ಪಂದ್ಯದ ವೇಳೆ ಉಗುರನ್ನು ಕತ್ತರಿಸುತ್ತಾ ಕುಳಿತ ಆಶಿಶ್ ನೆಹ್ರಾ
- ಆರ್ಸಿಬಿ ಗುಜರಾತ್ ನಡುವೆ ನಡೆದಿದ್ದ ಫೈನಲ್ ಪಂದ್ಯ
- ಸತತ ಎರಡನೇ ಭಾರಿಗೆ ಚಾಂಪಿಯನ್ಸ್ ಆದ ಬೆಂಗಳೂರು ತಂಡ
- ಪಂದ್ಯದ ವೇಳೆ ಉಗುರನ್ನು ಕತ್ತರಿಸುತ್ತಾ ಕುಳಿತ ಆಶಿಶ್ ನೆಹ್ರಾ
- ಗುಜರಾತ್ ಕೋಚ್ ವರ್ತನೆಗೆ ಫ್ಯಾನ್ಸ್ ಗರಂ
ಅಹಮದಾಬಾದ್: ಭಾನುವಾರ (ಮೇ.31) ಅಹಮದಾಬಾದ್ನಲ್ಲಿ ನಡೆದ ಐಪಿಎಲ್ 2026 ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸುವ ಮೂಲಕ ಸತತ ಎರಡನೇ ಭಾರಿಗೆ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿ ಕೊಂಡಿದೆ.
ಐಪಿಎಲ್ನ ಫೈನಲ್ ಪಂದ್ಯ ಅದರಲ್ಲೂ ತಾವು ಕೆಲಸ ಮಾಡುತ್ತಿರುವ, ತಮ್ಮ ನೇತೃತ್ವವಿರುವ ತಂಡ ಸೋಲುತ್ತಿದೆ ಎಂದರೆ ಅಲ್ಲಿರುವ ಆಟಗಾರರಿಗೆ ಬೇಸರ ಅಥವಾ ಗಂಭೀರರಾಗಿ ಇರುತ್ತಾರೆ.ಆದರೆ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಫೈನಲ್ ಪಂದ್ಯದ ವೇಳೆ ಮಾಡಿರುವ ನಿರ್ಲಜ್ಜ ಕೆಲಸವೊಂದು ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ (Ashish Nehra Viral Video) ಆಗುತ್ತಿದೆ.
ಪಂದ್ಯ ಹಾಳಾಗಲಿ ಉಗುರೊಂದು ಕ್ಲೀನ್ ಇರಲಿ!
ಒಂದು ಕಡೆ ಫೈನಲ್ ಪಂದ್ಯದ ಕಾವೇರುತ್ತಾ, ಬಾರಿಸಬೇಕಿದ್ದ ರನ್ನ್ನು ಗಳಿಸಲು ಸಾಧ್ಯವಾಗಿಲ್ಲ ಎಂಬ ಚಿಂತೆಯಲ್ಲಿ ಗುಜರಾತ್ ತಂಡವಿದ್ದರೆ ಇತ್ತ, ಅವರ ಕೋಚ್ ಆಶಿಶ್ ನೆಹ್ರಾ ಮಾತ್ರ ಯಾವುದೇ ಚಿಂತೆಯೇ ಇಲ್ಲವೆಂಬಂತೆ ಹಾಯಾಗಿ ತಮ್ಮ ಕಾಲಿನ ಉಗುರುಗಳನ್ನು ಕತ್ತರಿಸಿಕೊಳ್ಳುತ್ತಿರುವ ದೃಶ್ಯ ಕ್ಯಾಮರಾದ ಕಣ್ಣಲ್ಲಿ ಸೆರೆಯಾಗಿದೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಗುಜರಾತ್ ಟೈಟಾನ್ಸ್ ಅಭಿಮಾನಿಗಳು ಕೋಚ್ಗೆ ಛೀಮಾರಿ ಹಾಕುತ್ತಿದ್ದಾರೆ.
ಆಶಿಶ್ ನೆಹ್ರಾ ಅವರ ಈ ಉಗುರು ಕಟಿಂಗ್ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗಿದ್ದು, ಈಗಾಗಲೇ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಇವನಿಗೆ ತನ್ನ ತಂಡದ ಮೇಲೆ, ಆಟಗಾರರ ಮೇಲೆ ಒಂದು ಚೂರು ಜವಾಬ್ದಾರಿಯೇ ಇಲ್ಲ, ಇಂತಹ ನಿರ್ಲಜ್ಜ ಕೋಚ್ನ್ನು ನಾನು ನೋಡಿಯೇ ಇಲ್ಲ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಹೇಗೂ ತಂಡ ಸೋಲುತ್ತಿದೆ ಸುಮ್ಮನೆ ಕುರುವ ಬದಲು ಉಗುರನ್ನಾದರೂ ತೆಗೆದುಕೊಂಡರಾಯಿತು ಎಂದು ಕೋಚ್ ಸಾಹೇಬರು ಲೆಕ್ಕ ಹಾಕಿದ್ದಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇಂತಹ ಬೇಜವಾಬ್ದಾರಿ ಕೋಚ್ ಇಟ್ಟಕೊಂಡು ಈ ತಂಡ ಫೈನಲ್ವರೆಗೆ ಬಂದಿದ್ದೆ ಒಂದು ಸಾಧನೆ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಬರೆದುಕೊಂಡಿದ್ದಾರೆ.
ಗೆದ್ದು ಬೀಗಿದ ಆರ್ಸಿಬಿ!
ಈ ಭಾರಿಯ ಐಪಿಎಲ್ ಸೀಸನ್ನಿನ ಹಾಟ್ ಫೇವರೆಟ್ ಟೀಮ್ ಆಗಿದ್ದ ಆರ್ಸಿಬಿ ತಂಡ, ಗುಜರಾತ್ ಟೈಟಾನ್ಸ್ ತಂಡವನ್ನು ತವರಿನಲ್ಲಿಯೇ ಸೋಲಿಸಿ, ಸತತ ಎರಡನೇ ಭಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ, ಈ ಸಲಾನೂ ಕಪ್ ನಮ್ದೇ ಎಂದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ಉತ್ತಮ ಆರಂಭವನ್ನು ಪಡೆಯುದ ಕಾರಣ ಹಾಗೂ ಬ್ಯಾಟ್ಸ್ಮನ್ಗಳ ವಿಫಲ ಪ್ರದರ್ಶನದ ಹಿನ್ನಲೆ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ವಿಫಲಾಯಿತು. ಸೀಮಿತ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ ಕೇವಲ 155 ಗಳಿಸಿದ ಗುಜರಾತ್ ಪರ ವಾಷಿಂಗ್ಟನ್ ಸುಂದರ್ ಅಜೇಯ 50 ಗಳಿಸಿದರೆ ಇನ್ಯಾರಿಂದಲೂ ಹೇಳಿಕೊಳ್ಳುವಂತ ಪ್ರದರ್ಶನ ದೊರೆಯಲಿಲ್ಲ.
ಸುಲಭ ಗುರಿಯನ್ನು ಬೆನ್ನತ್ತಿದ್ದ ಬೆಂಗಳೂರು ತಂಡ 18 ಓವರ್ಗಳಲ್ಲಿ ಗುರಿಯನ್ನು ತಲುಪಲು ಯಶಸ್ವಿಯಾಯಿತು. ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ 16 ಎಸೆತಗಳಲ್ಲಿ 32 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು, (ಏಜನ್ಸೀಸ್).