ಕ್ರಿಕೆಟ್ ಬಿಟ್ಟು ಅಡುಗೆ ಮನೆ ಸೇರಿದ ಬಾಬರ್ ಅಜಂ: ಪಾಕಿಸ್ತಾನದಲ್ಲಿ ಒಂದು ಢಾಬಾ ತೆಗಿ ಎಂದ ಟ್ರೋಲರ್ಸ್​! Babar Azam Cooking Video

ಇಂಜುರಿ ಕಾರಣದಿಂದ ಕ್ರಿಕೆಟ್‌ನಿಂದ ದೂರವಿರುವ ಬಾಬರ್ ಅಜಂ
ಇಂಜುರಿ ಕಾರಣದಿಂದ ಕ್ರಿಕೆಟ್‌ನಿಂದ ದೂರವಿರುವ ಬಾಬರ್ ಅಜಂ
Published on

ಪ್ರಮುಖ ಮುಖ್ಯಾಂಶಗಳು

  • ಇಂಜುರಿ ಕಾರಣದಿಂದ ಕ್ರಿಕೆಟ್‌ನಿಂದ ದೂರವಿರುವ ಬಾಬರ್ ಅಜಂ
  • ಈದ್ ಪ್ರಯುಕ್ತ ಅಡುಗೆ ಮಾಡಿದ ವಿಡಿಯೋ ವೈರಲ್​
  • ಕ್ರಿಕೆಟ್ ಬಿಟ್ಟು ಢಾಬಾ ತೆರೆಯಿರಿ ಎಂದ ಟ್ರೋಲರ್ಸ
ಪಾಕಿಸ್ತಾನ: ಪಾಕಿಸ್ತಾನ ಕ್ರಿಕೆಟ್​ ತಂಡದ ಬ್ಯಾಟರ್​ ಬಾಬರ್​ ಅಜಂ ಜೀವನದಲ್ಲಿ ಸದ್ಯ ಯಾವುದು ಒಳ್ಳೆಯ ಸಂಗತಿಗಳು ನಡೆಯುತ್ತಿಲ್ಲ. ಇಂಜುರಿ ಕಾರಣದಿಂದ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ಬಾಬರ್​ ಈಗ ತನ್ನ ಅಡುಗೆ ವಿಡಿಯೋ (Babar Azam Cooking Video) ಮೂಲಕ ಮತ್ತೆ ಟ್ರೋಲರ್​ಗಳ ದಾಳಿಗೆ ತುತ್ತಾಗಿದ್ದಾರೆ.

ಕ್ರಿಕೆಟ್​ನಿಂದ ದೂರ ಸರಿದ ಬಾಬರ್​!

ಇಂಜುರಿ ಕಾರಣದಿಂದ ಬಾಂಗ್ಲಾ ವಿರುದ್ಧದ ಸರಣಿಯಿಂದ ಹೊರಬಂದಿರುವ ಬಾಬರ್ ಪಾಕಿಸ್ತಾನಲ್ಲಿ ನಡೆಯುವ ನ್ಯಾಷನಲ್​ ಟಿ20 ಕಪ್​ನಲ್ಲಿ ಸಹ ಮೈದಾನಕ್ಕಿಳಿಯುವುದಿಲ್ಲ ಎಂದು ತಿಳಿದುಬಂದಿದೆ.
ಈ ಹಿಂದೆ ನಡೆದಿದ್ದ ಟಿ-20 ವಿಶ್ವಕಪ್​ನಲ್ಲಿ ಸಹ ಬಾಬರ್​ ಅಜಂ ನಿರಸ ಪ್ರದರ್ಶನ ನೀಡಿ ಟ್ರೋಲರ್​ಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಭಾರತದೊಂದಿಗಿನ ನಿರ್ಣಾಯಕ ಪಂದ್ಯದಲ್ಲಿ ಬಾಬರ್​ ಕೇವಲ 5 ರನ್​ಗಳಿಗೆ ಔಟಾಗಿ ಪಂದ್ಯ ಸೋಲುವಲ್ಲಿ ಕಾರಣಿಭೂತರಾಗಿದ್ದರು.

ಈದ್​ ಪ್ರಯುಕ್ತ ಅಡುಗೆ ಮಾಡಿದ ಬಾಬರ್​

ಇಸ್ಲಾಂ ಧರ್ಮದವರ ಪವಿತ್ರ ಹಬ್ಬವಾದ ಈದ್​ ಪ್ರಯುಕ್ತ ಬಾಬರ್​ ಅಜಂ ಶೀರ್​ ಕೂರ್ಮಾವನ್ನು ಸಿದ್ಧ ಪಡಿಸಿದ್ದು, ಇದನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನಿಗಳ ಸಾಂಪ್ರದಾಯಿಕ ಸಿಹಿ ಅಡುಗೆಯಾದ ಶೀರ್​ ಕೂರ್ಮಾವನ್ನು ತಯಾರಿಸಿದೆ ಜನ ತನನ್ನು ಮೆಚ್ಚಿಕೊಳ್ಳುತ್ತಾರೆ ಎನ್ನುವುದು ಬಾಬರ್​ ಅವರ ಭಾವನೆಯಾಗಿರಬೇಕು.

ನೀನು ಅಡುಗೆ ಮಾಡುವುದಕ್ಕೆ ಲಾಯಕ್ಕು!

ಬಾಬರ್​ ಅಡುಗೆ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ, ಆದರೆ ಅಭಿಮಾನಿಗಳು ಬಾಬರ್​ ಅವರ ಈ ಪ್ರಯತ್ನವನ್ನು ಶ್ಲಾಘಿಸುವ ಬದಲು ಟ್ರೋಲ್​ ಮಾಡಲು ಇಳಿದಿದ್ದಾರೆ.
ಹೇಗೂ ನಿನ್ನ ಜೀವನಲ್ಲಿ ಕ್ರಿಕೆಟ್​ ಮುಗಿದ ಅಧ್ಯಾಯವಾಗಿದೆ, ನೀನು ಒಂದು ಢಾಭಾ ತೆರೆಯುವುದು ಒಳ್ಳೆಯದೆಂದು ಒಬ್ಬರು ಕಮೆಂಟ್​ ಮಾಡಿದರೆ, ಬಾಬರ್​ ಇನ್ನೂ ಕೆಲವೇ ದಿನಗಳಲ್ಲಿ ಈ ಅಡುಗೆ ಕ್ಷೇತ್ರವನ್ನು ಹಾಳುಗೆಡವಲಿದ್ದಾನೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಇನ್ನೂ ಕೆಲವರು ನೀನು ಕ್ರಿಕೆಟ್​ನಿಂದ ನಿವೃತ್ತಿ ಪಡೆದು ಅಡುಗೆ ಮನೆ ಸೇರುವುದೇ ಉತ್ತಮ ಎಂದು ಮಾರ್ಮಿಕವಾಗಿ ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net