30,000 ಅಡಿ ಎತ್ತರದಲ್ಲಿ, ವಿಮಾನದಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್!
- 30,000 ಅಡಿ ಎತ್ತರದಲ್ಲಿ, ವಿಮಾನದಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್!
- ಸೊಸೆ ಬೌಲಿಂಗ್‌ಗೆ ಬ್ಯಾಟ್ ಬೀಸಿದ ಮಾಸ್ಟರ್ ಬ್ಲಾಸ್ಟರ್
- ಮಗಳು ಸಾರಾ,ಸೊಸೆ ಸಾನಿಯಾ ಜೊತೆಗಿನ ಸಚಿನ್ ಕ್ರಿಕೆಟ್ ವಿಡಿಯೋ ವೈರಲ್
ಮುಂಬೈ: ಒಂದು ಕಾಲದಲ್ಲಿ ಜಾಗತಿಕ ಕ್ರಿಕೆಟ್ನ್ನು ಆಳಿದ, ಕ್ರಿಕೆಟ್ ದೇವರೆಂದೆ ಖ್ಯಾತಿಗಳಿಸಿದವರೆಂದರೆ ಅದು ಸಚಿನ್ ರಮೇಶ್ ತೆಂಡೂಲ್ಕರ್ (Sachin Tendulkar). ಕ್ರಿಕೆಟ್ನಿಂದ ನಿವೃತ್ತರಾಗಿ ದಶಕಗಳೇ ಕಳೆದಿದ್ದರು ಕ್ರಿಕೆಟ್ ಮೇಲಿನ ಅವರ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ ಎಂದು ಮತ್ತೊಮ್ಮೆ ಸಾಭೀತಾಗಿದೆ.
ಇತ್ತೀಚೆಗೆ ಕುಟುಂಬ ಸಮೇತ ತಮ್ಮ ಖಾಸಗಿ ವಿಮಾನದಲ್ಲಿ, ಪ್ರವಾಸದಲ್ಲಿರುವ ಸಚಿನ್ ತೆಂಡೂಲ್ಕರ್, ವಿಮಾನದಲ್ಲಿಯೇ ಕುಟುಂಬದವರ ಜೊತೆಗೆ ಸುಮಾರು 30,000 ಅಡಿ ಎತ್ತರದಲ್ಲಿ ಬ್ಯಾಟ್ ಬೀಸಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಧೂಳೆಬ್ಬಿಸುತ್ತಿದೆ.
ಸೊಸೆ ಬೌಲಿಂಗ್, ಮಗಳ ಫೀಲ್ಡಿಂಗ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಸಚಿನ್ ವಿಮಾನದ ಮಧ್ಯದಲ್ಲಿ ಬ್ಯಾಟ್ ಹಿಡಿದು ನಿಂತಿದ್ದರೆ, ಸೊಸೆ (ಅರ್ಜುನ್ ತೆಂಡೂಲ್ಕರ್ ಪತ್ನಿ) ಸಾನಿಯಾ ಚಾಂದೋಕ್ ಬೌಲಿಂಗ್ ಮಾಡುತ್ತಿದ್ದಾರೆ. ಹಾಗೆಯೇ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಫೀಲ್ಡಿಂಗ್ನಲ್ಲಿ ನಿರತರಾಗಿದ್ದಾರೆ.
ಬ್ಯಾಟಿಂಗ್ ಜೊತೆ ಕಮೆಂಟರಿಯನ್ನೂ ಮಾಡಿರುವ ಸಚಿನ್, ಅಲ್ಟಿಟ್ಯೂಡ್ ಹೇಗೇ ಇರಲಿ ಆದರೆ ಅಟಿಟ್ಯೂಡ್ ಯಾವತ್ತೂ ಬದಲಾಗಬಾರದು, ನೀನು ನನ್ನನ್ನು ಔಟ್ ಮಾಡಲು ಸಾಧ್ಯವೇ ಇಲ್ಲ ಎಂದು ಸಚಿನ್ ವಿನೋಧ ಭರಿತರಾಗಿ ಹೇಳುತ್ತಿರುವುದನ್ನು ಕೇಳಬಹುದಾಗಿದೆ. ಕೆಲ ಸಮಯದ ನಂತರ ಸಚಿನ್ ಬಾರಿಸಿದ ಚೆಂಡನ್ನು ಸಾರಾ ಕ್ಯಾಚ್ ಹಿಡಿಯುವ ಮೂಲಕ ತಂದೆಯನ್ನು ಔಟ್ ಮಾಡಿದ್ದಾರೆ.
ನೆಟ್ಟಿಗರ ಫನ್ನಿ ಕಮೆಂಟ್ಸ್!
ಸಚಿನ್ ತೆಂಡಲ್ಕೂಕರ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಕಮೆಂಟ್ಗಳ ಸುರಿಮಳೆ ಸುರಿದಿದೆ. ಆಕಾಶದಲ್ಲಿ ಕ್ರಿಕೆಟ್ ಆಡಿದ ಪ್ರಪಂಚದ ಏಕೈಕ ಆಟಗಾರ ಅದು ನಮ್ಮ ಸಚಿನ್ ತೆಂಡೂಲ್ಕರ್ ಮಾತ್ರ ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ಅಂತೂ ಸಚಿನ್ ಮಗಳಿಂದಲೇ ಔಟಾಗ ಬೇಕಾಯಿತು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ, ವಿಶ್ವದ ಬೌಲರ್ಗಳ ಕೈಯಲ್ಲಿ ಆಗದ ಕೆಲಸವನ್ನು ಸೊಸೆ ಮಾಡಿ ತೋರಿಸಿದ್ದಾಳೆ ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಕೇವಲ 16 ನೇ ವಯಸ್ಸಿಗೆ ಭಾರತ ತಂಡ ಪ್ರವೇಶಿಸಿದ ಸಚಿನ್ ರಮೇಶ್ ತೆಂಡೂಲ್ಕರ್, 1989 ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು.
ವೃತ್ತಿ ಜೀವನದಲ್ಲಿ ನೂರು ಬಾರಿ ಶತಕ ಸಿಡಿಸಿದ ದಾಖಲೆ ಇಂದಿಗೂ ಸಚಿನ್ ಹೆಸರಿನಲ್ಲಿಯೇ ಇದೆ. 2013 ರಲ್ಲಿ ವಾಂಖಡೆಯಲ್ಲಿ ತಮ್ಮ 200 ಟೆಸ್ಟ್ ಮ್ಯಾಚ್ನೊಂದಿಗೆ ನಿವೃತ್ತಿ ಘೋಷಿಸಿದ ಸಚಿನ್ ತೆಂಡೂಲ್ಕರ್ ಸಾಧನೆಗೆ ಭಾರತ ರತ್ನ, ಅರ್ಜುನ್ ಪ್ರಶಸ್ತಿ ಮೊದಲಾದವುಗಳಿಂದ ಸನ್ಮಾನಿಸಲಾಗಿದೆ, (ಏಜನ್ಸೀಸ್).