ಅಲ್ಲಿವರೆಗೆ ಆಡುವುದು ಕಷ್ಟ; ಆದರೆ ಖಂಡಿತ ಪ್ರಯತ್ನಿಸುತ್ತೆನೆ ಎಂದ ಥಲಾ
- ಬೆಂಗಳೂರಿನಲ್ಲಿ ನಡೆದ ಸಿಎಸ್‌ಕೆ 'ರೋರ್ 26' ಈವೆಂಟ್
- 60 ವರ್ಷದವರೆಗೂ ಆಡಿ ಎಂದು ಧೋನಿಗೆ ವಿನಂತಿಸಿದ ನಟ ಶಿವ ಕಾರ್ತಿಕೇಯನ್
- ಅಲ್ಲಿವರೆಗೆ ಆಡುವುದು ಕಷ್ಟ; ಆದರೆ ಖಂಡಿತ ಪ್ರಯತ್ನಿಸುತ್ತೆನೆ ಎಂದ ಥಲಾ
ಚೆನ್ನೈ: ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಕ್ರಿಕೆಟ್ ಹಬ್ಬ ಐಪಿಎಲ್ ಆರಂಭವಾಗಲಿದ್ದು, ಜನ ತಮ್ಮ ನೆಚ್ಚಿನ ತಂಡ ಹಾಗೂ ಆಟಗಾರರನ್ನು ಮೈದಾನದಲ್ಲಿ ಮಾಡಲಿರುವ ಮೋಡಿಯನ್ನು ನೋಡಲು ಕಾತುರರಾಗಿದ್ದಾರೆ ಎಂದರೆ ಸುಳ್ಳಲ್ಲ. ಮಾರ್ಚ್ 28 ರಂದು ಪ್ರಾರಂಭವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯ ಆರ್ಸಿಬಿ ಮತ್ತು ಸನ್ರೈಸರ್ಸ ನಡುವೆ ನಡೆಯಲಿದ್ದು ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗುತ್ತಿದೆ ಎಂದರೆ ನೀವು ನಂಬಲೇಬೇಕು.
ಭಾರತೀಯರ ಪಾಲಿಗೆ ಈ ಐಪಿಎಲ್ ಕೇವಲ ಒಂದು ಕ್ರಿಕೆಟ್ ಟೂರ್ನಾಮೆಂಟ್ ಅಲ್ಲ, ಬದಲಿಗೆ ಇದೊಂದು ದೇವಾಲಯದ ಸಮಾನವಾದ ಭಯ,ಭಕ್ತಿಯನ್ನು ಹಾಗೂ ಇಲ್ಲಿ ಆಡುವ ಆಟಗಾರರನ್ನು ದೇವರಂತೆ ಪೂಜಿಸುವ ಪರಿಪಾಠ ಬಹಳ ಹಿಂದಿನಿಂದ ನಡೆದು ಬಂದಿದೆ.
ಅದೇ ರೀತಿ ಭಾರತ ಹಾಗೂ ಸಿಎಸ್‌ಕೆ ತಂಡದ ಪರವಾಗಿ ಅತ್ಯಂತ ಯಶಸ್ವಿ ಕ್ಯಾಪ್ಟನ್ ಹಾಗೂ ವಿಕೆಟ್ ಕೀಪರ್ ಆಗಿ ಮಿಂಚಿದ್ದ ಎಂ.ಎಸ್. ಧೋನಿ (MS Dhoni) ಯವರ ಇತ್ತೀಚಿನ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
60 ವರ್ಷದ ವರೆಗೆ ಐಪಿಎಲ್ ಆಡುತ್ತಿರಾ?
ಭಾನುವಾರ (ಮಾ.22) ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಅಭಿಮಾನಿಗಳ ಬೇಟಿಯ ವೇಳೆ ಧೋನಿ ನೀಡಿರುವ ರಿಯಾಕ್ಷನ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಈ ಸಂದರ್ಭದಲ್ಲಿ ನಟ ಶಿವ ಕಾರ್ತಿಕೇಯನ್, ನೀವು ಸಿಎಸ್‌ಕೆ ತಂಡವನ್ನು ಆರಂಭದಿಂದ ಮುನ್ನಡೆಸಿಕೊಂಡು ಬಂದಿದ್ದಿರಿ, ನೀವು 60 ವರ್ಷ ಆಗುವವರೆಗೆ ತಂಡದಲ್ಲಿ ಇರಬೇಕು ಎನ್ನುವುದು ನಿಮ್ಮ ಸಹ ಆಟಗಾರರ ಹಾಗೂ ನಿಮ್ಮ ಅಭಿಮಾನಿಗಳ ಆಸೆ ಯಾಗಿದೆ. ಇದಕ್ಕೆ ನಿವೇನು ಹೇಳುತ್ತಿರಿ ಎಂದು ಶಿವ ಕಾರ್ತಿಕೇಯನ್ ಕೇಳಿದ್ದಾರೆ.
ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಎಂ.ಎಸ್. ಧೋನಿ, 60 ವರ್ಷದ ವರೆಗೆ ತಂಡದಲ್ಲಿ ಆಡುವುದು ಬಹಳ ಕಷ್ಟಕರ ಸಂಗತಿಯಾಗಿದೆ. ಆದರೆ ನಾನು ಖಂಡಿತವಾಗಿ ಪ್ರಯತ್ನಿಸುತ್ತೆನೆ ಎಂದು ಧೋನಿ ಹೇಳಿದ್ದೆ ತಡ ಕ್ರೀಡಾಂಗಣದಲ್ಲಿದ್ದ ಜನ ಹುಚ್ಚೆದ್ದು ಕುಣಿದಿದ್ದಾರೆ.
ಇದು ಧೋನಿಯ ಕೊನೆಯ ಐಪಿಎಲ್: ಉತ್ತಪ್ಪ
ಕೆಲ ದಿನಗಳ ಹಿಂದೆ ಭಾರತ ಹಾಗೂ ಸಿಎಸ್‌ಕೆ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ, ನನ್ನ ಪ್ರಕಾರ ಎಂ.ಎಸ್.ಧೋನಿ ಮೈದಾನಕ್ಕಿಳೀಯುವುದು ಇದೇ ಕೊನೆಯೆಂದು ಭಾವಿಸುತ್ತೇನೆ ಎಂದು ಹೇಳಿದ್ದರು.
ಧೋನಿಗೆ ಈಗ 44 ವರ್ಷವಾಗಿದೆ ಹಾಗೆಯೇ ಅವರು ಈಗ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ ಹೀಗಾಗಿ ಈ ವರ್ಷದ ಐಪಿಎಲ್ ಧೋನಿಯ ಕೊನೆಯ ಐಪಿಎಲ್ ಆಗಲಿದೆ ಎಂದು ಅವರು ತಮ್ಮ ಅಭಿಪ್ರಾಯ ತಿಳಿಸಿದ್ದರು,(ಏಜನ್ಸೀಸ್).