ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಐತಿಹಾಸಿಕ ದಾಖಲೆ
- ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ
- ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಐತಿಹಾಸಿಕ ದಾಖಲೆ
- ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರಿಗೂ ಸಾಧ್ಯವಾಗದ ಅಪರೂಪದ ಸಾಧನೆ ಮಾಡಿದ ಕೌರ್
ಇಂಗ್ಲೆಂಡ್: ಒಂದು ಕಡೆ ಭಾರತದ ಪುರುಷರ ಕ್ರಿಕೆಟ್ ತಂಡ ಸತತ ಸೋಲಿನಿಂದ ಕಂಗೆಟ್ಟಿದ್ದರೆ, ಇನ್ನೊಂದು ಕಡೆ ವನಿತೆಯರ ತಂಡ, ಆಂಗ್ಲ ಮಹಿಳೆಯರ ಮೇಲೆ ಆಕರ್ಶಕ ಆಟವಾಡುತ್ತಿದ್ದಾರೆ.
ನೂತನ ದಾಖಲೆ ಬರೆದ ಹರ್ಮನ್‌ಪ್ರೀತ್!
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯಾವಳಿಯಲ್ಲಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur), ಅರ್ಧ ಶತಕವನ್ನು ಸಿಡಿಸುವ ಮೂಲಕ, ತಂಡದ ನಾಯಕಿಯಾಗಿ ಟಿ-20, ಏಕದಿನ ಹಾಗೂ ಟೆಸ್ಟ್ ಮೂರು ಆಯಾಮದ ಪಂದ್ಯಾವಳಿಯಲ್ಲಿ ಅರ್ಧಶತಕ ಗಳಿಸಿದ ಭಾರತದ ಪ್ರಥಮ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಮಾಡಿರುವ ದಾಖಲೆಯನ್ನು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮಿಥಾಲಿ ರಾಜ್ ಮೊದಲಾದ ದಿಗ್ಗಜ ಆಟಗಾರರು ಮಾಡಲು ಸಾಧ್ಯವಾಗದ ದಾಖಲೆಯನ್ನು ಹರ್ಮನ್‌ಪ್ರೀತ್ ಕೌರ್ ಮಾಡಿದ್ದಾರೆ.
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತದ ವನಿತೆಯರ ತಂಡವು 101 ರನ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡಾಗ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೈದಾನ ಪ್ರವೇಶಿಸಿದರು.
ನಂತರ ಸ್ಮೃತಿ ಮಂಧಾನ ಜೊತೆ ಕೂಡಿ ಇವರಿಬ್ಬರು 83 ರನ್ಗಳ ಜೊತೆಯಾಟ ಮೂಡಿಬಂದಿತು. ಹರ್ಮನ್‌ಪ್ರೀತ್ ಜೊತೆಗೆ ಸ್ಮೃತಿ ಮಂಧಾನ ಹಾಗೂ ದಿಪ್ತಿ ಶರ್ಮಾ ಅರ್ಧ ಶತಕವನ್ನು ಸಿಡಿಸುವ ಮೂಲಕ ತಂಡದ ಮೊತ್ತ 285 ರನ್ ತಲುಪಿತು. 89 ರನ್ ಗಳಿಸಿದ್ದ ಸ್ಮೃತಿ ಮಂಧಾನ ಶತಕ ವಂಚಿತರಾದರೆ, 58 ರನ್ ಗಳಿಸಿ ಹರ್ಮನ್‌ಪ್ರೀತ್ ನೂತನ ದಾಖಲೆ ಬರೆದರು. ಎರಡನೇ ಇಂನಿಗ್ಸ್ ಆರಂಭಿಸಿರುವ ಇಂಗ್ಲೆಂಡ್ ಸದ್ಯ 67 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡಿದೆ, (ಏಜನ್ಸೀಸ್).