ಐಸಿಸಿ ಬಾಸ್ ಜೈ ಶಾರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಲಲಿತ್ ಮೋದಿ!
- ಐಪಿಎಲ್ ಅಬ್ಬರದ ನಡುವೆ ಜಾಗತಿಕ ಕ್ರಿಕೆಟ್ ಇಕ್ಕಟ್ಟಿನಲ್ಲಿದೆ
- ಜಾಗತಿಕ ಕ್ರಿಕೆಟ್ ಉಳಿಸಲು ಐಸಿಸಿ ಅಧ್ಯಕ್ಷ ಜೈ ಶಾ ಸಮರ್ಥ ವ್ಯಕ್ತಿ
- ಐಸಿಸಿ ಬಾಸ್ ಜೈ ಶಾರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಲಲಿತ್ ಮೋದಿ!
ಲಂಡನ್: ಐಪಿಎಲ್ನ ಪ್ರಭಾವದಿಂದ ಜಾಗತಿಕ ಕ್ರಿಕೆಟ್ನ್ನು ಉಳಿಸುವ ಶಕ್ತಿ ಕೇವಲ ಐಸಿಸಿ ಅಧ್ಯಕ್ಷನಾಗಿರುವ ಜೈ ಶಾ ಅವರಿಗೆ ಮಾತ್ರ ಇದೆ ಎಂದು ಬಿಸಿಸಿಐ ನ ಮಾಜಿ ಉಪಾಧ್ಯಕ್ಷ ಹಾಗೂ ಐಪಿಎಲ್ನ ಸ್ಥಾಪಕ ಲಲಿತ್ ಮೋದಿ (Lalit Modi on Jay Shah) ಹೇಳಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲಲಿತ್ ಮೋದಿ, ಜಾಗತಿಕ ಕ್ರಿಕೆಟ್ನ ಬೆಳವಣಿಗೆಯಲ್ಲಿ ಶಾ ಅವರ ಕೊಡುಗೆ ಮಹತ್ವದಾಗಿದ್ದು, ಐಪಿಎಲ್ನ ಅಪಾಯಕಾರಿ ಕ್ರೇಜ್ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್ನ್ನು ಅವರು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಶ್ಲಾಘನಾರ್ಹ ಎಂದಿದ್ದಾರೆ.
ಇವರೊಬ್ಬರೇ ಸಮರ್ಥ ವ್ಯಕ್ತಿ!
ಐಪಿಎಲ್ ಈಗ ಈಡೀ ಕ್ರಿಕೆಟ್ನ್ನೇ ತಿಂದು ಹಾಕುವ ಮಟ್ಟಿಗೆ ಬೆಳೆದಿದೆ. ಐಪಿಎಲ್ನ ಪ್ರಭಾವ ಕೇವಲ ಭಾರತದ ಕ್ರಿಕೆಟ್ ಮೇಲೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಟೂರ್ನಿಗಳ ಮೇಲೆ ಕೂಡ ಅಡ್ಡ ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ಜೈ ಶಾ ಐಸಿಸಿಯನ್ನು ಮುನ್ನಡೆಸುತ್ತಿರುವುದು ಕಡಿಮೆ ಸಾಹಸದ ಕೆಲಸ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ.
ಅದೇ ರೀತಿ ರಾಜ್ಯದ ಕ್ರಿಕೆಟ್ ಅಸೋಸಿಯೇಷನ್ಗಳನ್ನು ಅಭಿವೃದ್ಧಿ ಪಡಿಸುವತ್ತ ಜೈ ಶಾ ಕಾರ್ಯಪ್ರವೃತ್ತರಾಗಿದ್ದಾರೆ. ಇದರಿಂದ ಭಾರತ ಕ್ರಿಕೆಟ್ ಜಗತ್ತಿನ ಅನಭಿಷಕ್ತ ದೊರೆಯಾಗಬಹುದು ಎಂದು ಲಲಿತ್ ಮೋದಿ ಹೇಳಿದ್ದಾರೆ.
ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಲವಾರು ಸುಧಾರಣೆಗಳ ಅಗತ್ಯವಿದೆ. ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಜೈ ಶಾ ಹೇಳಿ ಮಾಡಿಸಿದ ವ್ಯಕ್ತಿಯಾಗಿದ್ದು, ಪ್ರಸ್ತುತ ಅವರಿಂಗ ಸಮರ್ಥ ನಾಯಕ ಐಸಿಸಿ ವಲಯದಲ್ಲಿ ಇಲ್ಲ ಎಂದು ಹೇಳಬಹುದೆಂದು ಉದ್ಯಮಿ ಲಲಿತ್ ಮೋದಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್).