ಪ್ರೇಮಾನಂದ ಮಹಾರಾಜರ ಆಶೀರ್ವಾದ ಪಡೆದ ಸ್ಟಾರ್ ಕಪಲ್ಸ್
- ಬೃಂದಾವನದ ಬಂದ ವಿರುಷ್ಕಾ ಜೋಡಿ
- ಪ್ರೇಮಾನಂದ ಮಹಾರಾಜರ ಆಶೀರ್ವಾದ ಪಡೆದ ಸ್ಟಾರ್ ಕಪಲ್ಸ್
- ಲಿಜ್ಲಾಜ್ ಫೋಟೊಗೆ ಲೈಕ್ ಕೊಟ್ಟು ಸುದ್ದಿಯಲ್ಲಿದ್ದ ವಿರಾಟ್!
ಕ್ರಿಕೆಟ್: ದೇಶದಾದ್ಯಂತ ಇಂದು ಅಕ್ಷಯ ತೃತೀಯಾವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ಕ್ರಿಕೆಟ್ ಆಟಗಾರ ರನ್ ಮಷಿನ್ ಕಿಂಗ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ (Virushka in Vrindavan) ಬೃದಾಂವನದ ಪ್ರೇಮಾನಂದ ಮಹಾರಾಜರ ದರ್ಶನಕ್ಕಾಗಿ ಬಂದಿದ್ದಾರೆಂದು ಹೇಳಲಾಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಹರಿದಾಡಿತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ವಿರಾಟ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮರೂನ್ ಮತ್ತು ಬಿಳಿ ಬಣ್ಣದ ಬಟ್ಟೆ ತೊಟ್ಟಿದ್ದರೆ, ಪತ್ನಿ ಅನುಷ್ಕಾ ಬಿಳಿ ಬಣ್ಣದ ಸಲ್ವಾರ್ ಸೂಟ್ ಧರಿಸಿರುವುದನ್ನು ವಿಡಿಯೋನಲ್ಲಿ ನೋಡಬಹುದಾಗಿದೆ. ಇತ್ತೀಚೆಗೆ ವಿರಾಟ್ ಜರ್ಮನ್ ಸುಂದರಿ ಲಿಜ್ಲಾಜ್ ಅವರ ಫೋಟೊಗೆ ಲೈಕ್ ಕೊಟ್ಟು ಸಖತ್ ಸುದ್ದಿಯಲ್ಲಿದ್ದರು, ಈಗ ಇದನ್ನು ಪರಿಹಾರ ಮಾಡಿಕೊಳ್ಳಲು ಪ್ರೇಮಾನಂದರ ದರ್ಶನಕ್ಕೆ ಬಂದಿದ್ದಾರೆಂದು ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.
ವಿರಾಟ್ ಲೈಕ್ಸ್ ಲಿಜ್ಲಾಜ್!
ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ವಿರಾಟ್ ಕೊಹ್ಲಿ ಜರ್ಮನಿ ದೇಶ್ ಲಿಜ್ಲಾಜ್ ಎನ್ನುವವರ ಫೋಟೊವನ್ನು ಲೈಕ್ ಮಾಡಿ ನಂತರ ಅನ್ಲೈಕ್ ಮಾಡಿದ್ದರು. ಆದರೆ ಈ ಸುದ್ದಿ ಸೋಶಿಯಲ್ ಮೀಡಿಯಾನಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಗೆ ಸ್ಪಷ್ಟಿಕರಣ ಕೊಟ್ಟಿದ್ದ ಕೊಹ್ಲಿ, ನಾನು ಯಾರ ಫೋಟೊಗೂ ಲೈಕ್ ಕೊಟ್ಟಿಲ್ಲ, ಇದು ತಾಂತ್ರಿಕ ದೋಷವೆಂದು ಹೇಳಿದ್ದರು.
ನನಗೆ ಅವರ ಮೇಲೆ ಬೇಸರವಿಲ್ಲ: ಲಿಜ್ಲಾಜ್
ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದ ಲಿಜ್ಲಾಜ್, ನನಗೆ ಕ್ರಿಕೆಟ್ ಆಗಲಿ, ಕ್ರಿಕೆಟ್ ಆಟಗಾರರ ಬಗ್ಗೆ ಏನೂ ತಿಳಿದಿಲ್ಲ, ಆದರೆ ಇವತ್ತು ಸೋಶಿಯಲ್ ಮೀಡಿಯಾನಲ್ಲಿ ನನ್ನದೇ ಚರ್ಚೆಯಾಗಿತ್ತು. ನನ್ನ ಫೋಟೊಗೆ ಅವರು ಲೈಕ್ ಕೊಟ್ಟು ನಂತರ ಅನ್ಲೈಕ್ ಮಾಡಿದಕ್ಕೆ ನನಗೇನು ಬೇಸರಲಿಲ್ಲ. ಜನರು ಅವರನ್ನು ಸುಮ್ಮನೆ ಕಾಡಿಸುವುದನ್ನು ಬೀಡಬೇಕು ಎಂದು ಲಿಜ್ ಮನವಿ ಮಾಡಿದ್ದು, ಸಾದ್ಯವಾದರೆ ನಾನು ಆರ್ಸಿಬಿ ಮ್ಯಾಚ್ ನೋಡಲು ಭಾರತಕ್ಕೆ ಬರುವುದಾಗಿ ಹೇಳಿದ್ದರು.
ಐಪಿಎಲ್ನಲ್ಲಿ ಕೊಹ್ಲಿ ಕಮಾಲ್!
ಮಾರ್ಚ್ 28 ರಿಂದ ಆರಂಭವಾಗಿರುವ 19 ನೇ ಸಾಲಿನ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಇಲ್ಲಿವರೆಗೆ ಆಡಿರುವ 6 ಪಂದ್ಯಗಳಲ್ಲಿ 4 ರಲ್ಲಿ ವಿಜೇತರಾಗಿರುವ ಇವರು 2 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ.
ಆರ್.ಸಿ.ಬಿ ಪರ ವಿರಾಟ್ ಕೊಹ್ಲಿ 6 ಪಂದ್ಯಗಳಲ್ಲಿ 273 ರನ್ ಗಳಿಸುವ ಮೂಲಕ ಅತ್ಯಧಿಕ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರೆ, ತಂಡದ ನಾಯಕ ರಜ್ ಪಟಿದಾರ್ 22 ಸಿಕ್ಸ್ ಸಿಡಿಸುವ ಮೂಲಕ ಅತಿಹೆಚ್ಚು ಸಿಕ್ಸ್ ಹೊಡೆದಿರುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆರ್.ಸಿ.ಬಿ ಯ ಏಪ್ರಿಲ್ 24 ಶುಕ್ರವಾರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ, (ಏಜನ್ಸೀಸ್).