ಎಲ್ಎಸ್ಜಿ ನಾಯಕ ರಿಷಬ್ ಪಂತ್ಗೆ ತಂಡದ ಮಾಲೀಕನಿಂದ ಖಡಕ್ ವಾರ್ನಿಂಗ್
- ಮಾರ್ಚ್ 28 ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿ
- ಈ ಸಲ ಕೇವಲ ಪ್ಲೇ-ಆಫ್ಸ್ ಸಾಲಲ್ಲ; ಟ್ರೋಫಿಯೇ ಬೇಕೆಂದ ಲಖನೌ ಮಾಲೀಕ ರಾಜೀವ್ ಗೋಯಂಕಾ
- ಎಲ್ಎಸ್ಜಿ ನಾಯಕ ರಿಷಬ್ ಪಂತ್ಗೆ ತಂಡದ ಮಾಲೀಕನಿಂದ ಖಡಕ್ ವಾರ್ನಿಂಗ್
ಲಖನೌ: ಇನ್ನೆರಡು ದಿನಗಳಲ್ಲಿ (ಮಾರ್ಚ್ 28) ಭಾರತದ ಕ್ರಿಕೆಟ್ ಹಬ್ಬವಾದ ಐಪಿಎಲ್ (IPL 2026) ಆರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳು ಇದನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಟೂರ್ನಿಯ ಪ್ರಾರಂಭಿಕ ಪಂದ್ಯವು ರಾಯಲ್ ಚಾಂಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ ಹೈದರಾಬಾದ್ ನಡುವೆ ಜರುಗಲಿದೆ.
ಈ ಟೂರ್ನಾಮೆಂಟ್ನಲ್ಲಿ ಹತ್ತು ತಂಡಗಳು ಒಂದು ಟ್ರೋಫಿ ಪಡೆಯಲು ಸೆಣೆಸಾಡಲಿದ್ದು, ಮಾರ್ಚ್ 28 ರಂದು ಆರಂಭವಾಗಲಿರುವ ಈ ಹಣಾಹಣಿ ಮೇ 31 ರಂದು ಕೊನೆಗೊಳ್ಳಲಿದೆ.
ಈ ಸಲ ನನಗೆ ಟ್ರೋಫಿ ಬೇಕು!
2008 ರಿಂದ ಆರಂಭವಾಗಿರುವ ಈ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐದು ಬಾರಿ ಟ್ರೋಫಿಗಳನ್ನು ಪಡೆದಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರು ಸಲ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಹಾಗೆಯೇ, ರಾಜಸ್ಥಾನ್ ರಾಯಲ್ಸ್, ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್ ಹಾಗೂ ರಾಯಲ್ ಚಾಂಲೆಜರ್ಸ ಬೆಂಗಳೂರು ತಂಡ ತಲಾ ಒಂದು ಬಾರಿ ಈ ಟೂರ್ನಿಯಲ್ಲಿ ಚಾಂಪಿಯನ್ಗಳಾಗಿ ಹೊರಹೊಮ್ಮಿದ್ದಾರೆ.
ಈ ಹಿನ್ನಲೆಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯಂಕಾ, ತಂಡದ ನಾಯಕ ರಿಷಬ್ ಪಂತ್ಗೆ ಈ ಬಾರಿ ನಮ್ಮ ತಂಡ ಕೇವಲ ಪ್ಲೇ-ಆಫ್ಸ್ ತಲುಪಿದರೆ ಸಾಲದು ನನ್ನ ಕೈಗೆ ಐಪಿಎಲ್ ಟ್ರೋಫಿ ಬಂದು ಸೇರಬೇಕೆಂದು ತಾಕೀತು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಟೂರ್ನಿ ಮೊದಲು ಶ್ರೀ ರಾಮನ ದರ್ಶನ ಮಾಡಿದ ತಂಡ
ಐಪಿಎಲ್ ಪ್ರಾರಂಭಕ್ಕೂ ಮುನ್ನ ಲಖನೌ ತಂಡದ ಮಾಲೀಕ ಸಂಜೀವ್ ಗೋಯಂಕಾ ಸಹಿತ ತಂಡದ ಆಟಗಾರರು ಅಯೋಧ್ಯೆಯ ರಾಮ ಜನ್ಮಭೂಮಿಯ ದರ್ಶನ ಪಡೆದುಕೊಂಡು ಬಂದಿದ್ದು, ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿರುವುದಾಗಿ ತಂಡದ ಮ್ಯಾನೇಜ್ಮೆಂಟ್ ತಿಳಿಸಿತ್ತು.
ಡೆಲ್ಲಿ ವಿರುದ್ಧ ಮೊದಲ ಪಂದ್ಯ
ಮಾರ್ಚ್ 28 ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಬುಧವಾರ (ಏಪ್ರಿಲ್ 1) ದಂದು ಲಖನೌ ಸೂಪರ್ ಜೈಂಟ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆಡಲಿದೆ.
2025 ರ ಐಪಿಎಲ್ನಲ್ಲಿ ಲಖನೌ ತಂಡ ಆಡಿದ 14 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆದ್ದು 8 ಪಂದ್ಯಗಳಲ್ಲಿ ಸೋಲುವ ಮೂಲಕ 12 ಪಾಯಿಂಟ್ಗಳನ್ನು ಪಡೆದು, ಪಾಯಿಂಟ್ಸ್ ಪಟ್ಟಿಯಲ್ಲಿ 7 ಸ್ಥಾನ ಪಡೆದುಕೊಂಡಿತ್ತು,(ಏಜನ್ಸೀಸ್).