ಐಪಿಎಲ್ 2026ರಲ್ಲಿ ವಿರಾಟ್ ಕೊಹ್ಲಿ ಅವರ ಸಂಭಾವನೆ ಎಷ್ಟು? 
ಕ್ರಿಕೆಟ್

ಐಪಿಎಲ್​ 2026: ಒಂದು ಪಂದ್ಯಕ್ಕೆ ಕಿಂಗ್​ ಕೊಹ್ಲಿ ಪಡೆಯುವ ಸಂಭಾವನೆ ಎಷ್ಟು? ಫೀಸ್​ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ! Virat Kohli Earning

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್ 2026ರಲ್ಲಿ ವಿರಾಟ್ ಕೊಹ್ಲಿ ಅವರ ಸಂಭಾವನೆ ಎಷ್ಟು?
  • ಪ್ರತಿ ಪಂದ್ಯಕ್ಕೆ ಕಿಂಗ್​ ಕೊಹ್ಲಿ ಎಷ್ಟು ಚಾರ್ಜ ಮಾಡುತ್ತಾರೆ
  • ವಿರಾಟ್​ನನ್ನು ದಾಖಲೆಗಳ ಸರದಾರ ಎಂದು ಕರೆಯುವುದ್ಯಾಕೆ?
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂದ್ರೆ ಅದು ಬರೀ ಕ್ರಿಕೆಟ್ ಮಾತ್ರವಲ್ಲ, ಅದು ಹಣದ ಹೊಳೆಯನ್ನು ಹರಿಸುವ ಅಕ್ಷಯ ಪಾತ್ರೆ ಎಂದರೂ ತಪ್ಪಾಗದು. ಈ ಐಪಿಎಲ್​ ಎಂಬ ಅರಮನೆಯ ರಾಜನ್ಯಾರೆಂದರೆ ಅದು ನಮ್ಮ ರನ್​ ಮಷೀನ್ ಖ್ಯಾತಿಯ ವಿರಾಟ್​ ಕೊಹ್ಲಿ ಎಂದರೆ ಸುಳ್ಳಲ್ಲ.
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಇಂದಿನವರೆಗೆ ಒಂದೇ ತಂಡದ (RCB) ಪರ ಆಡುತ್ತಿರುವ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಕೊಹ್ಲಿ ಅವರದ್ದು. ಆದರೆ, ಈ 'ಕಿಂಗ್' ಒಂದು ಪಂದ್ಯಕ್ಕೆ ಎಷ್ಟು ಕೋಟಿ (Virat Kohli Earning) ಜೇಬಿಗೆ ಇಳಿಸುತ್ತಾರೆ ಎಂದು ನೀವು ಎಂದಾದರೂ ಲೆಕ್ಕ ಹಾಕಿದ್ದೀರಾ? ಅದರ ವಿವರಣೆಯನ್ನು ನಾವಿಂದು ತಿಳಿಯೋಣ.

21 ಕೋಟಿಯ ರಿಟೇನ್!

ಐಪಿಎಲ್ 2026ರ ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿಯನ್ನು ಬರೋಬ್ಬರಿ 21 ಕೋಟಿ ರೂಪಾಯಿ ನೀಡಿ ಉಳಿಸಿಕೊಂಡಿದೆ (Retention). ಇದು ಲೀಗ್ ಇತಿಹಾಸದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಯನ್ನು ಅಗ್ರಸ್ಥಾನದಲ್ಲಿರಿಸಿದೆ. ಈ 21 ಕೋಟಿ ಕೇವಲ ಒಂದು ಸೀಸನ್‌ನ ಒಪ್ಪಂದದ ಮೊತ್ತವಾಗಿದೆ.

ಒಂದು ಪಂದ್ಯಕ್ಕೆ ಎಷ್ಟು ಕೋಟಿ?

ಐಪಿಎಲ್‌ನಲ್ಲಿ ಒಂದು ತಂಡ ಲೀಗ್ ಹಂತದಲ್ಲಿ ಕನಿಷ್ಠ 14 ಪಂದ್ಯಗಳನ್ನು ಆಡುತ್ತದೆ. ವಿರಾಟ್ ಕೊಹ್ಲಿ ಅವರ 21 ಕೋಟಿ ರೂಪಾಯಿಯನ್ನು ಈ 14 ಪಂದ್ಯಗಳಿಗೆ ಭಾಗಿಸಿದರೆ, ಅವರು ಕೇವಲ ಒಂದು ಪಂದ್ಯ ಆಡಲು ಸುಮಾರು 1.5 ಕೋಟಿ ರೂಪಾಯಿ ಪಡೆಯುತ್ತಾರೆ. ಅಂದರೆ ಅವರು ಮೈದಾನದಲ್ಲಿ ಕಳೆಯುವ ಪ್ರತಿ ನಿಮಿಷವೂ ಚಿನ್ನದಷ್ಟೇ ಬೆಲೆಬಾಳುತ್ತದೆ ಎಂದರೆ ಸುಳ್ಳಲ್ಲ. 

ಪಂದ್ಯದ ಶುಲ್ಕ ಬೇರೆ!

ಒಪ್ಪಂದದ ಮೊತ್ತದ ಜೊತೆಗೆ, ಐಪಿಎಲ್ ನಿಯಮದಂತೆ ಪ್ರತಿ ಪಂದ್ಯ ಆಡಿದ್ದಕ್ಕಾಗಿ ಆಟಗಾರರಿಗೆ ಪ್ರತ್ಯೇಕ ಮ್ಯಾಚ್ ಫೀಸ್ ನೀಡಲಾಗುತ್ತದೆ. ವಿರಾಟ್ ಕೊಹ್ಲಿ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿ ಪಂದ್ಯದ ಶುಲ್ಕವಾಗಿ ಪಡೆಯುತ್ತಾರೆ. ಅಂದರೆ 14 ಪಂದ್ಯಗಳಿಂದ ಕೇವಲ ಮ್ಯಾಚ್ ಫೀಸ್ ರೂಪದಲ್ಲೇ ಅವರಿಗೆ 1.05 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸಿಗುತ್ತದೆ. ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಮತ್ತು ಇತರ ಜಾಹೀರಾತುಗಳ ಆದಾಯವನ್ನು ಸೇರಿಸಿದರೆ ಈ ಅಂಕಿ-ಅಂಶ ಇನ್ನು ಎಲ್ಲಿಯೋ ತಲುಪುತ್ತದೆ.

ದಾಖಲೆಗಳ ಸರದಾರ ಕಿಂಗ್ ಕೊಹ್ಲಿ

ಬರೀ ಹಣದ ವಿಷಯದಲ್ಲಿ ಮಾತ್ರವಲ್ಲ, ಮೈದಾನದ ಪ್ರದರ್ಶನದಲ್ಲೂ ಕೊಹ್ಲಿ ನಂಬರ್ 1 ಆಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 8,000 ರನ್​ಗಳ ಮೈಲಿಗಲ್ಲು ದಾಟಿದ ವಿಶ್ವದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಒಟ್ಟು 268 ಪಂದ್ಯಗಳಲ್ಲಿ ಮೈದಾನಕ್ಕಿಳಿದಿರುವ ವಿರಾಟ್​ ಇಲ್ಲಿವರೆಗೆ ಸುಮಾರು 8,730 ರನ್​ಗಳನ್ನು ಬಾರಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 64 ಅರ್ಧಶತಕಗಳು ಕೂಡಿವೆ.
ಈ ಅಂಕಿ-ಅಂಶಗಳೇ ಸಾಕು, ಆರ್‌ಸಿಬಿ ತಂಡ ಯಾಕೆ ಅವರಿಗೆ ಇಷ್ಟೊಂದು ದೊಡ್ಡ ಮೊತ್ತ ನೀಡುತ್ತದೆ ಎಂದು ಹೇಳಲು. ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ, ಅವರು ಐಪಿಎಲ್‌ನ ಅತಿದೊಡ್ಡ ಬ್ರ್ಯಾಂಡ್ ಎಂದರೆ ಸುಳ್ಳಲ್ಲ,(ಏಜನ್ಸೀಸ್​).