ಧಮ್​​ ಹೊಡೆದು ಸಿಕ್ಕಿಬಿದ್ದ ಜಿಟಿ ಬೌಲರ್​ ರಬಾಡ! ಕ್ರಮ ತೆಗೆದುಕೊಳ್ತಾರಾ? IPL​ ನಿಯಮ ಏನಿದೆ? Kagiso Rabada  
ಕ್ರಿಕೆಟ್

ಧಮ್​​ ಹೊಡೆದು ಸಿಕ್ಕಿಬಿದ್ದ ಜಿಟಿ ಬೌಲರ್​ ರಬಾಡ! ಕ್ರಮ ತೆಗೆದುಕೊಳ್ತಾರಾ? IPL​ ನಿಯಮ ಏನಿದೆ? Kagiso Rabada

ಪ್ರಮುಖ ಮುಖ್ಯಾಂಶಗಳು

  • ವಿವಾದಕ್ಕೆ ಸಿಲುಕಿದ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಬೌಲರ್ ಕಗಿಸೊ ರಬಾಡ
  • ಸಿಗರೇಟ್ ಸೇದುವ ಮೂಲಕ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸ್ಟಾರ್​ ವೇಗಿ
  • ರಬಾಡ ಸಿಗರೇಟ್​ ಸೇದುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
  • ರಬಾಡ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ ಕ್ರೀಡಾಭಿಮಾನಿಗಳು
Kagiso Rabada : ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಬೌಲರ್ ಕಗಿಸೊ ರಬಾಡ ಇದೀಗ ವಿವಾದ ಒಂದಕ್ಕೆ ಸಿಲುಕಿದ್ದಾರೆ. ತಮ್ಮ ತಂಡದ ಸದಸ್ಯರು ತಂಗಿರುವ ಹೋಟೆಲ್​ನಲ್ಲಿ ಸಿಗರೇಟ್ ಸೇದುವ ಮೂಲಕ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ರಬಾಡ ಗುರಿಯಾಗಿದ್ದಾರೆ. 
ರಬಾಡ ಅವರು ಹೋಟೆಲ್​ನ ಕಾಪೌಂಡ್​ಗೆ ಅಂಟಿಕೊಂಡಂತೆ ಕುಳಿತು ಸಿಗರೇಟ್ ಸೇದುತ್ತಿದ್ದಾರೆ. ಈ ದೃಶ್ಯವನ್ನು ಹೋಟೆಲ್​ನ ಮೇಲ್ಭಾಗದಿಂದ ಯಾರೋ ತಮ್ಮ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಬಾಡ ಜೊತೆ ತಂಡದ ಸಹಾಯಕ ಸಿಬ್ಬಂದಿಯೂ ಸಹ ಕಾಣಿಸಿಕೊಂಡಿದ್ದಾರೆ. ರಬಾಡ ಸಿಗರೇಟ್​ ಸೇದುವಾಗ ಎಂಟ್ರಿಕೊಟ್ಟ ರಶೀದ್​ ಖಾನ್​ ಅಸಮಾಧಾನ ವ್ಯಕ್ತಪಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಹ ಆಟಗಾರರು ಕೂಡ ರಬಾಡ ವರ್ತನೆಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಕ್ರಮ ತೆಗೆದುಕೊಳ್ಳುತ್ತಾರಾ?​

ರಬಾಡ ಸಿಗರೇಟ್​ ಸೇದುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದನ್ನು ನೋಡಿದ ಅಭಿಮಾನಿಗಳು ರಬಾಡ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಐಪಿಎಲ್ ಒಪ್ಪಂದದಲ್ಲಿ ಧೂಮಪಾನದ ಮೇಲೆ ಯಾವುದೇ ಸ್ಪಷ್ಟ ನಿಷೇಧವಿಲ್ಲ. ಇದರರ್ಥ ಸಿಗರೇಟ್ ಸೇದುವುದು ನಿಯಮಗಳಿಗೆ ವಿರುದ್ಧ ಎಂದು ಹೇಳಲಾಗದು. ಆದಾಗ್ಯೂ, ಆಟಗಾರರ ಫಿಟ್​ನೆಸ್​ ಮತ್ತು ವೃತ್ತಿಪರ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಇದು ಟೀಕೆಗೆ ಕಾರಣವಾಗುತ್ತಿದೆ.
ಅಂದಹಾಗೆ, ರಬಾಡ ಈ ಹಿಂದೆ ಡೋಪಿಂಗ್ ಉಲ್ಲಂಘನೆ ಮಾಡಿರುವುದರಿಂದ, ಬಿಸಿಸಿಐ ಡೋಪಿಂಗ್ ವಿರೋಧಿ ವಿಭಾಗವು ಈ ಘಟನೆಯನ್ನು ಪರಿಶೀಲಿಸುವ ಸಾಧ್ಯತೆಯಿದೆ. ರಬಾಡ ಅವರು ಬಳಸಿದ್ದ ಕೇವಲ ಸಿಗರೇಟ್ ಮಾತ್ರವೇ? ಅಥವಾ ಬೇರೆ ಯಾವುದಾದರೂ ನಿಷೇಧಿತ ವಸ್ತುವೇ? ಎಂದು ನಿರ್ಧರಿಸಬೇಕಾಗುತ್ತದೆ. ಸದ್ಯ ರಬಾಡ ಮಾತ್ರ ಸಿಗರೇಟ್​ ವಿಚಾರವಾಗಿ ಭಾರಿ ಸುದ್ದಿಯಾಗಿದ್ದಾರೆ. 
ಇನ್ನು ಐಪಿಎಲ್​ ವಿಚಾರಕ್ಕೆ ಬರುವುದಾದರೆ, ರಬಾಡ ಈ ಸೀಸನ್​ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಇನ್ನೂ ಈ ಸೀಸನ್​ನಲ್ಲಿ ಗುಜರಾತ್ ತಂಡದ ಪ್ರದರ್ಶನ ಸಾಧಾರಣವಾಗಿದೆ. ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ 3 ಗೆಲುವು ಮತ್ತು 3 ಸೋಲುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ, (ಏಜೆನ್ಸೀಸ್​).