ನಾನೇನು ಕ್ಯಾಪ್ಟನ್​ ಅಲ್ಲ ಹೋಗಿ ಹಾರ್ದಿಕ್​ ಬಳಿ ಕೇಳು... ತಿಲಕ್​ ಪ್ರಶ್ನೆಗೆ ಸೂರ್ಯಕುಮಾರ್​ ಖಡಕ್​ ಉತ್ತರ! Suryakumar Yadav  
ಕ್ರಿಕೆಟ್

ನಾನೇನು ಕ್ಯಾಪ್ಟನ್​ ಅಲ್ಲ ಹೋಗಿ ಹಾರ್ದಿಕ್​ ಬಳಿ ಕೇಳು... ತಿಲಕ್​ ಪ್ರಶ್ನೆಗೆ ಸೂರ್ಯಕುಮಾರ್​ ಖಡಕ್​ ಉತ್ತರ! Suryakumar Yadav

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾಭಿಮಾನಿಗಳು ಎದುರು ನೋಡುತ್ತಿರುವ 2026ನೇ ಸಾಲಿನ ಐಪಿಎಲ್ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ
  • ಈ ಮೆಗಾ ಟೂರ್ನಮೆಂಟ್ ಇದೇ ಮಾರ್ಚ್ 28 ರಿಂದ ಅದ್ಧೂರಿಯಾಗಿ ಆರಂಭವಾಗಲಿದೆ
  • ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ 6ನೇ ಬಾರಿ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ
Suryakumar Yadav : ಕ್ರೀಡಾಭಿಮಾನಿಗಳು ಎದುರು ನೋಡುತ್ತಿರುವ 2026ನೇ ಸಾಲಿನ ಐಪಿಎಲ್ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. ಈ ಮೆಗಾ ಟೂರ್ನಮೆಂಟ್ ಮಾರ್ಚ್ 28 ರಿಂದ ಆರಂಭವಾಗಲಿದೆ. ಐದು ಬಾರಿಯ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ ಆರನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಗುರಿ ಹೊಂದಿದೆ.
ಇತ್ತೀಚೆಗೆ ಟಿ20 ವಿಶ್ವಕಪ್-2026 ಗೆದ್ದ ಭಾರತೀಯ ತಂಡದ ನಾಲ್ವರು ಸ್ಟಾರ್ ಆಟಗಾರರಾದ ಸೂರ್ಯಕುಮಾರ್ ಯಾದವ್, ಜಸ್​ಪ್ರೀತ್​ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್‌ನಲ್ಲಿದ್ದಾರೆ. ಹೀಗಾಗಿ ಮುಂಬೈ ತಂಡ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.
ಅಂದಹಾಗೆ, ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ಟಿ20 ನಾಯಕ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅದೇ ರೀತಿ, ಹಾರ್ದಿಕ್ ಪಾಂಡ್ಯ ಕಳೆದ ಐಪಿಎಲ್​ ಸೀಸನ್​ನಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ. ಈ ಸೀಸನ್​ನಲ್ಲೂ ಹಾರ್ದಿಕ್​ ನಾಯಕರಾಗಿ ಮುಂದುವರಿದಿದ್ದಾರೆ.
ಟಿ20 ವಿಶ್ವಕಪ್​ನಲ್ಲಿ ಆಡುವಾಗ, ಸೂರ್ಯಕುಮಾರ್ ಯಾದವ್ ಅವರು ತಿಲಕ್ ವರ್ಮಾ ಅವರಿಗೆ ಬಡ್ತಿ ನೀಡಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೂರನೇ ಸ್ಥಾನಕ್ಕೆ ಕಳುಹಿಸಿದರು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಭಾಗವಹಿಸಿದ್ದಾಗ ಈ ಬಗ್ಗೆ ಮಾತನಾಡಿದ ತಿಲಕ್, ಸೂರ್ಯಕುಮಾರ್ ಯಾದವ್ ಅವರನ್ನು ಐಪಿಎಲ್‌ನಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತೀರಾ ಅಥವಾ ಇಲ್ಲವೇ ಎಂದು ಪ್ರಶ್ನಿಸಿದರು.
ತಿಲಕ್​ ಕೇಳಿದ ಪ್ರಶ್ನೆಗೆ ನಗಾಡಿದ ಸೂರ್ಯ, ನನಗೆ ಇದರ ಬಗ್ಗೆ ಗೊತ್ತಿಲ್ಲ. ನಾನು ಐಪಿಎಲ್‌ನಲ್ಲಿ ನಿಮ್ಮ ನಾಯಕನಲ್ಲ. ನೀವು ಹಾರ್ದಿಕ್ ಅವರನ್ನು ಇದರ ಬಗ್ಗೆ ಕೇಳಬೇಕು ಎಂದು ಹೇಳಿದರು. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅಂದಹಾಗೆ, 19ನೇ ಆವೃತ್ತಿಯು ಐಪಿಎಲ್​, ಮಾರ್ಚ್ 28ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 7.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ, (ಏಜೆನ್ಸೀಸ್​).