ನನ್ನ ಬಳಿ ಎರಡು... ಮೈಕ್​ ಆನ್​ನಲ್ಲಿರುವುದನ್ನು ಮರೆತು ಮಹಿಳೆಯರ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ ಬ್ರಾವೋ! Dwayne Bravo  
ಕ್ರಿಕೆಟ್

ನನ್ನ ಬಳಿ ಎರಡು... ಮೈಕ್​ ಆನ್​ನಲ್ಲಿರುವುದನ್ನು ಮರೆತು ಮಹಿಳೆಯರ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ ಬ್ರಾವೋ! Dwayne Bravo

ಪ್ರಮುಖ ಮುಖ್ಯಾಂಶಗಳು

  • ಟೀಕೆಗಳ ಸುರಿಮಳೆ ಎದುರಿಸುತ್ತಿದ್ದಾರೆ ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಕ್ರಿಕೆಟಿಗ ಡ್ವೇನ್ ಬ್ರಾವೋ
  • ನಿನ್ನೆ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಪತ್ರಿಕಾಗೋಷ್ಠಿ ನಡೆಸಿತು
  • ಕೆಕೆಆರ್​ ಬೌಲಿಂಗ್ ಕೋಚ್ ಆಗಿರುವ ಡ್ವೇನ್ ಬ್ರಾವೋ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು
  • ಸುದ್ದಿಗೋಷ್ಠಿಗೂ ಮುನ್ನ ಮೈಕ್​ ಆನ್​ ಆಗಿರುವುದನ್ನು ಮರೆತು ಬ್ರಾವೋ ಆಡಿದ ಮಾತು ವಿವಾದದ ಸ್ವರೂಪ ಪಡೆದಿದೆ
Dwayne Bravo : ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಕ್ರಿಕೆಟಿಗ, ಕೋಲ್ಕತ್ತ ನೈಟ್ ರೈಡರ್ಸ್ ( KKR ) ತಂಡದ ಮಾರ್ಗದರ್ಶಕ ಮತ್ತು ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಅವರು ಟೀಕೆಗಳ ಸುರಿಮಳೆಯನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಕಾರಣ ಮಹಿಳೆಯರ ಬಗ್ಗೆ ಬ್ರಾವೋ ಮಾಡಿರುವ ಅನುಚಿತ ಕಾಮೆಂಟ್‌ಗಳು.
ಹೌದು, ಮಾರ್ಚ್​​ 28ರಂದು 2026ನೇ ಸಾಲಿನ ಹಾಗೂ 19ನೇ ಐಪಿಎಲ್​ ಸೀಸನ್ ಆರಂಭವಾಗಲಿದೆ. ಇದಕ್ಕೂ ಮುನ್ನ ಶುಕ್ರವಾರ (ಮಾರ್ಚ್​​ 20) ಕೋಲ್ಕತ್ತ ನೈಟ್ ರೈಡರ್ಸ್ ತಂಡ ಪತ್ರಿಕಾಗೋಷ್ಠಿ ನಡೆಸಿತು. ಈ ವೇಳೆ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ, ಸಹಾಯಕ ಕೋಚ್ ಶೇನ್ ವ್ಯಾಟ್ಸನ್, ಮುಖ್ಯ ಕೋಚ್ ಅಭಿಷೇಕ್ ನಾಯರ್ ಮತ್ತು ಮಾರ್ಗದರ್ಶಕ ಬ್ರಾವೋ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿ ಅಧಿಕೃತವಾಗಿ ಆರಂಭವಾಗುವ ಮೊದಲು ಮೈಕ್‌ಗಳು ಆನ್​ನಲ್ಲಿರುವುದನ್ನು ಅರಿಯದ ಬ್ರಾವೋ, ತನ್ನ ಸಹ ತರಬೇತುದಾರರೊಂದಿಗೆ ತುಂಬಾ ಮೋಜಿನ ಸಂಭಾಷಣೆಯಲ್ಲಿ ತೊಡಗಿದರು. ವ್ಯಾಟ್ಸನ್ ಅವರೊಂದಿಗೆ ಮಾತನಾಡುತ್ತಾ, ಇವರು ನನಗೆ ಕರೆ ಮಾಡಿದಾಗ ನಮ್ಮ ಮನೆಯಲ್ಲಿ ಎರಡು ಚಿಕ್ಸ್ (ಗರ್ಲ್​ಫ್ರೆಂಡ್ಸ್​) ಗಳಿದ್ದವು ಎಂದು ಹೇಳುತ್ತಾ ನಕ್ಕಿದರು.
ಈ ವೇಳೆ ಕ್ಯಾಪ್ಟನ್ ರಹಾನೆ ಅವರು ಮೈಕ್‌ಗಳು ಆನ್ ಆಗಿರುವುದನ್ನು ಬ್ರಾವೋ ಅವರಿಗೆ ನೆನಪಿಸಿದರು ಮತ್ತು ಎಚ್ಚರಿಕೆಯಿಂದ ಮಾತನಾಡಲು ಎಚ್ಚರಿಸಿದರು. ಇದನ್ನು ಕೇಳಿದ ಬ್ರಾವೋ ಅಯ್ಯೋ ಎನ್ನುವಂತೆ ಪ್ರತಿಕ್ರಿಯೆ ನೀಡಿದರು. ಈ ಇಡೀ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದ್ದು, ವಿಡಿಯೋ ವೈರಲ್​ ಆಗಿದೆ. ಅಲ್ಲದೆ, ಬ್ರಾವೋ ವಿರುದ್ಧ ಆಕ್ರೋಶಗಳ ಸುರಿಮಳೆಯಾಗುತ್ತಿದೆ. ಮಹಿಳೆಯರನ್ನು ಇಷ್ಟು ಕೀಳಾಗಿ ನೋಡಬಾರದು ಎಂದು ಕಾಮೆಂಟ್​ ಮೂಲಕ ಬ್ರಾವೋಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.
ಅಂದಹಾಗೆ, 19ನೇ ಆವೃತ್ತಿಯು ಐಪಿಎಲ್​, ಮಾರ್ಚ್ 28ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 7.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ, (ಏಜೆನ್ಸೀಸ್​).