ವಿವಿಎಸ್ ಲಕ್ಷ್ಮಣ್ 'ಕ್ರಿಕೆಟ್ ಡೈರೆಕ್ಟರ್' ಆಗಿ ನೇಮಕವಾಗುವ ಸಾಧ್ಯತೆ 
ಕ್ರಿಕೆಟ್

ಟೀಂ ಇಂಡಿಯಾದಲ್ಲಿ ಮೇಜರ್​ ಸರ್ಜರಿ: 'ಕ್ರಿಕೆಟ್​​ ಡೈರೆಕ್ಟರ್​​​' ಆಗಿ ಲಕ್ಷ್ಮಣ್​ ನೇಮಕ? ಗಂಭೀರ್​-ಅಗರ್ಕರ್​​ ಅಧಿಕಾರಕ್ಕೆ ಕುತ್ತು? VVS Laxman as Cricket Director

ಪ್ರಮುಖ ಮುಖ್ಯಾಂಶಗಳು

  • ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ
  • ವಿವಿಎಸ್ ಲಕ್ಷ್ಮಣ್ 'ಕ್ರಿಕೆಟ್ ಡೈರೆಕ್ಟರ್' ಆಗಿ ನೇಮಕವಾಗುವ ಸಾಧ್ಯತೆ
  • ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಅಧಿಕಾರದ ಮೇಲೆ ಇದರ ಪ್ರಭಾವವೇನು?
ನವದೆಹಲಿ: ಕಳೆದ ಕೆಲ ದಿನಗಳಿಂದ ಟೀಂ ಇಂಡಿಯಾ ಹಾಗೂ ಬಿಸಿಸಿಐ ವಲಯದಲ್ಲಿ ತಂಡದ ಕೋಚಿಂಗ್​ ವಿಭಾಗದಲ್ಲಿ ಮೇಜರ್​ ಸರ್ಜರಿ ನಡೆಯಲಿದೆ ಎಂಬ ಗುಸು-ಗುಸು ಜೋರಾಗಿ ಕೇಳಿ ಬರುತ್ತಿದೆ.
ಭಾರತ ತಂಡ ಇತ್ತೀಚೆಗೆ ಇಂಗ್ಲೆಂಡ್​ ಮತ್ತು ಐರ್ಲೆಂಡ್ ವಿರುದ್ಧ ಸೋಲನ್ನು ಅನುಭವಿಸಿದ ಕಾರಣ, ಆಟಗಾರರ ಆಯ್ಕೆ ಸಮಿತಿ ಹಾಗೂ ತರಬೇತಿಗಾರರ ವಿಭಾಗದಲ್ಲಿ ಬದಲಾವಣೆ ತರಲು ಬಿಸಿಸಿಐ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಕೆಲವು ದಿನಗಳ ಹಿಂದೆ, ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಅಜಿತ್​ ಅಗರ್ಕರ್​ ಅವರನ್ನು ಕೆಳಗಿಸುತ್ತಾರೆ, ಗೌತಮ್​ ಗಂಭೀರ್​ ಅವರನ್ನು ಮುಖ್ಯ ಕೋಚ್​ ಹುದ್ದಯಿಂದ ಹಿಂಬಡ್ತಿ ನೀಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಆದರೆ ಈಗ ಹೊಸದೊಂದು ಮಾಹಿತಿ ಲಭ್ಯವಾಗಿದ್ದು, ಭಾರತ ತಂಡದ ಮಾಜಿ ಆಟಗಾರ ವಿವಿಎಸ್​ ಲಕ್ಷ್ಮಣ್ (VVS Laxman as Cricket Director)​ ಅವರನ್ನು ಬಿಸಿಸಿಐ ಕ್ರಿಕೆಟ್ ನಿರ್ದೇಶಕ ಎಂಬ ಹುದ್ದೆಯನ್ನು ಸೃಷ್ಟಿಸಿ ವಿವಿಎಸ್​ ನನ್ನು ನೇಮಕ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಗೌತಿ, ಅಗರ್ಕರ್​​ ಕತೆಯೇನು?

ಈಗ ವಿವಿಎಸ್​ ಲಕ್ಷ್ಮಣ್​ ಬಿಸಿಸಿಐ ಕ್ರಿಕೆಟ್ ನಿರ್ದೇಶಕರಾಗಿ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದ ಹಿನ್ನಲೆ, ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿರುವ ಗೌತಮ್​ ಗಂಭೀರ್​ ಹಾಗೂ ಮುಖ್ಯ ಆಯ್ಕೆಗಾರ ಅಜಿತ್​ ಅಗರ್ಕರ್​​ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲಿದ್ದಾರಾ? ಎಂಬ ಪ್ರಶ್ನೆ ಬಹುತೇಕರಿಗೆ ಕಾಡುತ್ತಿದೆ.

ಆದರೆ, ಲಭ್ಯ ಮಾಹಿತಿ ಪ್ರಕಾರ, ವಿವಿಎಸ್​ ಲಕ್ಷ್ಮಣ್​ ನಿರ್ವಹಿಸಲಿರುವ ಹುದ್ದೆಯು ಆಡಳಿತಾತ್ಮಕವಾಗಿದ್ದು, ತಂಡದಲ್ಲಿ ಏನೇ ಬದಲಾವಣೆ ಪಡೆಯುವ ಮುನ್ನ ಇವರ ಅನುಮತಿ ಪಡೆಯುವುದು ಅನಿವಾರ್ಯವಾಗಬಹುದು. ಆದರೆ ಲಕ್ಷ್ಮಣ್​ ತಂಡದ ಅಟಗಾರರ ಆಯ್ಕೆ ಹಾಗೂ ತರಬೇತಿಯಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿರುವುದಿಲ್ಲ ಎನ್ನಲಾಗುತ್ತಿದೆ.


ಆದರೆ, ತಂಡದಲ್ಲಿ ತೆಗೆದುಕೊಳ್ಳಲಾಗುವ ಎಲ್ಲಾ ನಿರ್ಧಾರಗಳಿಗೆ ಲಕ್ಷ್ಮಣ್​ ಅನುಮತಿ ಅಗ್ಯಗತ್ಯವಾಗಲಿದ್ದು, ಒಂದರ್ಥದಲ್ಲಿ ಗಂಭೀರ್​ ಹಾಗೂ ಅಗರ್ಕರ್​ ಮೇಲೆ ನಿಯಂತ್ರಣ ಸಾಧಿಸಲು ಬಿಸಿಸಿಐ ಲಕ್ಷ್ಮಣ್​ ಅವರನ್ನು ನೇಮಕ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಹಿಂಬಡ್ತಿಯಿಲ್ಲ!


ಆದರೆ, ಲಕ್ಷ್ಮಣ್​ ಆಗಮನದಿಂದ ಗೌತಮ್​ ಗಂಭೀರ್​ ಹಾಗೂ ಅಜಿತ್​ ಅಗರ್ಕರ್​ ಅವರ ಹುದ್ದೆಗೆ ಯಾವುದೇ ಕುತ್ತು ಬರುವುದಿಲ್ಲ, 2027 ರ ಏಕದಿನ ವಿಶ್ವಕಪ್​ವರೆಗೆ ಇವರು ತಮ್ಮ ಹುದ್ದೆಯಲ್ಲಿಯೇ ಮುಂದುವರಿಯಲಿದ್ದಾರೆ. ಆದರೆ ಏನೇ ಕೆಲಸ ಮಾಡುವ ಮುನ್ನ ಲಕ್ಷ್ಮಣ್​ ಅವರಲ್ಲಿ ಚರ್ಚಿಸಿ, ಅನುಮತಿ ಪಡೆಯಬೇಕಾಗುತ್ತದೆ ಎನ್ನಲಾಗಿದೆ.

ಅಧಿಕೃತ ಪ್ರಕಟನೆಯಲ್ಲ!

ಆದರೆ, ಲಕ್ಷ್ಮಣ್​ ನೇಮಕಾತಿ ಬಗ್ಗೆ ಬಿಸಿಸಿಐ ಅಧಿಕೃತ ಪ್ರಕಟನೆಯನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ. ಅಂತಯೇ, ಬಿಸಿಸಿಐ ಕ್ರಿಕೆಟ್ ನಿರ್ದೇಶಕ ಎಂಬ ಹುದ್ದೆಯನ್ನು ಸೃಷ್ಟಿಸಿರುವುದಾಗಿ ಕೂಡ ಎಲ್ಲಿಯೂ ಸಹ ಹೇಳಿಲ್ಲ. ಆದರೆ ಈ ಬಗ್ಗೆ ಕ್ರಿಕೆಟ್​ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ, (ಏಜನ್ಸೀಸ್).