ಚೆನ್ನೈ: ಕಳೆದ 19 ವರ್ಷಗಳಿಂದ ಐಪಿಎಲ್ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ ನಿವೃತ್ತಿ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಸಿಎಸ್ಕೆ ತಂಡದ ಮೆಂಟರ್ ಹುದ್ದೆಯಲ್ಲಿ ಮುಂದುವರಿಯುವುದಾಗಿ ತಿಳಿದು ಬಂದಿದೆ.
ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಗಳಿಸಿದ್ದ ಧೋನಿ, ಜಾರ್ಖಂಡ್ನ ರಾಂಚಿ ಮೂಲದವರಾಗಿದ್ದರೂ, ಸಿಎಸ್ಕೆ ತಂಡದ ನಾಯಕತ್ವ ವಹಿಸಿಕೊಂಡ ದಿನದಿಂದ ತಮಿಳುನಾಡಿನ ಜನ ಧೋನಿಯನ್ನು ತಮ್ಮೂರಿನ, ತಮ್ಮ ಮನೆಯ ಮಗನೆಂದೇ ಭಾವಿಸಿ ಪ್ರೋತ್ಸಾಹಿಸಿದರು. ಈದೀಗ ಎಂ.ಎಸ್. ಧೋನಿ ವಿದಾಯದ ಸುದ್ದಿ ಹೊರ ಬೀಳುತ್ತಿದ್ದಂತೆ ಅವರ ಅಭಿಮಾನಿಗಳು ಮತ್ತು ಆಪ್ತರು ಭಾವುಕ ನುಡಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ನೀವು ತಮಿಳುನಾಡಿನ ದತ್ತು ಪುತ್ರ!
ಸಿಎಸ್ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಗೆ ವಿದಾಯ ಹೇಳುತ್ತಿದ್ದಂತೆ ತಮಿಳುನಾಡು ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ತಮಿಳುನಾಡಿನ ದತ್ತು ಪುತ್ರ ಎಂ.ಎಸ್. ಧೋನಿ ಐಪಿಎಲ್ ಗೆ ವಿದಾಯ ಹೇಳಿದ್ದಾರೆ. ಅವರು ನಮಗೆ ಕೇವಲ ಟ್ರೋಫಿ ಮಾತ್ರವಲ್ಲ, ತಲಮಾರುಗಳನ್ನು ಒಂದುಗೂಡಿಸುವ ಭಾವನೆಯನ್ನು ಮತ್ತು ಕ್ರಿಕೆಟ್ ಪ್ರೀತಿಯನ್ನು ನೀಡಿದ್ದಾರೆಂದು ಟ್ವೀಟ್ ಮಾಡಿದ್ದಾರೆ.
ಬದುಕಿನಲ್ಲಿ ಎಲ್ಲಾ ರೀತಿಯ ಒಳ್ಳೆಯ ವಿಚಾರಗಳು ಕೊನೆಗೊಳ್ಳಲೇ ಬೇಕಾಗುತ್ತದೆ. ಅಂತಯೇ, ಇಂದು ನಮ್ಮ ರಾಜ್ಯದ ದತ್ತು ಪುತ್ರ, ಮೈದಾನದಿಂದ ನಿವೃತ್ತನಾಗುತ್ತಿದ್ದಾನೆ. ಅವನಿಗೆ ಶುಭ ಹಾರೈಸಲು ಇದೊಂದು ಉತ್ತಮ ಅವಕಾಶ ಎಂದು ಬರೆದುಕೊಂಡಿದ್ದಾರೆ.
ನಮಗೆ ಅಸಂಖ್ಯಾತ ಸಂತೋಷದ ಕ್ಷಣಗಳನ್ನು,ಅದ್ಭುತವಾದ ವಿಜಯಗಳು ಮತ್ತು ನೆನಪುಗಳನ್ನು ನೀಡಿದ್ದಕ್ಕಾಗಿ ಧನ್ಯವಾದ. ಈಗ ಸಿಎಸ್ಕೆ ಮಾರ್ಗದರ್ಶಕರಾಗಿ ನಿಮ್ಮ ಹೊಸ ಇನ್ನಿಂಗ್ಸ್ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆಂದು ಸ್ಟಾಲಿನ್ ಹೇಳಿದ್ದಾರೆ, (ಏಜೆನ್ಸೀಸ್).