ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ
- ಟೀಮ್ ಇಂಡಿಯಾದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
- ಮದುವೆ ಮುಂದೂಡಿಕೆ ವಿಚಾರದಲ್ಲಿ ದಿನಕ್ಕೊಂದು ತಿರುವು ಸಿಗುತ್ತಿದೆ
- ಸ್ಮೃತಿ ಮದುವೆ ನಡೆಯುತ್ತೋ? ಅಥವಾ ನಡೆಯುವುದಿಲ್ಲವೋ? ಎಂಬ ಅನುಮಾನ ಮೂಡಿದೆ
- ಸ್ಮೃತಿ ಮಂಧಾನ, ಮಾಜಿ ಗೆಳತಿಯ ಹಳೇ ಫೋಟೋ ಸಮೇತ ಪಲಾಶ್ರನ್ನು ಟ್ರೋಲ್ ಮಾಡಿದ ನೆಟ್ಟಿಗರು
ಮುಂಬೈ: ಸಾಮಾಜಿಕ ಜಾಲತಾಣವನ್ನು ತೆರೆದೆರೆ ಸಾಕು ಬರೀ ಸ್ಮೃತಿ ಮಂಧಾನ ( Smriti Mandhana ) ಅವರ ವಿವಾಹದ ಬಗ್ಗೆಯೇ ಭಾರಿ ಚರ್ಚೆ ನಡೆಯುತ್ತಿದೆ. ನವೆಂಬರ್ 23ರಂದು ನಡೆಯಬೇಕಿದ್ದ ಸ್ಮೃತಿ ವಿವಾಹ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಮುಂದೂಡಲಾಗಿದೆಯೇ? ಅಥವಾ ಸಂಪೂರ್ಣ ರದ್ದುಗೊಳಿಸಲಾಗಿದೆಯೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದರ ನಡುವೆ ಪಲಾಶ್ ಮುಚ್ಚಲ್ ಅವರ ಬಗ್ಗೆಯಂತೂ ಜಾಲತಾಣದಲ್ಲಿ ವಿವಿಧ ಸುದ್ದಿಗಳು ಹೊರಬೀಳುತ್ತಲೇ ಇವೆ.
ಪಲಾಶ್ ಅವರು ಸ್ಮೃತಿ ಮಂಧಾನಗೂ ಮೊದಲು ಬೇರೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದರು ಮತ್ತು ಆಕೆಯೊಂದಿಗೆ ಪ್ರಣಯ ಸಂಬಂಧದಲ್ಲಿದ್ದರು ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಈ ವಿವಾಹವನ್ನು ರದ್ದುಗೊಳಿಸಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತೆ ಸ್ಮೃತಿ ಅವರು ಮದುವೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಜಾಲತಾಣದಲ್ಲಿ ಖಾತೆಗಳಿಂದ ಡಿಲೀಟ್ ಮಾಡಿದ್ದಾರೆ. ಅಲ್ಲದೆ, ಸಹ ಆಟಗಾರ್ತಿಯರಾದ ಜೆಮಿಮಾ ರೊಡ್ರಿಗಸ್ ಮತ್ತು ಶ್ರೇಯಾಂಕ ಪಾಟೀಲ್ ಕೂಡ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ. ಮತ್ತೊರ್ವ ಸಹ ಆಟಗಾರ್ತಿ ರಾಧಾ ಯಾದವ್ ಅವರು ಪಲಾಶ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಹೀಗಾಗಿ, ಅನುಮಾನಗಳು ದಟ್ಟವಾಗಿದ್ದು, ಮದುವೆ ರದ್ದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಮದುವೆಗೂ ಒಂದು ದಿನ ಮೊದಲೇ ಪಲಾಶ್ ಮುಚ್ಚಲ್ ತನ್ನ ಮಾಜಿ ಗೆಳತಿ ಮತ್ತು ಪ್ರಸಿದ್ಧ ನೃತ್ಯ ಸಂಯೋಜಕಿ ಜತೆ ಚಾಟಿಂಗ್ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್ಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಮದುವೆಗು ಮುನ್ನವೇ ಇಬ್ಬರೂ ಭೇಟಿಯಾಗಿದ್ದರು ಎಂಬ ವರದಿಗಳೂ ಇವೆ. ಸ್ಮೃತಿ ಮಂಧಾನ ಅವರ ಕುಟುಂಬಕ್ಕೆ ಈ ವಿಷಯ ಗೊತ್ತಾಗಿ, ದೊಡ್ಡ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ.
ಪಲಾಶ್ ವಿಚಾರ ತಿಳಿದ ಬಳಿಕ ಸ್ಮೃತಿ ಮಂಧಾನ ಅವರ ಕುಟುಂಬ ಹೃದಯಾಘಾತದ ನಾಟಕಗಳನ್ನು ಆಡಿತು. ಅದಕ್ಕಾಗಿಯೇ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದರ ನೆಪವನ್ನು ಒಡ್ಡಿ ಮದುವೆಯನ್ನು ಮುಂದೂಡಲಾಗಿದೆ ಎಂಬ ವದಂತಿಗಳು ಹಬ್ಬಿವೆ. ಆದರೆ, ಈ ಬಗ್ಗೆ ಎರಡೂ ಕುಟುಂಬಸ್ಥರು ಯಾವುದೇ ಅಧಿಕೃತ ಹೇಳಿಕೆಗಳನ್ನು ಈ ಕ್ಷಣದವರೆಗೆ ನೀಡಿಲ್ಲ.
ಇದರ ನಡುವೆ ಕೆಲವರು ಪಲಾಶ್ ಮುಚ್ಚಲ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಸ್ಮೃತಿ ಮಂಧಾನ ಅವರ ಜೀವನವನ್ನೇ ಪಲಾಶ್ ಹಾಳುಮಾಡಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ. ಇನ್ನು ಕೆಲವರು ಪಲಾಶ್ ಮುಚ್ಚಲ್ ಬೆಂಬಲಕ್ಕೆ ನಿಂತಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿ ಬ್ರೇಕಪ್ ಇದ್ದೇ ಇರುತ್ತದೆ ಎಂದು ಹೇಳುತ್ತಿದ್ದಾರೆ. ಸ್ಮೃತಿ ಮಂಧಾನ ಅವರಿಗಿಂತ ಮೊದಲು ಬೇರೆ ಹುಡುಗಿಯನ್ನು ಪ್ರೀತಿಸಿದ್ದರಲ್ಲಿ ತಪ್ಪೇನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇದಿಷ್ಟೇ ಅಲ್ಲದೆ, ಕೆಲವರು ಸ್ಮೃತಿ ಮಂಧಾನ ಅವರ ಹಳೆಯ ಫೋಟೋಗಳು ಮತ್ತು ಪಲಾಶ್ ಮುಚ್ಚಲ್ ಅವರ ಮಾಜಿ ಗೆಳತಿಯ ಫೋಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಪಲಾಶ್ ಮುಚ್ಚಲ್ ಪ್ರೀತಿಸಿದ ಈ ಇಬ್ಬರು ಮಹಿಳೆಯರು ಸುಂದರವಾಗಿಲ್ಲ ಎಂದು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಹುಡುಗಿಯರನ್ನು ಆಯ್ಕೆ ಮಾಡುವಲ್ಲಿ ಪಲಾಶ್ಗೆ ಒಂದೊಳ್ಳೆ ಅಭಿರುಚಿಯಿಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ.
ಇನ್ನು ಸ್ಮೃತಿ ತಂದೆ ಚೇತರಿಸಿಕೊಂಡ ತಕ್ಷಣ ಅವರ ಮದುವೆ ನಡೆಯಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಆದಾಗ್ಯೂ, ಜಾಲತಾಣದಲ್ಲಿ ಇಷ್ಟೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದರೂ, ಎರಡೂ ಕುಟುಂಬಗಳಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ, ಪಲಾಶ್ ಅವರ ಸಹೋದರಿ, ಬಾಲಿವುಡ್ ಗಾಯಕಿ ಪಲಾಕ್ ಮುಚ್ಚಲ್, ಇನ್‌ಸ್ಟಾಗ್ರಾಮ್‌ನಲ್ಲಿ ನೆಟ್ಟಿಗರಿಗೆ ಮನವಿ ಮಾಡಿದ್ದು, "ಸ್ಮೃತಿ ಅವರ ತಂದೆಯ ಅನಾರೋಗ್ಯದ ಕಾರಣ ಮದುವೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ದಯವಿಟ್ಟು ಈ ಸಮಯದಲ್ಲಿ ನಮ್ಮ ಗೌಪ್ಯತೆಗೆ ಭಂಗ ತರಬೇಡಿ ಎಂದು ಹೇಳಿದ್ದಾರೆ. ಸದ್ಯ, ಸ್ಮೃತಿ ಮತ್ತು ಪಲಾಶ್ ಮದುವೆ ನಡೆಯುತ್ತೋ? ಇಲ್ಲವೋ? ಅನ್ನೋ ಪ್ರಶ್ನೆ ಮಾತ್ರ ಹಾಗೇ ಉಳಿದಿದೆ. ಈ ಪ್ರಕರಣದಲ್ಲಿ ಮುಂದೆ ಏನೆಲ್ಲ ಬೆಳವಣಿಗೆಗಳು ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್).