ನಾವು ಪ್ಲೇಆಫ್ಸ್ ಪ್ರವೇಶ ಮಾಡದಿದ್ದರೂ ಅಭಿಮಾನಿಗಳ ಮನ ಗೆದ್ದಿದ್ದೆವೆ: ಪ್ರೀತಿ ಜಿಂಟಾ
- ಐಪಿಎಲ್ 2026 ರಿಂದ ಹೊರಬಿದ್ದ ಪಂಜಾಬ್ ಕಿಂಗ್ಸ್
- ಟೂರ್ನಿ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ತಂಡ
- ನಾವು ಪ್ಲೇಆಫ್ಸ್ ಪ್ರವೇಶ ಮಾಡದಿದ್ದರೂ ಅಭಿಮಾನಿಗಳ ಮನ ಗೆದ್ದಿದ್ದೆವೆ: ಪ್ರೀತಿ ಜಿಂಟಾ
- ತಂಡದ ಕುರಿತು ಮಾಲಕಿ ನಟಿ ಪ್ರೀತಿ ಜಿಂಟಾ ಭಾವನಾತ್ಮಕ ಪೋಸ್ಟ್
ಐಪಿಎಲ್: ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಕ್ರಿಕೆಟ್ ಹಬ್ಬವಾದ ಐಪಿಎಲ್ 2026 ಮುಕ್ತಾಯವಾಗಲಿದೆ. ಕ್ವಾಲಿಫೈಯರ್ ಸುತ್ತಿನಲ್ಲಿ ಜಯಗಳಿಸುವ ಮೂಲಕ ಆರ್ಸಿಬಿ ತಂಡ ಫೈನಲ್ ಪ್ರವೇಶಿದ್ದು, ಶುಕ್ರವಾರ (ಮೇ.29) ನಡೆಯಲಿರುವ ಕ್ವಾಲಿಫೈಯರ್ 2 ನಲ್ಲಿ ಯಾವ ತಂಡ ಗೆಲ್ಲುತ್ತದೋ ಅದು ಭಾನುವಾರ (ಮೇ.31) ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯಲಿದೆ.
ಅದರೆ, ಈ ಭಾರಿಯ ಐಪಿಎಲ್ನಲ್ಲಿ ಪ್ರಾರಂಭದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ನಂತರ ಹಳಿತಪ್ಪಿದ ಪಂಜಾಬ್ ಕಿಂಗ್ಸ್ ತಂಡ ಪ್ಲೇಆಫ್ಸ್ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಯಿತು. ಈಗ, ತಮ್ಮ ತಂಡದ ಪ್ರದರ್ಶನ ಹಾಗೂ ಆಟಗಾರರ ಕುರಿತಾಗಿ ತಂಡದ ಮಾಲಕಿಯಾದ ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta on Punjab Kings) ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ.
ಅಭಿಮಾನಿಗಳಿಗೆ ಆಭಾರಿ
ಈ ಭಾರಿಯ ಐಪಿಎಲ್ 2026 ನಮ್ಮ ಪಾಲಿಗೆ ರೋಲರ್-ಕೋಸ್ಟರ್ ರೈಡ್ ಆಗಿತ್ತು. ನಮ್ಮ ಈ ಒಳ್ಳೆಯ ಹಾಗೂ ಕೆಟ್ಟ ಎರಡು ಸಮಯದಲ್ಲಿ ನಮ್ಮ ತಂಡದೊಟ್ಟಿಗಿದ್ದ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ನಮ್ಮ ಪ್ರಯಾಣವನ್ನು ಸಂಪೂರ್ಣಗೊಳಸಿದೆ. ಎಂದು ಅವರು ಬರೆದುಕೊಂಡಿದ್ದಾರೆ.
ಈ ಸೀಸನ್ನಲ್ಲಿ 15 ಅಂಕಗಳನ್ನು ಪಡೆಯುವ ಮೂಲಕ ಪಂಜಾಬ್ ಕಿಂಗ್ಸ್ ತಂಡ 5 ನೇ ಸ್ಥಾನವನ್ನು ಪಡೆದುಕೊಂಡಿತು. ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ 4 ನೇ ಸ್ಥಾನವನ್ನು ಗಿಟ್ಟಿಸಿಕೊಂಡಿತು.
ಶುಭಾರಂಭ ಮಾಡಿದ್ದ ಪಂಜಾಬ್!
2026 ನೇ ಸಾಲಿನ ಐಪಿಎಲ್ ಪ್ರಾರಂಭಿಕ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಆರಂಭವನ್ನು ಮಾಡಿತ್ತು. ಮೊದಲ ಏಳು ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೇ (ಆರು ಜಯ, ಒಂದು ಮಳೆಯಿಂದ ರದ್ದು) 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.
ಆದರೆ ನಂತರದ ಪಂದ್ಯಗಳಲ್ಲಿ ನಿರಂತರವಾಗಿ 6 ಪಂದ್ಯಗಳನ್ನು ಸೋಲುವ ಮೂಲಕ ಪ್ಲೇಆಫ್ ಕನಸಿಗೆ ತಣ್ಣೀರನ್ನು ಎರಚಿಕೊಂಡಿತ್ತು. ಕೊನೆಯ ಪಂದ್ಯದಲ್ಲಿ ಲಖನೌ ವಿರುದ್ಧ ಜಯಗಳಿಸಿ 15 ಅಂಕದೊಂದಿದೆ 5 ನೇ ಸ್ಥಾನ ಪಡೆದುಕೊಂಡಿತು, (ಏಜನ್ಸೀಸ್).