ಮೊಹಮ್ಮದ್ ಕೈಫ್ ವಿರುದ್ಧ ನಾಲಿಗೆ ಹರಿಬಿಟ್ಟ ಮೊಹಮ್ಮದ್ ಅಮೀರ್
- ಭಾನುವಾರ (ಮಾ.8) ಟಿ-20 ವಿಶ್ವಕಪ್ ಫೈನಲ್
- ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ಅಂತಿಮ ಪಂದ್ಯ
- ಮೊಹಮ್ಮದ್ ಕೈಫ್ ವಿರುದ್ಧ ನಾಲಿಗೆ ಹರಿಬಿಟ್ಟ ಮೊಹಮ್ಮದ್ ಅಮೀರ್
- ನೀವು ಕೇವಲ ಫೀಲ್ಡಿಂಗ್ ಮಾಡಿ ದೇಶಕ್ಕೆ ಆಡಿದವ ಎಂದ ಪಾಕ್ ಬೌಲರ್
ಕ್ರಿಕೆಟ್: ಪ್ರಸ್ತುತ ನಡೆಯುತ್ತಿರುವ ಟಿ-20 ವಿಶ್ವಕಪ್ (T20 World Cup) ಟೂರ್ನಾಮೆಂಟ್ ಅಂತಿಮ ಹಂತ ತಲುಪಿದ್ದು, ಫೈನಲ್ ಪಂದ್ಯಾವಳಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ.
ಭಾನುವಾರ (ಮಾ.8) ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಹೈ ವೋಲ್ಟೆಜ್ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮೊದಲು ಮೈದಾನದ ಹೊರಗಡೆ ಇನ್ನೊಂದು ರೀತಿಯ ಕಾದಾಟ ನಡೆಯುತ್ತಿದೆ.
ನೀನು ಕೇವಲ ಫೀಲ್ಡಿಂಗ್ನಿಂದ ಕ್ರಿಕೆಟ್ ಆಡಿದೆ
ಈ ಟಿ-20 ವಿಶ್ವಕಪ್ನಿಂದ ಪಾಕಿಸ್ತಾನ ಹೊರಬಿದ್ದಾಗಿನಿಂದ ಪಾಕ್ನ ಮಾಜಿ ಬೌಲರ್ ಮೊಹಮ್ಮದ್ ಆಮೀರ್ ಭಾರತ ಈಗ ಹೊರಹೋಗುತ್ತದೆ, ಆಗ ಹೊರಹೋಗುತ್ತದೆ ಎಂದು ತಮ್ಮ ವಿಫಲ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಮೊಹಮ್ಮದ್ ಅಮೀರ್ ಅವರ ಈ ಹೇಳಿಕೆಗಳಿಗೆ ವಿರೋಧ ವ್ಯಕ್ತ ಪಡಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರಿಗೆ ಅಮೀರ್ ತಿರುಗೇಟು ನೀಡಿದ್ದಾರೆ.
ಕೈಫ್ ವಿರುದ್ಧ ನಾಲಿಗೆ ಹರಿಬಿಟ್ಟಿರುವ ಅಮೀರ್, ಮೊಹಮ್ಮದ್ ಕೈಫ್ ಕೇವಲ ಮೈದಾನದಲ್ಲಿ ಫೀಲ್ಡಿಂಗ್ ಬಿಟ್ಟು ಬೇರೇನೂ ಮಾಡಿಲ್ಲ, ಇವನು ಐಪಿಎಲ್ನಲ್ಲಿ ಕೇವಲ 29 ಮ್ಯಾಚ್ಗಳನ್ನು ಆಡಿದ್ದಾನೆ, ಈಗ ಭಾರತದಲ್ಲಿ ಪ್ರಚಾರಗಿಟ್ಟಿಸಿಕೊಳ್ಳಲು ನನ್ನ ವಿರುದ್ಧ ಮಾತನಾಡುತ್ತಿದ್ದಾನೆ ಎಂದು ಹೇಳಿದ್ದಾನೆ.
ನನಗೆ ಯಾವುದೇ ಪ್ರಚಾರದ ಅಗತ್ಯವಿಲ್ಲ, ನಾನು ಸುಮಾರು 300 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದೇನೆ, ನೀನು (ಕೈಫ್) ಸೌರವ್ ಗಂಗೂಲಿಗೆ ಕೃತಜ್ಞನಾಗಿರಬೇಕು, ಏಕೆಂದರೆ ಅವರಿಂದಲೇ ನೀನು ಭಾರತದ ಪರ ಆಡುವಂತಾಯಿತು ಎಂದು ಮೊಹಮ್ಮದ್ ಅಮೀರ್ ಹೇಳಿದ್ದಾರೆ.
ಅಭಿಷೇಕ್ ಶರ್ಮಾ ವಿರುದ್ಧ ಅಮೀರ್ ಆಕ್ಷೇಪ
ಪ್ರಸ್ತುತ ಟಿ-20 ಯ ನಂಬರ್ ಒನ್ ಬ್ಯಾಟರ್ ಅಭಿಷೇಕ್ ಶರ್ಮಾ ವಿರುದ್ಧವು ನಾಲಿಗೆ ಹರಿಬಿಟ್ಟಿದ್ದ ಮೊಹಮ್ಮದ್ ಅಮೀರ್ ಅಭಿಷೇಕ್ ಶರ್ಮಾ ಒಬ್ಬ ಸ್ಲಾಗರ್ ಬ್ಯಾಟರ್ ಅವನು ಎಲ್ಲಾ ಪಂದ್ಯಗಳಲ್ಲಿ ಒಂದೇ ರೀತಿ ಬ್ಯಾಟಿಂಗ್ ಮಾಡುತ್ತಾನೆ, ಆದ ಕಾರಣ ಅವನು ಒಬ್ಬ ಯಶಸ್ವಿ ಬ್ಯಾಟ್ಸಮನ್ ಎಂದು ಹೇಳಲಾಗಲ್ಲ ಎಂದು ಅಮೀರ್ ಹೇಳಿದ್ದರು.
ಮೊಹಮ್ಮದ್ ಕೈಫ್ ಹೇಳಿದ್ದೇನು?
ಅಭಿಷೇಕ್ ಶರ್ಮಾ ವಿರುದ್ಧ ನಿರಂತರ ಹೇಳಿಕೆ ನೀಡುತ್ತಿದ್ದ ಮೊಹಮ್ಮದ್ ಅಮೀರ್, ಮೇಲೆ ಹರಿಹಾಯ್ದ ಮೊಹಮ್ಮದ್ ಕೈಫ್ ಭಾರತ ಕ್ರಿಕೆಟ್ ತಂಡದ ಬಗ್ಗೆ ಮಾತನಾಡುವ ಮೊದಲು, ಪಾಕಿಸ್ತಾನ ಯಾರ ವಿರುದ್ಧ ಸೋತು ಟೂರ್ನಾಮೆಂಟಿನಿಂದ ಹೊರಬಿದ್ದಿದ್ದೆ ಎನ್ನುವುದನ್ನು ನೆನಪಿಸಿಕೊ. ನಿಮ್ಮ ದೇಶ ಕ್ರಿಕೆಟ್ನಲ್ಲಿ ಅಂಬೆಗಾಲಿಡುತ್ತಿರುವ ಅಮೆರಿಕ ತಂಡದಿಂದ ಪರಾಜಿತಗೊಂಡ ನೀವು ಭಾರತದ ವಿರುದ್ಧ ಮಾತನಾಡುತ್ತಿರಾ? ನಿಮಗೆ ಆ ಯೋಗ್ಯತೆ ಇದೆಯೇ? ಎಂದು ಕೈಫ್ ಪ್ರಶ್ನಿಸಿದ್ದರು.
ನಮಗೆ ನಿಮ್ಮ ದೇಶದ ಬಗ್ಗೆ ಮಾತನಾಡುವ ಅಗತ್ಯವಿಲ್ಲ, ನಿಮ್ಮ ದೇಶದ ಕ್ರಿಕೆಟ್ ತುಂಬಾ ಹಿಂದೆ ಉಳಿದಿದೆ, ನಿಮ್ಮ ತಂಡದಲ್ಲಿ ಉತ್ತಮ ಆಟಗಾರರಿಲ್ಲ, ಉತ್ತಮ ನಾಯಕರಿಲ್ಲ. ನೀವು ಈ ಜನ್ಮದಲ್ಲಿ ನಮ್ಮ ಮಟ್ಟಕ್ಕೆ ಬರಲು ಸಾಧ್ಯವಿಲ್ಲ. ಮೊದಲು ನಿಮ್ಮ ದೇಶದ ತಂಡವನ್ನು ಹೇಗೆ ಬಲಪಡಿಸಬೇಕು ಎಂಬುದರ ಕುರಿತು ವಿಚಾರ ಮಾಡಿ, ಆಮೇಲೆ ಬೇರೆ ದೇಶದ ತಂಡದ ಬಗ್ಗೆ ಮಾತನಾಡಿ ಎಂದು ಮೊಹಮ್ಮದ್ ಕೈಫ್ ತಮ್ಮ ಆಕ್ರೋಶ ಹೊರಹಾಕಿದ್ದರು,(ಏಜನ್ಸೀಸ್).