ಮೊದಲು ಫೋಟೋ ತೆಗೆದಿಟ್ಕೋ... ಪಾಕ್ ಮಾಜಿ ನಾಯಕ ಇಂಜಮಾಮ್ನಿಂದ ಕಿವೀಸ್ ನಾಯಕನಿಗೆ ಸಲಹೆ! IND VS NZ Final
- ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್
- ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ರೋಚಕ ಫೈನಲ್ ಪಂದ್ಯ
- ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ ಎಚ್ಚರಿಕೆ ಸಂದೇಶ
IND VS NZ Final : ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇನ್ನೂ ಕೆಲವೇ ನಿಮಿಷಗಳಲ್ಲಿ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ರೋಚಕ ಫೈನಲ್ ಪಂದ್ಯಕ್ಕಾಗಿ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ. ಆಡುವುದಕ್ಕೂ ಮೊದಲು ಪಿಚ್‌ನ ಫೋಟೋ ತೆಗೆದುಕೊಳ್ಳಿ ಎಂದು ಇಂಜಮಾಮ್, ನ್ಯೂಜಿಲೆಂಡ್‌ಗೆ ಸಲಹೆ ನೀಡಿದ್ದಾರೆ.
2023ರ ಏಕದಿನ ವಿಶ್ವಕಪ್ ಸಮಯದಲ್ಲಿ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಫೈನಲ್ ಪಂದ್ಯಕ್ಕೂ ಮುನ್ನ ಪಿಚ್ ಫೋಟೋಗಳನ್ನು ತೆಗೆದುಕೊಂಡಿದ್ದರು. ಅಂದು ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿತ್ತು. ಅದೇ ರೀತಿ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಕೂಡ ಮುಂಚಿತವಾಗಿ ಪಿಚ್ ಫೋಟೋ ತೆಗೆದುಕೊಳ್ಳಬೇಕು ಎಂದು ಇಂಜಮಾಮ್-ಉಲ್-ಹಕ್ ಸಲಹೆ ನೀಡುತ್ತಿದ್ದಾರೆ. ಒಂದು ವೇಳೆ ಫೋಟೋ ತೆಗೆಯದಿದ್ದರೆ, ಫಿಕ್ಸಿಂಗ್‌ಗೆ ಅವಕಾಶವಿರುತ್ತದೆ ಎಂದು ಇಂಜಮಾಮ್ ಎಚ್ಚರಿಸಿದ್ದಾರೆ.
ಮತ್ತೊಂದೆಡೆ, ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದ ವೇಳೆ ಬುಮ್ರಾ ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂಬ ವಿಚಿತ್ರ ವಾದವನ್ನು ಸಹ ಇಂಜಮಾಮ್ ಮಂಡಿಸಿದ್ದಾರೆ. ಬುಮ್ರಾರನ್ನು ನಿಷೇಧಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಆದರೆ, ಇಂಜಮಾಮ್ ವಾದಕ್ಕೆ ಯಾವುದೇ ಮನ್ನಣೆ ಸಿಗುವುದಿಲ್ಲ. ಏಕೆಂದರೆ, ಯಾವಾಗಲೂ ಟೀಮ್ ಇಂಡಿಯಾ ವಿರುದ್ಧ ಕಿಡಿಕಾರುವುದೇ ಇಂಜಮಾಮ್ ಕೆಲಸವಾಗಿದೆ.
ಒಟ್ಟಾರೆ, ಪಾಕಿಸ್ತಾನದ ಬಯಕೆ ಏನೆಂದರೆ, ಹೇಗಾದರೂ ಟೀಮ್ ಇಂಡಿಯಾ ಸೋಲಬೇಕೆನ್ನುವುದು. ಹೀಗಾಗಿ, ಎಷ್ಟು ಸಾಧ್ಯವೋ ಅಷ್ಟು ಭಾರತದ ವಿರುದ್ಧ ಅಪಪ್ರಚಾರದ ಮಾಡುತ್ತಲೇ ಇರುತ್ತಾರೆ. ಆದರೆ, ಈ ನೆಗೆಟಿವ್ ಪ್ರಚಾರದಿಂದ ಟೀಮ್ ಇಂಡಿಯಾಕ್ಕೆ ಹೆಚ್ಚು ಲಾಭ. ದಿನದಿಂದ ದಿನಕ್ಕೆ ಬಿಸಿಸಿಐ ಬಲಿಷ್ಠವಾಗುತ್ತಲೇ ಇದೆ. ಇಡೀ ವಿಶ್ವ ಕ್ರಿಕೆಟ್ ಇದೀಗ ಭಾರತವನ್ನು ಅವಲಂಬಿಸಿದೆ ಎಂದರೆ ತಪ್ಪಾಗಲಾರದು. ಇದನ್ನು ಪಾಕಿಸ್ತಾನದಿಂದ ಸಹಿಸಿಕೊಳ್ಳುವ ಆಗುತ್ತಿಲ್ಲ, (ಏಜೆನ್ಸೀಸ್).