Vaibhav Sooryvanshi: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್, ದಾಖಲೆಗಳ ಸರದಾರ, 15 ವರ್ಷದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಬಗ್ಗೆಯೇ ಈಗ ಎಲ್ಲೆಲೂ ಮಾತು. ಲಿಸ್ಟ್-ಎ ಕ್ರಿಕೆಟ್ನಲ್ಲಿ ಕೇವಲ 52 ಎಸೆತಗಳಲ್ಲಿ 28 ಸ್ಫೋಟಕ ಸಿಕ್ಸರ್ ಸಹಾಯದಿಂದ 200 ರನ್ ಬಾರಿಸಿದ ವೈಭವ್, ಈ ಮೂಲಕ ಹಳೆಯ ದಾಖಲೆಗಳನ್ನು ಚಿಂದಿ ಮಾಡಿ, ಇದೀಗ ತಮ್ಮದೇ ಹೊಸ ವಿಶ್ವ ದಾಖಲೆ ಬರೆದಿರುವುದು ಇಡೀ ಕ್ರಿಕೆಟ್ ಜಗತ್ತನ್ನೇ ಅಕ್ಷರಶಃ ಬೆರಗಾಗಿಸಿದೆ.
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಅಂಗವಾಗಿ ಯುಎಇ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತ-ಎ ಪರ ಆಡಿದ ವೈಭವ್, ಒಟ್ಟು 53 ಎಸೆತಗಳನ್ನು ಎದುರಿಸಿದರು ಈ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. 28 ಸಿಕ್ಸರ್ ಹಾಗೂ 7 ಬೌಂಡರಿಗಳ ಸಹಾಯದಿಂದ 204 ರನ್ಗಳ ಸುನಾಮಿ ಬ್ಯಾಟಿಂಗ್ ಮಾಡಿದ ವೈಭವ್, ಲಿಸ್ಟ್-ಎ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಮತ್ತು ದ್ವಿಶತಕದ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಈ ಐತಿಹಾಸಿಕ ಸಾಧನೆಗೆ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ, ಅನೇಕರು ವೈಭವ್ರನ್ನು ಮೆಚ್ಚಿ, ಕೊಂಡಾಡಿದ್ದಾರೆ.
ಈ ಮೈಲಿಗಲ್ಲು ದಾಖಲಿಸಿದ ಬಳಿಕ ವೈಭವ್ ಸೂರ್ಯವಂಶಿ, ತಮ್ಮ ಆಪ್ತ ಕ್ರಿಕೆಟ್ ಸ್ನೇಹಿತರೊಡನೆ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡರು ಎನ್ನಲಾಗಿದೆ. ನನ್ನ ಅಸಲಿ ಗುರಿ ಕೇವಲ 200 ರನ್ ಗಳಿಸುವುದಲ್ಲ. ಅದನ್ನೂ ಮೀರಿಸುವುದು. ನಾನು ಮೈದಾನಕ್ಕೆ ಕಾಲಿಟ್ಟಾಗ ವೈಯಕ್ತಿಕ ಸ್ಕೋರ್ ಅನ್ನೋದಕ್ಕಿಂತ ಹೆಚ್ಚಾಗಿ ತಂಡದ ಗೆಲುವಿಗೆ ಸಹಾಯ ಮಾಡುವುದು ಫೋಕಸ್ ಮಾಡಿಕೊಂಡಿರುತ್ತೇನೆ ಎಂದು ಹೇಳಿಕೊಂಡಿದ್ದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.
ಅಗತ್ಯಬಿದ್ದರೆ ತಂಡದ ಗೆಲುವಿಗಾಗಿ 300 ರನ್ ಗಳಿಸುವ ಸಾಮರ್ಥ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇವಲ 52 ಎಸೆತದಲ್ಲಿ 200 ರನ್ಗಳ ಹೊಳೆ ಹರಿಸಿರುವ ವೈಭವ್ ಸ್ಫೋಟಕ ಇನ್ನಿಂಗ್ಸ್ ನೋಡಿದರೆ, ಅವರ ರನ್ ದಾಹ ಇಲ್ಲಿಗೆ ಇಳಿದಿಲ್ಲ ಎಂಬುದಂತು ಖಚಿತ. ಮತ್ತು ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಪರ ಆಡಲು ಹಚ್ಚಿನ ಅವಕಾಶ ಸಿಕ್ಕರೆ, ಖಂಡಿತ ಇನ್ನಷ್ಟು ಸ್ಮರಣೀಯ ಗೆಲುವುಗಳ ಜತೆ ದಾಖಲೆಗಳನ್ನು ನಿರ್ಮಿಸುತ್ತಾರೆ ಎಂಬುದರಲ್ಲಿ ಅನುಮಾನವೇ ಬೇಡ,(ಏಜೆನ್ಸೀಸ್).