Sarfaraz Khan: ಕಳೆದ ಬಾರಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಮೈದಾನದಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದ ವೇಳೆಯೇ ಭಾರತ ತಂಡದಲ್ಲಿ ಮತ್ತೊಮ್ಮೆ ಅವಕಾಶದಿಂದ ವಂಚಿತರಾದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್, ತಮ್ಮನ್ನು ಆಯ್ಕೆ ಪ್ರಕ್ರಿಯೆಯಿಂದ ಕೈಬಿಟ್ಟವರ ವಿರುದ್ಧ ಭಾರಿ ಬೇಸರ ಹೊರಹಾಕಿದ್ದರು. ಅದಾದ ಮೇಲೂ ತಂಡಕ್ಕೆ ಕಮ್ಬ್ಯಾಕ್ ಮಾಡಲು 10 ಕೆಜಿ ತೂಕ ಇಳಿಸಿಕೊಂಡಿದ್ದಲ್ಲದೇ, ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಇನ್ನಿಂಗ್ಸ್ ನೀಡಿದ ಸಾಬೀತುಪಡಿಸಿದರೂ ಸಹ ತಮ್ಮನ್ನು ಸದಾ ಮೂಲೆಗುಂಪು ಮಾಡುತ್ತಿರುವ ಆಯ್ಕೆಗಾರರ ವಿರುದ್ಧ ಇದೀಗ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೊದಲ ದಿನದ ಆಟದ ಬಳಿಕ ಮುಕ್ತವಾಗಿ ಮಾತನಾಡಿದ ಸರ್ಫರಾಜ್, ನಾನ್ಯಾಕೆ ಇಷ್ಟೊಂದು ಕಷ್ಟ ಪಡಬೇಕು? ದೇಶೀಯ ಕ್ರಿಕೆಟ್ನಲ್ಲಿ ಫಿಟ್ನೆಸ್ ಸುಧಾರಿಸಿಕೊಂಡು, ಸತತವಾಗಿ ರನ್ಗಳನ್ನು ಗಳಿಸಿದರೂ ಭಾರತೀಯ ಟೆಸ್ಟ್ ತಂಡಕ್ಕೆ ಮರಳಲು ನನಗೆ ಅವಕಾಶವೇ ಕೊಡುತ್ತಿಲ್ಲ. ಎಷ್ಟೆಲ್ಲ ನಡೆದುಹೋಗಿದೆ. ಪ್ರತಿದಿನ ಬೆಳಗ್ಗೆ ಎದ್ದಾಗ ನಾನೇ ನನ್ನನ್ನು ಕೇಳಿಕೊಳ್ಳುವ ಮೊದಲ ಪ್ರಶ್ನೆಯೇ, ನಾನು ಏಕಿಷ್ಟು ಕಷ್ಟ ಬೀಳಬೇಕು? ಎಂದಿದ್ದಾರೆ.
ಇದೇ ನನ್ನ ದಿನಚರಿ ಪ್ರತಿದಿನ ಬೆಳಗ್ಗೆ 5:00 ಗಂಟೆಗೆ ಆರಂಭವಾಗುತ್ತದೆ. ನಾನು ಟೀಮ್ ಇಂಡಿಯಾ ಪರ ಆಡಿದ್ದೇನೆ. ಸಾಮಾನ್ಯ ದಿನಗಳಲ್ಲಿ, ಮುಂಬೈ ಪರ ರಣಜಿ ಟ್ರೋಫಿಯನ್ನು ಆಡುತ್ತೇನೆ. ನಾನು 30, 50 ಮತ್ತು 100 ರನ್ಗಳನ್ನು ಹೊಡೆಯಬಲ್ಲೆ. ಈ ಸಮಯದಲ್ಲಿ, ನನ್ನ ತಂದೆ ನೌಶದ್ ಖಾನ್ ನನಗೆ ಸ್ಫೂರ್ತಿ. ಯಾರಾದರೂ ಸರ್ಫರಾಜ್ನನ್ನು ನೋಡಬೇಕೆಂದರೆ, ನಮ್ಮ ಮನೆಯ ವಿಳಾಸ ಹುಡುಕಿ ಬರುವ ಅಗತ್ಯವಿಲ್ಲ. ಬದಲಿಗೆ, ನೇರವಾಗಿ ಆಜದ್ ಮೈದಾನ ಅಥವಾ ಕ್ರಾಸ್ ಮೈದಾನಕ್ಕೆ ಬಂದರೆ ಸಾಕು ಬೆಳಗ್ಗೆ 6 ಗಂಟೆಯಿಂದ ಇಲ್ಲೇ ಇರುತ್ತೇನೆ. ಇದು ಎಲ್ಲರಿಗೂ ಗೊತ್ತಿದೆ ಎಂದರು.
ರಾಷ್ಟ್ರೀಯ ತಂಡದ ಆಯ್ಕೆಗಾರರು ನನಗೆ ದೂರವಾಣಿ ಕರೆ ಮಾಡಿ, ಬನ್ನಿ ಆಡಿ ಎಂದರೆ, ಖಂಡಿತ ಭಾರತ ಪರ ಆಡುತ್ತೇನೆ. ಇಲ್ಲವಾದರೆ, ಹೀಗೆ ರಣಜಿಯಲ್ಲೇ ಆಡಿಕೊಂಡು ಇರುತ್ತೇನೆ. ನನಗೆ ಇನ್ನೂ ಒಂದು ಪ್ರಶ್ನೆ ಇದೆ. ಇದೇ ನಾನು ದಕ್ಷಿಣ ಆಫ್ರಿಕಾಕ್ಕೆ ಹೋದಾಗ, ಟೀಮ್ ಇಂಡಿಯಾ ಪರ 60 ಎಸೆತಗಳಲ್ಲಿ ಶತಕ ಬಾರಿಸಿದೆ ಮತ್ತು ಅದೇ ಇಂಗ್ಲೆಂಡ್ಗೆ ಹೋದಾಗ 60 ಎಸೆತಗಳಲ್ಲಿ 100 ರನ್ ಗಳಿಸಿದ್ದೆ (76 ಎಸೆತಗಳಲ್ಲಿ 101). ಇಲ್ಲಿ ನಾನು ಭಾರತದ ಹೊರಗೆ ರನ್ ಗಳಿಸಿಲ್ಲ ಎಂದಲ್ಲ. ನಾನು ರನ್ ದಾಖಲಿಸಿದ್ದೇನೆ. ಅದು ಪರವಾಗಿಲ್ಲ, ಇದೆಲ್ಲವೂ ಅವರ ನೋಟ. ಇದು ಅವರ ದೃಷ್ಟಿಕೋನ. ನನ್ನ ಕೆಲಸ ಏನಿದ್ದರೂ ಕ್ರಿಕೆಟ್ ಆಡುವುದು ಅಷ್ಟೇ.
ನನ್ನ ತಂದೆಯನ್ನು ಬಿಟ್ಟರೆ ನನಗೆ ಯಾರೊಬ್ಬರೂ ಇಲ್ಲಿಯವರೆಗೆ ಸಪೋರ್ಟ್ ಮಾಡಿಲ್ಲ. ತುಂಬಾ ಕಷ್ಟಪಟ್ಟು ಅಪ್ಪನ ಆಸೆಯನ್ನು ಈಡೇರಿಸಿದ್ದೇನೆ. ಈಗಿನ ಕಾಲಘಟ್ಟದಲ್ಲಿ ಟೀಮ್ ಇಂಡಿಯಾ ಪರ ಆಡುವುದು ಅಷ್ಟು ಸುಲಭದ ಮಾತಲ್ಲ. ನನ್ನ ಒಂದು ಅಥವಾ ಎರಡು ಬಾರಿ ದೇಶಿಯ ಕ್ರಿಕೆಟ್ನಲ್ಲಿ ರನ್ ಗಳಿಸಿಲ್ಲ. 250 ಮತ್ತು 300 ರನ್ಗಳನ್ನು ಬಾರಿಸಿದ್ದೇನೆ. ತಂಡದಲ್ಲಿ ಸ್ಥಾನ ಪಡೆಯಲು ತುಂಬಾ ಕಷ್ಟಪಡುತ್ತಿದ್ದೇನೆ ಎಂದು ತೀವ್ರ ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).