ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ವಿರುದ್ಧ ಗರಂ ಆದ ಕೆ. ಶ್ರೀಕಾಂತ್ 
ಕ್ರಿಕೆಟ್

ಸಂಜು, ವೈಭವ್ ಆಯ್ತು.. ಈಗ ಕೆ.ಎಲ್. ರಾಹುಲ್ ಕರಿಯರ್ ಹಾಳು ಮಾಡ್ತಿದ್ದೀರ: ಗಂಭೀರ್ ವಿರುದ್ಧ ಕೃಷ್ಣಮಾಚಾರಿ ಶ್ರೀಕಾಂತ್ ಗರಂ! K Srikkanth on Gautam Gambhir

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್ ವಿರುದ್ಧ ಸರಣಿ ಸೋತ ಭಾರತ
  • ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ವಿರುದ್ಧ ಗರಂ ಆದ ಕೆ. ಶ್ರೀಕಾಂತ್
  • ಸಂಜು ಸ್ಯಾಮ್ಸನ್ ರೀತಿಯಲ್ಲಿ ಕೆ.ಎಲ್. ರಾಹುಲ್ ಕರಿಯರ್ ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ!
ಕ್ರಿಕೆಟ್​: ಐಪಿಎಲ್​ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಮರಳಿರುವ ಟೀ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನ ಮುಂದುವರಿದಿದೆ. ಇತ್ತೀಚೆಗೆ ಇಂಗ್ಲೆಂಡ್​ ಹಾಗೂ ಐರ್ಲೆಂಡ್ ನಡುವಿನ ಟಿ-20 ಟೂರ್ನಿಯಲ್ಲಿ ವೈಟ್​ವಾಶ್​​ ಆದ ಬಳಿಕ ಈಗ ಇಂಗ್ಲೆಂಡ್​ ವಿರುದ್ಧ ನಡೆದಿದ್ದ ಏಕದಿನ ಸರಣಿಯನ್ನು ಸಹ 2-1 ರ ಅಂತರದಲ್ಲಿ ಪರಾಜಿತರಾಗಿದ್ದಾರೆ. 
ಟಿ-20 ಹಾಗೂ ಏಕದಿನ ರ‍್ಯಾಕಿಂಗ್​ ಪಟ್ಟಿಯಲ್ಲಿ ಟಾಪ್​ ಸ್ಥಾನದಲ್ಲಿದ್ದ ಟೀಂ ಇಂಡಿಯಾ ಕೆಳ ಹಂತದಲ್ಲಿದ್ದ ತಂಡಗಳ ವಿರುದ್ಧ ಸತತ ಸೋಲನ್ನು ಅನುಭವಿಸಿದ ಹಿನ್ನಲೆ ಭಾರತ ತಂಡದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ (K Srikkanth on Gautam Gambhir)​, ತಂಡದ ಕೋಚ್​ ಹಾಗೂ ಆಡಳಿತ ಮಂಡಳಿ ಮೇಲೆ ಗರಂ ಆಗಿದ್ದಾರೆ.

ಸಂಜು, ಸೂರ್ಯವಂಶಿ ಆಗಿಯು ಈಗ ಕೆ.ಎಲ್​. ರಾಹುಲ್​!

ಇಂಗ್ಲೆಂಡ್​ ನೆಲದಲ್ಲಿ ಭಾರತ ಸತತ ಸೋಲನ್ನು ಅನುಭವಿಸಿದ ಕುರಿತು ಮಾತನಾಡಿರುವ ಕೆ.ಶ್ರೀಕಾಂತ್​, ಭಾರತ ಈ ಸರಣಿಯಲ್ಲಿ ಸೋಲಲು ತಂಡದ ಕೋಚ್​​ ಗೌತಮ್​ ಗಂಭೀರ್​ ಹಾಗೂ ತಂಡದ ಆಡಳಿತ ಮಂಡಳಿಯ ನಿರ್ಧಾರಗಳೇ ಕಾರಣ ಎಂದು ಗುಡುಗಿದ್ದಾರೆ.
ಇಂಗ್ಲೆಂಡ್​ ನಡುವಿನ ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್​ ಅಮೋಘ ಸೆಂಚುರಿ ಸಿಡಿಸಿದ್ದರು. ಕೊಹ್ಲಿ ಚೆನ್ನಾಗಿ ಬ್ಯಾಟ್​​ ಬೀಸುತ್ತಿದ್ದರು, ಗಿಲ್​ ಉತ್ತಮ ಆರಂಭ ನೀಡಿದ್ದರು ಆದರೆ ಉಳಿದವರು ಏನು ಮಾಡಿದರು? ಎಂದು ಪ್ರಶ್ನಿಸಿದ್ದಾರೆ.
398 ರನ್​ ಬೆನ್ನತ್ತಿದಾಗ ಕೆ.ಎಲ್​. ರಾಹುಲ್​​ ರೀತಿಯ ಸ್ಪೋಟಕ ಬ್ಯಾಟರ್​ನನ್ನು ಯಾರಾದರೂ ಆರನೇ ಕ್ರಮಾಂಕದಲ್ಲಿ ಆಡಿಸುತ್ತಾರಾ? ಇಷ್ಟು ದೊಡ್ಡ ಮೊತ್ತವನ್ನು ಚೇಸ್​ ಮಾಡುತ್ತಿರುವಾಗ ರಾಹುಲ್​ ಆರನೇ ಬ್ಯಾಟರ್​ ಆಗಿ ಮೈದಾನಕ್ಕೆ ಇಳಿಯುತ್ತಾರೆ ಎಂದತೆ ಅದಕ್ಕೆ ಏನು ಹೇಳಬೇಕು? ರಾಹುಲ್​ ಆರನೇ ಅಥವಾ ಏಳನೇ ಕ್ರಮಾಂಕದ ಬ್ಯಾಟ್ಸ್​ಮನ್​ ಆಗಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಗೌತಮ್​ ಮತ್ತು ಆಡಳಿತ ಮಂಡಳಿ ಏನು ಮಾಡುತ್ತಿದೆ?

ಟಿ-20 ನಲ್ಲಿ ಆ ಸಂಜು ಸಾಮ್ಸ್​ನ್​ ಹಾಗೂ ವೈಭವ್​ ಸೂರ್ಯವಂಶಿಯ ಆಟವನ್ನು ಹಾಳು ಮಾಡಿ ಆಯಿತು. ಈಗ ಕೆ.ಎಲ್​. ರಾಹುಲ್​ನ ಆಟವನ್ನು ಹಾಳು ಮಾಡುತ್ತಿದ್ದಿರಿ. ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧಾರ ಮಾಡುವಲ್ಲಿ ಗೌತಮ್​ ಗಂಭೀರ್​ ಹಾಗೂ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ ಎಂದು ಶ್ರೀಕಾಂತ್​ ಆಕ್ರೋಶ ಹೊರಹಾಕಿದ್ದಾರೆ.

ಕಿಶನ್​ ಬದಲು ರಾಹುಲ್​ ಬರಬೇಕಿತ್ತು!

ರೋಹಿತ್​ ಔಟ್​ ಆದಗ ಕೂಡ ಮ್ಯಾಚ್​ನ್ನು ನಾವೇ ಗೆಲ್ಲಬಹುದಿತ್ತು. ಆದರೆ ಇಶನ್​ ಕಿಶನ್​ ಬದಲು ರಾಹುಲ್​ ಬಂದಿದ್ದರೆ ನಾವು ಪಂದ್ಯ ಗೆಲ್ಲುವ ಚಾನ್ಸ್​ ಹೆಚ್ಚಿತ್ತು. ರಾಹುಲ್​ ಆರನೇ ವಿಕೆಟ್​ಗೆ ಬಂದಾಗ ಅವನ ಬಾಡಿ ನರ್ವಸ್​ ಅಗಿತ್ತು. ಹೀಗಾಗಿ ಅವನಿಂದ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ ಎಂದಿದ್ದಾರೆ, (ಏಜನ್ಸೀಸ್​).