ಈ ಸಲ ಕಪ್ ನಮ್ದು ಎಂದ ಅನನ್ಯಾ ಬಿರ್ಲಾ
- ಇಂದಿ(ಮಾರ್ಚ್ 28) ನಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿ
- ಆರ್ಸಿಬಿ ನೂತನ ಓನರ್ ಬಿರ್ಲಾ ಗ್ರೂಪ್
- ಈ ಸಲ ಕಪ್ ನಮ್ದು ಎಂದ ಅನನ್ಯಾ ಬಿರ್ಲಾ
- ಕಮೆಂಟ್ ಸೆಕ್ಷನ್ ತುಂಬಿಸಿದ ಬೆಂಗಳೂರು ಅಭಿಮಾನಿಗಳು
ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳು ಬಹು ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಭಾರತದ ಕ್ರಿಕೆಟ್ ಹಬ್ಬ ಐಪಿಎಲ್ ಇಂದಿನಿಂದ (ಮಾರ್ಚ್ 28 ) ಆರಂಭವಾಗಲಿದ್ದು, ಮೊದಲ ಪಂದ್ಯವು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ವೈರಲ್ ಆಯ್ತು ಆರ್ಸಿಬಿ ಒಡತಿಯ ವಿಡಿಯೋ!
ಈ ವರ್ಷದ ಆರಂಭಿಕ ಪಂದ್ಯವು ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ ಹೈದರಾಬಾದ್ ನಡುವೆ ನಡೆಯಲಿದೆ. ಈಗ ಆರ್ಸಿಬಿ ನೂತನ ಮಾಲಕಿ ಅನನ್ಯಾ ಬಿರ್ಲಾ (Ananya Birla) ಕ್ರೀಡಾಂಗಣದಲ್ಲಿ ನಿಂತು ತನ್ನ ತಂಡದ ಬಾವುಟವನ್ನು ಹಾರಿಸುತ್ತಿರುವ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದ್ದು, ಅನನ್ಯಾ ಬಿರ್ಲಾ ಈ ವಿಡಿಯೋ ಕೆಳಗಡೆ ಈ ಸಲ ಕಪ್ ನಮ್ದು.. ಲೆಸ್ಟ್ ಗೋ ಎಂದು ಕ್ಯಾಪ್ಶನ್ ಬರೆದಿರುವುದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ಆರ್ಸಿಬಿ ಅಭಿಮಾನಿಗಳು ಕಮೆಂಟ್ ಸೆಕ್ಷನ್ನ್ನು ತುಂಬಿಸಿದ್ದಾರೆ.
ಈಗ ನಮ್ಮ ಬಳಿ ಲೇಡಿ ಸೂಪರ್ ಸ್ಟಾರ್ ಇದ್ದಾರೆ ಎಂದು ಒಬ್ಬರು ಹೇಳಿದರೆ, ನೀವು ನಮ್ಮ ತಂಡದಲ್ಲಿದ್ದರೆ ಇಲ್ಲಾ ವರ್ಷ ಕಪ್ ನಮ್ಮದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಈಗ ನಿನ್ನನ್ನು ಯಾರು ನೋಡುವುದಿಲ್ಲ, ಎಲ್ಲಾ ಕ್ಯಾಮರಾಮನ್ಗಳ ಕಣ್ಣು ನಮ್ಮ ಹುಡುಗಿಯ ಮೇಲೆ ಇರಲಿದೆ ಎಂದು ಒಬ್ಬರು ಎಸ್ಆರ್ಹೆಚ್ ಓನರ್ ಕಾವ್ಯಾ ಮಾರನ್ ಅವರ ಕಾಲೆಳೆದಿದ್ದಾರೆ.
4 ಲಕ್ಷ ಇದ್ದ ಫಾಲೋವರ್ಸ್ ಈಗ 20 ಲಕ್ಷ!
ಈ ವರ್ಷದ ಐಪಿಎಲ್ ತಂಡಗಳ ಹರಾಜಿನಲ್ಲಿ ಬಿರ್ಲಾ ಗ್ರೂಪ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬರೊಬ್ಬರಿ 16,000 ಕೋಟಿ ರೂಪಾಯುಗಳಿಗೆ ಖರೀದಿಸಿದೆ. ಈ ಮೂಲಕ ಆರ್ಸಿಬಿ ಐಪಿಎಲ್ನಲ್ಲಿರುವ ಅತ್ಯಂತ ಶ್ರೀಮಂತ ಫ್ರಾಂಚಯ್ಸಿಯಾಗಿ ಹೊರಹೊಮ್ಮಿದೆ.
ಆರ್ಸಿಬಿ ತಂಡವನ್ನು ಖರೀದಿಸುವ ಮೊದಲು ಅನನ್ಯಾ ಬಿರ್ಲಾಗೆ ಇನ್ಸ್ಟಾಗ್ರಾಮ್ನಲ್ಲಿ ಕೇವಲ 4.3 ಲಕ್ಷ ಫಾಲೋವರ್ಸ್ಗಳಿದ್ದರು. ಆದರೆ ಯಾವಾಗ ಇವರು ಆರ್ಸಿಬಿಯನ್ನು ತಮ್ಮ ತೆಕ್ಕೆಗೆ ಹಾಕಿಕೊಂಡ ಮೇಲೆ ಫಾಲೋವರ್ಸ್ ಸಂಖ್ಯೆ 20 ಲಕ್ಷವನ್ನು ದಾಟಿದೆ.
ಯಾರು ಈ ಅನನ್ಯಾ ಬಿರ್ಲಾ?
ಅನನ್ಯಾ ಬಿರ್ಲಾ ಭಾರತದ ಪ್ರಖ್ಯಾತ ಉದ್ಯಮಿ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷರಾದ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿ. ಅನನ್ಯಾ ಕೇವಲ ಉದ್ಯಮಿ ಮಾತ್ರವಲ್ಲದೆ ಗಾಯಕಿ ಮತ್ತು ಮಾನಸಿಕ ಆರೋಗ್ಯ ಕಾರ್ಯಕರ್ತೆಯಾಗಿ ಸಹ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ.
ಇವರು ತಮ್ಮ 17ನೇ ವಯಸ್ಸಿನಲ್ಲಿ ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸ್ವತಂತ್ರ ಮೈಕ್ರೋಫಿನ್ (Svatantra Microfin) ಎಂಬ ಸಂಸ್ಥೆಯನ್ನು ಸ್ಥಾಪಿಸಿ ಇಂದು ಈ ಕಂಪನಿ ಸುಮಾರು ನಾಲ್ಕು ಸಾವಿರ ಕೋಟಿ ಉದ್ಯಮವಾಗಿ ಬೆಳೆದಿದೆ.
ಸಂಗೀತ ಕ್ಷೇತ್ರದಲ್ಲಿಯೂ ಅಪಾರ ಆಸಕ್ತಿ ಹೊಂದಿರುವ ಇವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲಿಷ್ ಪಾಪ್ ಗಾಯನದಲ್ಲಿ ಗುರುತಿಸಿಕೊಂಡಿದ್ದಾರೆ ಮತ್ತು ಇವರ ಹಲವು ಹಾಡುಗಳು ಪ್ಲಾಟಿನಂ ಗೌರವಕ್ಕೆ ಪಾತ್ರವಾಗಿವೆ,(ಏಜನ್ಸೀಸ್).