ಐಪಿಎಲ್ ಪೈಪೋಟಿಯಿಂದಾಗಿ ಪಿಎಸ್‌ಎಲ್ ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ತಂಡ ಮಾರುವ ಸ್ಥಿತಿ ಬಂದಿದೆ ಎಂದ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮಾಲೀಕ ನದೀಮ್ ಓಮರ್ 
ಕ್ರಿಕೆಟ್

ಐಪಿಎಲ್ ಹೊಡೆತಕ್ಕೆ ತತ್ತರಿಸಿದ ಪಿಎಸ್‌ಎಲ್; ತಂಡವನ್ನೇ ಮಾರುವ ಸ್ಥಿತಿಗೆ ತಲುಪಿದ ಪಾಕ್ ಮಾಲೀಕ! Nadeem Omar

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಈ ಎರಡು ದೇಶಗಳ ವೈರತ್ವ ಕೇವಲ ರಾಜತಾಂತ್ರಿಕ ಮಾತ್ರವಲ್ಲ, ಇದು ಎಲ್ಲಾ ರಂಗದಲ್ಲಿಯೂ ಹಬ್ಬಿದೆ. ಅದರಲ್ಲೂ ಕ್ರಿಕೆಟ್​ನಲ್ಲಿ ಇಂಡಿಯಾ, ಪಾಕಿಸ್ತಾನ್ ಮ್ಯಾಚ್​ ಎಂದರೆ ಆ ಪಂದ್ಯದ ಕಾವು ದುಪ್ಪಟ್ಟಾಗುತ್ತದೆ.

ಹೀಗಾಗಿ ಕ್ರಿಕೆಟ್​​ನಲ್ಲಿ ಈ ಎರಡು ತಂಡಗಳು ತಮ್ಮದೇ ಆದ ಛಾಪನ್ನು ಮೂಡಿಸಲು ಪ್ರತಿ ವರ್ಷ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಾ ಬಂದಿದ್ದಾರೆ. ಆದರೆ, ರಾಜತಾಂತ್ರಿಕದ ರೀತಿ ಕ್ರಿಕೆಟ್​​ನಲ್ಲಿ ಕೂಡ ಭಾರತವೇ ಮೇಲುಗೈ ಸಾಧಿಸಿದೆ.

ನಾವು ಕಾಂಪಿಟೇಶನ್ ಮಾಡುತ್ತಿಲ್ಲ!

ಇನ್ನೂ ಭಾರತದಲ್ಲಿ ಮಾರ್ಚ್​ನಿಂದ ಮೇ ವರೆಗೆ ಎರಡು ತಿಂಗಳಿನ ಮಟ್ಟಿಗೆ ಇಂಡಿಯನ್​ ಪ್ರೀಮಿಯರ್​ ಲೀಗ್​ (IPL) ನಡೆಯುತ್ತದೆ. ಇದು ಪ್ರಪಂಚದಲ್ಲಿ ನಡೆಯುವ ಕ್ರಿಕೆಟ್​​ನ ಅತಿ ದೊಡ್ಡ ಹಾಗೂ ಅತ್ಯಂತ ಹೆಚ್ಚು ಹಣವನ್ನು ಗಳಿಸುವ ಕ್ರಿಕೆಟ್​ ಲೀಗ್​ ಎಂದು ಖ್ಯಾತಿಯಾಗಿದೆ.

ಆದರೆ ಈ ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರರಿಗೆ ಭಾಗವಹಿಸಲು ಅವಕಾಶವಿರದ ಕಾರಣ ಅವರ ದೇಶದಲ್ಲಿ ಪಾಕಿಸ್ತಾನ್​ ಸೂಪರ್​ ಲೀಗ್​ (PSL) ನಡೆಸುತ್ತಾರೆ. ಈಗ ಐಪಿಎಲ್​ ಮತ್ತು ಪಿಎಸ್​ಎಲ್​​ ಅನ್ನು ಹೋಲಿಸಿ ಮಾತನಾಡಿದ್ದಕ್ಕೆ ಪಾಕಿಸ್ತಾನದ ನದೀಮ್​ ಓಮರ್​ ನಾವು ಐಪಿಎಲ್​ ಜೊತೆ ಕಾಂಪಿಟೇಶನ್​ ಮಾಡುತ್ತಿಲ್ಲ ಎಂದಿದ್ದಾರೆ.

ಅವರನ್ನು ಟಚ್​ ಮಾಡಲು ಸಾಧ್ಯವಿಲ್ಲ!

ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಮಾಲೀಕನಾಗಿರುವ ನದೀಮ್​ ಓಮರ್​ ಮೊದಲು ಐಪಿಎಲ್​ ಮತ್ತು ಪಿಎಸ್​​ಎಲ್​ ಎರಡೂ ಬೇರೆ-ಬೇರೆ ಕಾಲಮಾನದಲ್ಲಿ ನಡೆಯುತ್ತಿತ್ತು. ಆಗ ನಮ್ಮ ಟೂರ್ನಿಗೆ ವಿದೇಶಿ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷದಿಂದ ಐಪಿಎಲ್​​ ಜೊತೆ ನಮ್ಮ ಲೀಗ್​ ನಡೆಯುತ್ತಿದೆ. ಆದರೆ ಇದು ನಮಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದು, ನನ್ನ ತಂಡವನ್ನೇ ಮಾರುವ ಪರಿಸ್ಥಿತಿ ಎದುರಾಗಿದೆ ಎಂದು ನದೀಮ್​ ಹೇಳಿದ್ದಾರೆ.

ಐಪಿಎಲ್​ ಮತ್ತು ಪಿಎಸ್​ಎಲ್​ ಎರಡೂ ಬೇರೆ- ಬೇರೆ ಹಣಕಾಸಿ ಮಾಡೆಲ್​ ಹೊಂದಿವೆ. ಹೀಗಾಗಿ ಎರಡು ಟೂರ್ನಿಗಳು ಒಮ್ಮಲೆ ನಡೆದರೆ, ಅದು ಪಾಕಿಸ್ತಾನಕ್ಕೆ ಅಧಿಕ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಐಪಿಎಲ್​ ನಮಗಿಂತ ಬಹಳ ಶಕ್ತಿಶಾಲಿ ಹಾಗೂ ಹಣಕಾಸಿನ ವಿಷಯದಲ್ಲಿ ಬಹಳ ಶ್ರೀಮಂತವಾಗಿದೆ ಎಂದಿದ್ದಾರೆ. ಇದರಿಂದಾಗಿ ನಮಗೆ ಬರಬೇಕಾದ ಜಾಹೀರಾತುಗಳು ಬರುತ್ತಿಲ್ಲ, ನಾನು ಐಪಿಎಲ್​​ ಜತೆ ಪೈಪೋಟಿ ನಡೆಸುವುದು ಮೂರ್ಖತನವಾಗಿದೆ ಎಂದು ಹೇಳಿದ್ದಾರೆ, (ಏಜೆನ್ಸೀಸ್​).