈ ವಿಡಿಯೋಗೆ ಜನರಿಂದ ತೀವ್ರವಾಗಿ ವಿರೋಧ ವ್ಯಕ್ತವಾಗುತ್ತಿದ್ದು, ಯುಜಿ ಬಹಳ ದಿನ ಮೌನವಾಗಿರುವುದು ಒಳ್ಳೆಯದಲ್ಲ ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಯಾಗವಾಗಿದೆ.
2026 ರ ಐಪಿಎಲ್ನಲ್ಲಿ ಚಹಲ್
ಈ ಭಾರಿಯ ಐಪಿಎಲ್ನಲ್ಲಿ ಯಜುವೇಂದರ್ ಚಹಲ್ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಕಣಕ್ಕೀಳಿದಿದ್ದಾರೆ. ಸದ್ಯ 3 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಚಹಲ್ ಎಸೆದಿರುವ 42 ಬೌಲ್ಗಳಲ್ಲಿ 49 ರನ್ಗಳನ್ನು ನೀಡಿ 3 ವಿಕೆಟ್ಗಳನ್ನು ಪಡೆದಿದ್ದಾರೆ. ಇಂದು (ಶನಿವಾರ, ಏ.11) ಐ.ಎಸ್.ಬಿಂದ್ರಾ ಕ್ರೀಡಾಂಗದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್ರೈಸರ್ಸ್ ತಂಡದ ವಿರುದ್ಧ ಮೈದಾನಕ್ಕಿಳಿಯಲಿದ್ದಾರೆ.
ನೆಟ್ಟಿಗರಿಂದ ತೀವ್ರ ತರಾಟೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾರ್ಯಪ್ರವರ್ತರಾಗಿದ್ದಾರೆ. ಪಾಪ ನಮ್ಮ ಯುಜಿ, ಹೆಂಡತಿ ಬಿಟ್ಟು ಹೋದ ನಂತರ ಡಿಪ್ರೆಶನ್ನಲ್ಲಿ ಇದ್ದಾರೆ ಅನ್ನಿಸುತ್ತೆ ಎಂದು ಒಬ್ಬರು ಹೇಳಿದರೆ, ಇದೇ ಕೆಲಸವನ್ನು ಸಾಮಾನ್ಯ ಜನ ಮಾಡಿದ್ದರೆ ನಮ್ಮ ಟ್ರಾಫಿಕ್ ಪೊಲೀಸರು ಸುಮ್ಮನೆ ಇರುತ್ತಿದ್ದರಾ? ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.
ನಿಮಗೆ ಸಿಗರೇಟು ಸೇದಬೇಕು, ಎಣ್ಣೆ ಕುಡಿಬೇಕು ಎನ್ನಿಸಿದರೆ ನಿಮ್ಮ ಮನೆಯಲ್ಲಿ ಹಾಯಾಗಿ ಮಾಡಿಕೊಳ್ಳಿ ಹೀಗೆ ರಸ್ತೆಯಲ್ಲಿ ಮಾಡುವುದು ಸರಿಯಲ್ಲ, ನಿಮ್ಮನ್ನು ಅದೆಷ್ಟೋ ಜನ ರೋಲ್ ಮಾಡೆಲ್ಗಳೆಂದು ಸ್ವೀಕರಿಸಿರುತ್ತಾರೆ ಎಂದು ಮತ್ತೊಬ್ಬರು ಬುದ್ಧಿವಾದ ಹೇಳಿದ್ದಾರೆ, (ಏಜನ್ಸೀಸ್).