ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಖ್ಯಾತ ಕ್ರಿಕೆಟ್ ಕೋಚ್ ಯೋಗರಾಜ್ ಸಿಂಗ್ ಕಿವಿ
- ಎಲ್ಲಾ ಬಾಲ್ ಗೂ ಬೌಂಡರಿ ಬೇಡ : ಯೋಗರಾಜ್ ಸಿಂಗ್
- ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಖ್ಯಾತ ಕ್ರಿಕೆಟ್ ಕೋಚ್ ಯೋಗರಾಜ್ ಸಿಂಗ್ ಕಿವಿಮಾತು
- ನಿನ್ನ ವಯಸ್ಸಿನಲ್ಲಿ ನನ್ನ ಮಗ ಕೂಡ ಇದನ್ನೆ ಮಡುತ್ತಿದ್ದ, ನಂತರ ತಿದ್ದುಕೊಂಡ
ಕ್ರಿಕೆಟ್: ಈ ವರ್ಷದ ಐಪಿಎಲ್ನಲ್ಲಿ ಮಿಂಚಿ ಕ್ರಿಕೆಟ್ ಅಭಿಮಾನಿಗಳ, ಹಾಗೂ ಆಯ್ಕೆಗಾರರ ಗಮನ ಸೆಳೆದ ಬ್ಯಾಟ್ಸ್ಮನ್ ಎಂದರೆ ಅದು ವಂಡರ್ ಕಿಡ್ ಖ್ಯಾತಿಯ ವೈಭವ್ ಸೂರ್ಯವಂಶಿ.
ಆದರೆ ಐಪಿಎಲ್ ಬಳಿಕ ಟೀ ಇಂಡಿಯಾದ ಟಿ-20 ತಂಡಕ್ಕೆ ಸೇರ್ಪಡೆಯಾದ ವೈಭವ್, ಐಪಿಎಲ್ನಲ್ಲಿ ಮಿಂಚಿದಂತೆ ಮಿಂಚಲು ಸಾಧ್ಯವಾಗುತ್ತಿಲ್ಲ. ಜಿಂಬಾಬ್ವೆ ನಡುವಿನ ಸರಣಿಯಲ್ಲಿ ಎರಡು ಅರ್ಧ ಶತಕ ಬಾರಿಸಿದ್ದು ಬಿಟ್ಟರೆ, ಇಂಗ್ಲೆಂಡ್ ಹಾಗೂ ಐರ್ಲೆಂಡ್ ಟೂರ್ನಿಯಲ್ಲಿ ಸತತ ವಿಫಲತೆಯನ್ನೇ ಅನುಭವಿಸಿದ್ದಾನೆ.
ವೈಭವ್ನ ಈ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿರುವ, ಮಾಜಿ ಆಟಗಾರ ಯೋಗರಾಜ್ ಸಿಂಗ್(Yograj Singh on Vaibhav Suryavanshi), ವೈಭವ್ ಸೂರ್ಯವಂಶಿಗೆ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.
ಯುವರಾಜ್ ಜೊತೆ ತರಬೇತಿ ತಗೋ!
ವೈಭವ್ ಸೂರ್ಯವಂಶಿಯ ಇತ್ತೀಚಿನ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ಯೋಗರಾಜ್ ಸಿಂಗ್, ವೈಭವ್ಗೆ ಕೇವಲ 15 ವರ್ಷ ಅಷ್ಟೇ. ಆದರೆ ಇತನ ಆಟ ನೈಸರ್ಗಿವಾಗಿದೆ, ಆದರೆ ತಂತ್ರಾತ್ಮಕವಾಗಿ ಆಟವಾಡಲು ಇನ್ನು ಅನುಭವ ಬೇಕು. ಹೀಗಾಗಿ ವೈಭವ್ ಯುವರಾಜ್ ಸಿಂಗ್ ಜೊತೆ ತರಬೇತಿ ಪಡೆದುಕೊಂಡರೆ ತನ್ನ ಆಟವನ್ನು ಸುಧಾರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಅದೇ ರೀತಿ ಈ ಬಗ್ಗೆ ಬಿಸಿಸಿಐ ಕೂಡ ಗಮನ ಕೊಡಬೇಕು. ಹೇಗೆ ಮನೆಯಲ್ಲಿ ಅಪ್ಪ-ಅಮ್ಮ 15 ವರ್ಷದ ಮಗನಿಗೆ ಉತ್ತಮ ಶಿಕ್ಷಣ ನೀಡಿ ಅವನ ಲಾಲನೆ-ಪಾಲನೆ ಮಾಡುತ್ತಾರೋ. ಅದೇ ರೀತಿಯಲ್ಲಿ ಬಿಸಿಸಿಐ ಕೂಡ, 15 ವರ್ಷದ ವೈಭವ್ ಸೂರ್ಯವಂಶಿಯನ್ನು ದೇಶದ ಕ್ರಿಕೆಟ್ನ ಆಸ್ತಿ ಎಂಬಂತೆ ಭಾವಿಸಿ ತರಬೇತಿ ನೀಡಬೇಕೆಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
ಯುವರಾಜ್ ಕೂಡ ಇದೇ ತಪ್ಪನ್ನು ಮಾಡುತ್ತಿದ್ದ!
ನಾನು ನೋಡಿದ ಪ್ರಕಾರ, ವೈಭವ್ ಶಾರ್ಟ್ ಪಿಚ್ ಬೌಲ್ಗಳನ್ನು ಎದುರಿಸುವಲ್ಲಿ ವಿಫಲನಾಗುತ್ತಿದ್ದಾನೆ. ಯುವರಾಜ್ ಕೂಡ ಇದೇ ಬೌಲ್ಗಳಿಗೆ ಔಟ್ ಆಗುತ್ತಿದ್ದ. ಆಗ ಯುವರಾಜ್ ಸಿಮೆಂಟ್ ಪಿಚ್ನಲ್ಲಿ ಪ್ಲಾಸ್ಟಿಕ್ ಚೆಂಡುಗಳಿಂದ ಆಟವಾಡುತ್ತಿದ್ದ. ಹಾಗೂ ಬೌಲಿಂಗ್ ಮಷಿನ್ಅನ್ನು 160 ಕೀ/ಗಂ ಇಟ್ಟುಕೊಂಡು ಶಾರ್ಟ್ ಪಿಚ್ ಬೌಲ್ಗಳನ್ನು ಎದುರಿಸುತ್ತಿದ್ದ.
ಈ ರೀತಿಯ ಕಠಿಣ ತರಬೇತಿಯ ನಂತರ ಕೀನ್ಯಾದಲ್ಲಿ ನಡೆದಿದ್ದ ಚಾಂಪಿಯನ್ಸ್ ಲೀಗ್ನಲ್ಲಿ ಯುವರಾಜ್ನ ಬ್ಯಾಟ್ನಿಂದ ಹುಕ್ ಹಾಗೂ ಫುಲ್ ಶಾಟ್ಗಳು ಅಮೋಘವಾಗಿ ಮೂಡಿಬಂದವು. ಆದ್ದರಿಂದ ವೈಭವ್ ಈ ರೀತಿ ತಯಾರಿ ನಡೆಸಬೇಕೆಂದು ಯೋಗರಾಜ್ ಸಿಂಗ್ ಸಲಹೆ ನೀಡಿದ್ದಾರೆ.
ಎಲ್ಲಾ ಬಾಲ್ಗೆ ಬೌಂಡರಿ ಬೇಡ!
ನಾನು ನೋಡಿದಂತೆ ಈ ವೈಭವ್ ಪ್ರತಿಯೊಂದು ಎಸೆತವನ್ನು ಬೌಂಡರಿ ಬಾರಿಸಲು ಪ್ರಯತ್ನಿಸುತ್ತಾನೆ. ಆದರೆ ಕ್ರಿಕೆಟ್ನಲ್ಲಿ ಎಲ್ಲಾ ಎಸೆತಕ್ಕೆ ಸಿಕ್ಸ್, ಫೋರ್ ಹೊಡೆದವರು ಮಾತ್ರ ಆಟಗಾರರಲ್ಲ, ಮೈದಾನದಲ್ಲಿ ಬಹಳ ಸಮಯ ನಿಂತು, ತಾಳ್ಮೆಲಿಂದ ಆಟವಾಡಿ, ತಂಡವನ್ನು ಗೆಲ್ಲಿಸುವವರು ಮಾತ್ರ ಶ್ರೇಷ್ಟ ಆಟಗಾರರಾಗುತ್ತಾರೆಂದು ಸಿಂಗ್ ಹೇಳಿದ್ದಾರೆ.
ಹೀಗಾಗಿ, ವೈಭವ್ ಪ್ರತಿಯೊಂದು ಎಸೆತವನ್ನು ಬೌಂಡರಿಗಟ್ಟುವ ಬದಲು, ಆ ಚೆಂಡನ್ನು ಸಮರ್ಥವಾಗಿ ಆಟವಾಡುವ ಪ್ರಯತ್ನ ಮಾಡಬೇಕಿದೆ. ಹೀಗೆ ಎಲ್ಲಾ ಬಾಲ್ಗೆ ಲಾಫ್ಟ್ ಶಾಟ್ಗಳನ್ನು ಬಾರಿಸಿದರೆ ಹೆಚ್ಚುಹೊತ್ತು ಮೈದಾನದಲ್ಲಿರಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ, (ಏಜನ್ಸೀಸ್).