ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರಿ ಅನಾಯಾ ಬಂಗಾರ್
- ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರಿ ಅನಾಯಾ ಬಂಗಾರ್
- ಅನಾಯಾ ಬಂಗಾರ್ ತಮ್ಮ ಲೈಂಗಿಕತೆ ಮತ್ತು ಡೇಟಿಂಗ್ ಲೈಫ್ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ!
- ನಾನು ಸ್ಟ್ರೇಟ್ ನನಗೆ ಹುಡುಗರೆಂದರೆ ಇಷ್ಟ
ಮುಂಬೈ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ತರಬೇತುಗಾರ ಸಂಜಯ್ ಬಂಗಾರ್ ಅವರ ಪುತ್ರಿ ಅನಾಯಾ ಬಂಗಾರ್ (Anaya Bangar) ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಆಗ್ತಿದ್ದಾರೆ. ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಪ್ರಣಿತ್ ಮೋರ್ ಅವರ ಶೋನಲ್ಲಿ ಕಾಣಿಸಿಕೊಂಡ ಅನಾಯಾ, ತಮ್ಮ ವೈಯಕ್ತಿಕ ಜೀವನ, ಡೇಟಿಂಗ್ ಹಾಗೂ ತಮ್ಮ ಲೈಂಗಿಕತೆ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ಹಂಚಿಕೊಂಡಿದ್ದಾರೆ.
ನನ್ನ ಲೈಂಗಿಕ ದೃಷ್ಟಿಕೋನ ನೇರವಾಗಿದೆ!
ಕಾರ್ಯಕ್ರಮದ ವೇಳೆ ಪ್ರಣೀತ್ ಮೋರ್ ಸಂಬಂಧಗಳು ಮತ್ತು ಆಕರ್ಷಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅನಾಯಾ ಅತ್ಯಂತ ಆತ್ಮವಿಶ್ವಾಸದಿಂದ ಉತ್ತರಿಸಿದ್ದಾರೆ. ನನಗೆ ಪುರುಷರಲ್ಲಿ ಆಸಕ್ತಿ ಇದೆ. ನನ್ನ ಲೈಂಗಿಕ ದೃಷ್ಟಿಕೋನ ನೇರವಾಗಿರುತ್ತದೆ (Straight), ಎಂದು ಓಪನ್ ಆಗಿ ಹೇಳಿದ್ದಾರೆ.
ಅನಾಯಾ ಅವರ ಈ ಪ್ರಾಮಾಣಿಕ ಮತ್ತು ಧೈರ್ಯದ ಮಾತುಗಳನ್ನು ಕೇಳಿ ನೆಟ್ಟಿಗರು ಫಿದಾ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಮುಕ್ತ ಸ್ವಭಾವಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಲೈಫ್‌ಗೆ ಬರೋ ಹುಡುಗ ಹೇಗಿರಬೇಕು ಗೊತ್ತಾ?
ಪ್ರಸ್ತುತ ತಮ್ಮ ಲೈಫ್‌ನಲ್ಲಿ ಯಾರಾದರೂ ವಿಶೇಷ ವ್ಯಕ್ತಿ ಇದ್ದಾರಾ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಅನಾಯಾ, ಸದ್ಯಕ್ಕಂತೂ ತಾನು ಸಿಂಗಲ್ ಆಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ, ಸೂಕ್ತ ಜೊತೆಗಾರ ಸಿಕ್ಕರೆ ಲೈಫ್‌ಗೆ ವೆಲ್‌ಕಮ್ ಮಾಡಲು ರೆಡಿಯಾಗಿದ್ದಾರೆ. ನನ್ನ ಜೀವನದಲ್ಲಿ ಈಗ ಯಾರೂ ಇಲ್ಲ, ಆದರೆ ಯಾರಾದರೂ ಬರಬೇಕೆಂದು ನಾನು ಬಯಸುತ್ತೇನೆ, ಎಂದು ನಗುತ್ತಲೇ ಹೇಳಿದ್ದಾರೆ.
ಇದೇ ವೇಳೆ ತಮ್ಮ ಹುಡುಗ ಹೇಗಿರಬೇಕು ಎನ್ನುವುದನ್ನು ಅವರು ಬಿಚ್ಚಿಟ್ಟಿದ್ದಾರೆ. ತನಗೆ ಎತ್ತರವಿರುವ, ಬಾಡಿ ಬಿಲ್ಡ್ ಮಾಡಿರೋ ಹಾಗೂ ಭಾವನಾತ್ಮಕವಾಗಿ ಅರ್ಥಮಾಡಿಕೊಳ್ಳುವ ಸಂಗಾತಿ ಬೇಕು ಎಂದು ಅನಾಯಾ ನಿರೀಕ್ಷೆಗಳನ್ನು ಹಂಚಿಕೊಂಡಿದ್ದಾರೆ.
ಕ್ರಿಕೆಟಿಗರಿಂದ ಮೆಸೇಜ್ ಬರ್ತಾವಾ?
ನಿರೂಪಕ ಪ್ರಣೀತ್, ನಿಮಗೆ ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟಿಗರಿಂದ ಮೆಸೇಜ್‌ಗಳು ಬರ್ತಾವಾ? ಅವರಲ್ಲಿ ನಿಮಗೇನಾದರೂ ಇಂಟರೆಸ್ಟ್ ಇದೆಯಾ? ಎಂದು ನೇರವಾಗಿ ಕೇಳಿದ್ದಾರೆ.
ಇದಕ್ಕೆ ಜಾಣ್ಮೆಯಿಂದ ಉತ್ತರಿಸಿದ ಅನಾಯಾ, ನಾನು ಕೂಡ ಕ್ರಿಕೆಟ್ ಆಡಿದ್ದೇನೆ ಮತ್ತು ಹಲವಾರು ಕ್ರಿಕೆಟಿಗರ ಜೊತೆ ಮೈದಾನವನ್ನು ಹಂಚಿಕೊಂಡಿದ್ದೇನೆ, ಎಂದರು. ಆದರೆ ಕ್ರಿಕೆಟಿಗರಿಂದ ಪರ್ಸನಲ್ ಮೆಸೇಜ್ ಬರುವ ಪ್ರಶ್ನೆಗೆ ನೇರ ಉತ್ತರ ನೀಡದೆ, ಒಂದು ಕ್ಯೂಟ್ ನಗುವಿನೊಂದಿಗೆ ಆ ವಿಷಯವನ್ನು ಅಲ್ಲಿಗೇ ಸ್ಕಿಪ್ ಮಾಡಿದ್ದಾರೆ.
ಅನಾಯಾ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಸಂಜಯ್ ಬಂಗಾರ್ ಅವರ ಮಗಳು. ಜನನದ ಸಮಯದಲ್ಲಿ ಅವರಿಗೆ ಬೇರೆ ಹೆಸರು ನೀಡಲಾಗಿದ್ದರೂ, ನಂತರ ಅವರು ಟ್ರಾನ್ಸ್ ಮಹಿಳೆಯಾಗಿ ತಮ್ಮ ಲಿಂಗ ಗುರುತನ್ನು ಸಾರ್ವಜನಿಕವಾಗಿ ಹಂಚಿಕೊಂಡು ಅನಾಯಾ ಬಂಗಾರ್ ಎಂಬ ಹೆಸರನ್ನು ಸ್ವೀಕರಿಸಿದ್ದಾರೆ.
ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಬಾಲ್ಯದಿಂದಲೇ ಬೆಳೆಸಿಕೊಂಡಿದ್ದು, ತಮ್ಮ ತಂದೆಯ ಹೆಜ್ಜೆಗುರುತುಗಳನ್ನು ಅನುಸರಿಸಿ ಕ್ಲಬ್ ಮಟ್ಟದ ಕ್ರಿಕೆಟ್ ಕೂಡ ಆಡಿದ್ದಾರೆ. ತಮ್ಮ ಲಿಂಗ ಪರಿವರ್ತನೆ (gender transition) ಪ್ರಯಾಣ, ಹಾರ್ಮೋನ್ ಚಿಕಿತ್ಸೆ ಮತ್ತು ಸಾಮಾಜಿಕ ಸವಾಲುಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಖ್ಯಾತರಾಗಿದ್ದಾರೆ.
ಅನಾಯಾ ಬಂಗಾರ್ ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳ ಹಕ್ಕುಗಳು, ಸಮಾನ ಅವಕಾಶಗಳು ಮತ್ತು ಕ್ರೀಡೆಯಲ್ಲಿ ಒಳಗೊಳ್ಳುವಿಕೆ (inclusion) ಕುರಿತಾಗಿ ಧ್ವನಿ ಎತ್ತುತ್ತಿರುವ ಸಾಮಾಜಿಕ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಕ್ರಿಕೆಟ್ ಕ್ಷೇತ್ರದಲ್ಲಿ ತಾವು ಎದುರಿಸಿದ ತಾರತಮ್ಯ, ಕಿರುಕುಳ ಮತ್ತು ಸವಾಲುಗಳ ಕುರಿತು ಅವರು ಹಲವು ಸಂದರ್ಶನಗಳಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ. ಪ್ರಸ್ತುತ ಅವರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಟ್ರಾನ್ಸ್ ಸಮುದಾಯದ ಬಗ್ಗೆ ಜಾಗೃತಿ ಮೂಡಿಸಲು ಕೆಲಸ ಮಾಡುತ್ತಿದ್ದಾರೆ, (ಏಜನ್ಸೀಸ್).