ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮತ್ತೆರಡು ಮೈಲಿಗಲ್ಲು!  
ಕ್ರಿಕೆಟ್

ಸಚಿನ್, ಕೊಹ್ಲಿ ಸಾಲಿಗೆ ಸೇರಿದ ಹಿಟ್‌‌ಮ್ಯಾನ್: ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮತ್ತೆರಡು ಮೈಲಿಗಲ್ಲು! | Rohit Sharma

Rohit Sharma: ಸಮಯ ಬಂದಾಗ, ಶ್ರೇಷ್ಠ ಆಟಗಾರ ಲಯಕ್ಕೆ ಮರಳುತ್ತಾನೆ. ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅದೇ ನಡೆಯಿತು. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ದಿಗ್ಗಜ ಬ್ಯಾಟರ್ ರೋಹಿತ್ ಶರ್ಮಾ ಎಲ್ಲರ ಗಮನ ಸೆಳೆದರು.

Rohit Sharma: ಸಮಯ ಬಂದಾಗ, ಶ್ರೇಷ್ಠ ಆಟಗಾರ ಲಯಕ್ಕೆ ಮರಳುತ್ತಾನೆ. ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅದೇ ನಡೆಯಿತು. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ದಿಗ್ಗಜ ಬ್ಯಾಟರ್ ರೋಹಿತ್ ಶರ್ಮಾ ಎಲ್ಲರ ಗಮನ ಸೆಳೆದರು. ಶಾಯ್ ಹೋಪ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 405 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದ್ದರಿಂದ ಅತಿಥೇಯ ಭಾರತ ತಂಡದ ಮೇಲೆ ಒತ್ತಡ ಹೆಚ್ಚಾಗಿತ್ತು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ಬೌಲರ್‌ಗಳ ವಿರುದ್ಧ ಆರ್ಭಟ ನಡೆಸಿ ತಮ್ಮ 35ನೇ ಶತಕ ಬಾರಿಸಿ ಟೀಮ್​ ಇಂಡಿಯಾ ಅಭಿಮಾನಿಗಳ ಆತಂಕ ದೂರ ಮಾಡಿದರು.

ಸತತ ಎರಡು ಸಿಕ್ಸರ್ ಬಾರಿಸುವ ಮೂಲಕ ಕೇವಲ 32 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದ ರೋಹಿತ್​ ಆತಿಥೇಯರಿಗೆ ಅದ್ಭುತ ಆರಂಭವನ್ನೇ ನೀಡಿದರು. ಇದಕ್ಕೆ ಇನ್ನೊಂದು ತುದಿಯಲ್ಲಿ ನಾಯಕ ಶುಭಮಾನ್ ಗಿಲ್ ಅವರಿಂದ ಸೂಕ್ತ ಬೆಂಬಲ ಸಿಕ್ಕಿತು. ಇದರ ಮಧ್ಯೆ, ತಮ್ಮ ಅರ್ಧಶತಕದ ಬೆನ್ನಲ್ಲೇ ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ 12,000 ರನ್‌ಗಳನ್ನು ಪೂರೈಸಿದರು. ಇದರೊಂದಿಗೆ, 50 ಓವರ್‌ಗಳ ಮಾದರಿಯಲ್ಲಿ ಈ ಸಾಧನೆ ಮಾಡಿದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ನಂತರದ ಮೂರನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟಾರೆಯಾಗಿ, ಜಾಗತಿಕವಾಗಿ ಈ ಸಾಧನೆ ಮಾಡಿದ ಏಳನೇ ಕ್ರಿಕೆಟಿಗರಾದರು.

ಇದನ್ನೂ ಓದಿ:ಸಿಇಸಿ ರಕ್ಷಣೆ ಕಾಯ್ದೆ ರದ್ದತಿಗೆ ಪ್ರತಿಪಕ್ಷಗಳ ಸುಪ್ರೀಂ ಪ್ಲಾನ್!....ಒಕ್ಕೂಟ ವಿಸ್ತರಣೆಗೆ ಮತ್ತೊಂದು ಪಕ್ಷಕ್ಕೆ ಆಹ್ವಾನ ನೀಡಿದ ಮಮತಾ ಬ್ಯಾನರ್ಜಿ | INDIA Bloc

ಸ್ವದೇಶದಲ್ಲಿ 200 ಏಕದಿನ ಸಿಕ್ಸರ್ ಬಾರಿಸಿದ ಮೊದಲ ಕ್ರಿಕೆಟಿಗ ರೋಹಿತ್!...

ತಮ್ಮ ಅರ್ಧಶತಕದ ಹಾದಿಯಲ್ಲಿ ರೋಹಿತ್ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಇದರಲ್ಲಿ ನಾಲ್ಕನೇ ಸಿಕ್ಸರ್ ಸ್ವದೇಶದಲ್ಲಿ ಅವರ 200 ನೇ ಏಕದಿನ ಸಿಕ್ಸರ್ ಆಗಿತ್ತು, ಇದು ಇತಿಹಾಸದಲ್ಲೇ ಯಾವುದೇ ಕ್ರಿಕೆಟಿಗ ಸಾಧಿಸದ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯಾಗಿದೆ. ಅವರು ಈಗಾಗಲೇ ಈ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಹೊಂದಿದ್ದು, ಈಗ ಅವರ ಹೆಸರಿಗೆ ಮತ್ತೊಂದು ವಿಶೇಷ ಸಾಧನೆ ಸೇರ್ಪಡೆಯಾಗಿದೆ.

ಶತಕದ ಸಾಧನೆ ಮಾಡಿದ ಗಿಲ್​!

ವೆಸ್ಟ್ ಇಂಡೀಸ್ ತಂಡ ಬೃಹತ್ ಮೊತ್ತವನ್ನು ಕಲೆ ಹಾಕಿದ ನಂತರ, ಎರಡನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಆರಂಭಿಕ ಉತ್ತಮವಾಗಿ ಆಡಬೇಕು ಎನ್ನುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಭಾರತ ಹಿಂದೆಂದೂ ಇಷ್ಟೊಂದು ದೊಡ್ಡ ಮೊತ್ತವನ್ನು ಬೆನ್ನಟ್ಟಿರಲಿಲ್ಲ. ಈ ಹಿಂದೆ 2013ರಲ್ಲಿ 360 ರನ್‌ಗಳ ಅತ್ಯಧಿಕ ಯಶಸ್ವಿ ಚೇಸಿಂಗ್ ಮಾಡಿತ್ತು. ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ರೋಹಿತ್ 140 ರನ್ ಗಳಿಸಿದರೆ, ಕೊಹ್ಲಿ ಕೂಡ ಶತಕ ಬಾರಿಸಿದ್ದರು.

ಈ ಗುರಿಯನ್ನು ತಲುಪಲು, ಮೇಲಿನ ಮೂವರು ಬ್ಯಾಟರ್‌ಗಳು ಅಬ್ಬರಿಸುವುದು ಅಗತ್ಯವಾಗಿತ್ತು. ರೋಹಿತ್ ಶರ್ಮಾ 75 ಎಸೆತಗಳಲ್ಲಿ 101ಕ್ಕೆ ಔಟ್​ ಆದರೆ, ಶುಭಮಾನ್ 96 ಎಸೆತಗಳಲ್ಲಿ 169 ರನ್​ ಗಳಿಸಿ ಬ್ಯಾಟಿಂಗ್​ ನಡೆಸುತ್ತಿದ್ದು, ಮೂರನೇ ಕ್ರಮಾಂಕದಲ್ಲಿ ಬಂದ ವಿರಾಟ್​ ಕೊಹ್ಲಿ ಅವರಿಗೆ ಸಾಥ್​ ನೀಡುತ್ತಿದ್ದಾರೆ. ಈ ವೇಗವನ್ನು ಕಾಯ್ದುಕೊಂಡು ಭಾರತವನ್ನು ಗೆಲುವಿನತ್ತ ಕೊಂಡೊಯ್ಯುವುದು ಅವರ ಗುರಿಯಾಗಿದೆ.(ಏಜೆನ್ಸೀಸ್​).