ವೈಭವ್ ಸೂರ್ಯವಂಶಿಯಲ್ಲಿ ದಂತಕಥೆ ಡಾನ್ ಬ್ರಾಡ್‌ಮನ್ ಅವರ ಛಾಯೆ ಕಾಣಿಸುತ್ತಿದೆ: ರಾಬಿನ್ ಉತ್ತಪ್ಪ
- ವೈಭವ್ ಸೂರ್ಯವಂಶಿಯಲ್ಲಿ ದಂತಕಥೆ ಡಾನ್ ಬ್ರಾಡ್‌ಮನ್ ಅವರ ಛಾಯೆ ಕಾಣಿಸುತ್ತಿದೆ: ರಾಬಿನ್ ಉತ್ತಪ್ಪ
- ವಂಡರ್ ಕಿಡ್ನನ್ನು ಕ್ರಿಕೆಟ್ ದಂತಕಥೆಗೆ ಹೋಲಿಸಿದ ರಾಬಿನ್ ಉತ್ತಪ್ಪ
- ಇಬ್ಬರು ಎಲ್ಬಿಡ್ಲ್ಯೂ ಔಟ್ ಆಗಿದ್ದು ಕಡಿಮೆ ಎಂದ ಮಾಜಿ ಕ್ರಿಕೆಟಿಗ
ಕ್ರಿಕೆಟ್: ಈ ಬಾರಿಯ ಐಪಿಎಲ್ನಲ್ಲಿ ಸಕ್ಕತ್ ಸೌಂಡ್ ಮಾಡಿದ ಹೆಸರೆಂದರೆ ಅದು 15 ವರ್ಷದ ಪೋರ ವೈಭವ್ ಸೂರ್ಯವಂಶಿಯದ್ದಾಗಿದೆ. ಎದುರಿಗೆ ಬಂದ ಎಲ್ಲಾ ಬೌಲರ್ಗಳ ಬಾಲ್ಗಳನ್ನು ಬೌಂಡರಿಗಟ್ಟಿ ಟೀಂ ಇಂಡಿಯಾದ ಟಿ-20 ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಕೀರ್ತಿಗೆ ಸಹ ಪಾತ್ರನಾಗಿದ್ದಾನೆ.
ಈಗ ಇವರ ಆಟವನ್ನು ವಿಶ್ವ ಕ್ರಿಕೆಟ್ನ ದಂತಕಥೆ ಎಂದೇ ಕರೆಯಲ್ಪಡುವ ಡಾನ್ ಬ್ರಾಡ್‌ಮನ್ (ಸರ್, ಡೊನಾಲ್ಡ್ ಬ್ರಾಡ್‌ಮನ್) ಗೆ ಹೋಲಿಸಿ ಭಾರತ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ (Robin Uthappa on Vaibhav Suryavanshi) ನೀಡಿರುವ ಹೇಳಿಕೆ ಎಲ್ಲಡೆ ವೈರಲ್ ಆಗುತ್ತಿದೆ.
ಬ್ರಾಡ್‌ಮನ್ ಮತ್ತು ಸೂರ್ಯವಂಶಿ ಒಂದೇ ರೀತಿಯಲ್ಲಿದ್ದಾರೆ!
ಈಗ ಇಡೀ ದೇಶದಲ್ಲಿ ಹಾಗೆಯೇ ಪ್ರಪಂಚದಲ್ಲಿ ಕೂಡ, ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಬಗ್ಗೆ ಚರ್ಚೆ ನಡೆಯುತ್ತಿದೆ. ನಾವು ಈಗಲೇ ಈ ಬಗ್ಗೆ ನಿರ್ಧಾರಕ್ಕೆ ಬರಲಾಗದಿದ್ದರೂ, ನನಗೆ ವೈಭವ್ ಮತ್ತು ಡಾನ್ ಬ್ರಾಡ್‌ಮನ್ ಅವರ ಆಟದ ಪರಿಯಲ್ಲಿ ಸಾಮ್ಯತೆ ಕಾಣಿಸುತ್ತದೆ. ಡಾನ್ ಬ್ರಾಡ್‌ಮನ್ ಎಲ್ಬಿಡ್ಲ್ಯೂ ಆಗಿ ಔಟ್ ಆಗಿದ್ದು ಬಹಳ ಕಡಿಮೆ. ಹಾಗೆಯೇ ವೈಭವ್ ಕೂಡ ಎಲ್ಬಿಡ್ಲ್ಯೂ ಆಗಿ ಔಟ್ ಆಗಿರುದನ್ನು ನಾನು ಗಮನಿಸಿಲ್ಲ.
ನಾನು ಮೊದಲೇ ಹೇಳಿದಂತೆ ಇದು ಕೇವಲ ಒಂದು ಮುನ್ನೋಟವಷ್ಟೇ, ವೈಭವ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇನ್ನೂ ಅನುಭವ ಬೇಕು. ಕಡಿಮೆ ವಯಸ್ಸಿನಲ್ಲಿ ಟೀಂ ಇಂಡಿಯಾ ಸೇರಿರುವ ಕಾರಣ, ಬೇಗ ಎಲ್ಲವನ್ನು ಕಲಿತುಕೊಂಡರೆ ಹೆಚ್ಚಿನ ಸಮಯ ತಂಡದಲ್ಲಿ ಮುಂದುವರಿಯಬಹುದು ಎಂದು ರಾಬಿನ್ ಉತ್ತಪ್ಪ, ಯೂಟ್ಯೂಬ್ ಚಾನೆಲ್ವೊಂದರಲ್ಲಿ ಮಾತನಾಡಿದ್ದಾರೆ.
ನೂತನ ದಾಖಲೆ ಬರೆದ ವೈಭವ್!
ಗುರುವಾರ (ಜು.23) ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ವಂಡರ್ ಕಿಡ್ ಖ್ಯಾತಿಯ ವೈಭವ್ ಸೂರ್ಯವಂಶಿ ತಮ್ಮ ಚೊಚ್ಚಲ ಅರ್ಧಶತಕವನ್ನು ಸಿಡಿಸುವ ಮೂಲಕ ನೂತನ ದಾಖಲೆಯೊಂದನ್ನು ಬರೆದಿದ್ದಾರೆ.
ಅತಿ ಚಿಕ್ಕ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಅರ್ಧಶತಕವನ್ನು ಗಳಿಸಿದ ದಾಖಲೆ ಈಗ ವೈಭವ್ ಸೂರ್ಯವಂಶಿಯದ್ದಾಗಿದೆ. ಕೇವಲ 15 ವರ್ಷ 118 ದಿನಗಳಲ್ಲಿ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಅರ್ಧ ಶತಕವನ್ನು ಸಿಡಿಸುವ ಮೂಲಕ ಈ ಸಾಧನೆಯನ್ನು ಮಾಡಿದ ಜಗತ್ತಿನ ಅತಿ ಕಡಿಮೆ ವಯಸ್ಸಿನ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾನೆ.
ಈ ಮೊದಲು ನೇಪಾಳದ ಕುಶಾಲ್ ಮಲ್ಲಾ, 15 ವರ್ಷ 340 ದಿನಗಳಲ್ಲಿ ಅರ್ಧ ಶತಕವನ್ನು ಬಾರಿಸಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಸ್ಥಾಪಿಸಿದ್ದರು. ವೈಭವ್ಗೂ ಮೊದಲು, ಭಾರತದ ಪರ ಕ್ರಿಕೆಟ್ ದೇವರು ಸಚಿನ್ ತೆಂಡೂಲಕ್ಕರ್ 16 ವರ್ಷ 213 ದಿನಗಳನ್ನು ಹೊಂದಿದ್ದಾಗ ಈ ಸಾಧನೆಯನ್ನು ಮಾಡಿದ್ದರು, (ಏಜನ್ಸೀಸ್).