- ಆಸೀಸ್ ಪಡೆ ಇಂಗ್ಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು
- ಕಾಂಗರೂ ಪಡೆಗೆ ಸೇರಬೇಕಿದ್ದ ಕೋಟಿಗಟ್ಟಲೇ ಆದಾಯಕ್ಕೆ ಬಿತ್ತು ಕತ್ತರಿ
- 17 ಕೋಟಿ 35 ಲಕ್ಷ ರೂ. ನಷ್ಟ
ಅಸ್ಟ್ರೇಲಿಯಾ: ಇತ್ತೀಚೆಗಷ್ಟೇ ಪರ್ತ್‌ನಲ್ಲಿ ಆ್ಯಶಸ್ ಸರಣಿಯ ಭಾಗವಾಗಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಪಡೆ ಇಂಗ್ಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು. ಈ ಮ್ಯಾಚ್ನಲ್ಲಿ ತಂಡದ ಪರ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್, ಆಸ್ಟ್ರೇಲಿಯಾಗೆ ಹೀರೋಗಳಾಗಿ ಮಿಂಚಿದರು. ಇವರಿಬ್ಬರ ಭರ್ಜರಿ ಪ್ರದರ್ಶನವೇ ಗೆಲುವಿಗೆ ಪ್ರಮುಖ ಕಾರಣ. ಇಷ್ಟಾದರೂ ಸ್ಟಾರ್ ಆಟಗಾರರೇ ಕಾಂಗರೂ ಪಡೆಗೆ ಸೇರಬೇಕಿದ್ದ ಕೋಟಿಗಟ್ಟಲೇ ಆದಾಯಕ್ಕೆ ಕತ್ತರಿ ಹಾಕಿರುವುದು ಸದ್ಯ ಬೇಸರದ ಸಂಗತಿಯಾಗಿದೆ.
ಸ್ಟಾರ್ಕ್ ತಮ್ಮ ಡೇಂಜರಸ್ ಬೌಲಿಂಗ್‌ನಿಂದ ಈ ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದರೆ, ಟ್ರಾವಿಸ್ ಹೆಡ್ ಎದುರಾಳಿ ತಂಡದ ವಿರುದ್ಧ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅಬ್ಬರದ ಶತಕ (123) ಬಾರಿಸಿದರು. ಇದರೊಂದಿಗೆ, ಆಸ್ಟ್ರೇಲಿಯಾ ಕೇವಲ ಎರಡು ದಿನಗಳಲ್ಲಿಯೇ ಟೆಸ್ಟ್ ಪಂದ್ಯವನ್ನು ಗೆದ್ದಿತು. ಪರಿಣಾಮವಾಗಿ, ಕ್ರಿಕೆಟ್ ಆಸ್ಟ್ರೇಲಿಯಾ ಕೋಟ್ಯಂತರ ರೂ. ನಷ್ಟವನ್ನು ಅನುಭವಿಸಿತು.
17 ಕೋಟಿ 35 ಲಕ್ಷ ರೂ. ನಷ್ಟ
ಕೇವಲ ಎರಡು ದಿನಗಳಲ್ಲಿ ಕೊನೆಗೊಂಡ ಟೆಸ್ಟ್ ಪಂದ್ಯದಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕೋಟಿಗಟ್ಟಲೆ ಆದಾಯವನ್ನು ಕಳೆದುಕೊಂಡಿತು. 'ದಿ ಗಾರ್ಡಿಯನ್' ವರದಿಯ ಪ್ರಕಾರ, ಎರಡು ದಿನಗಳಲ್ಲಿ ಮುಕ್ತಾಯಗೊಂಡ ಪಂದ್ಯದಿಂದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೆ ಸುಮಾರು 17 ಕೋಟಿ 35 ಲಕ್ಷ ರೂ. ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮೊದಲ ಎರಡು ದಿನಗಳಲ್ಲಿ ಒಟ್ಟು 101,514 ಜನರು ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ಮೊದಲ ದಿನವಾದ ಶುಕ್ರವಾರ 51,531 ಜನರು ಮತ್ತು ಎರಡನೇ ದಿನವಾದ ಶನಿವಾರ 49,983 ಜನರು ಪಂದ್ಯ ವೀಕ್ಷಿಸಲು ಬಂದಿದ್ದರು. ಮೂರನೇ ಮತ್ತು ನಾಲ್ಕನೇ ದಿನಗಳಲ್ಲಿ ಬಹುತೇಕ ಅಷ್ಟೇ ಸಂಖ್ಯೆಯ ಕ್ರಿಕೆಟ್ ಪ್ರೇಮಿಗಳು ಪಂದ್ಯ ವೀಕ್ಷಿಸಲು ಬರುವ ನಿರೀಕ್ಷೆಯಿತ್ತು. ಕೆಲವರು ಭಾನುವಾರದ ಟಿಕೆಟ್‌ಗಳಿಗೆ ಮುಂಗಡ ಬುಕ್ಕಿಂಗ್ ಮೂಲಕ ಹಾಜರಿ ಹಾಕಿದ್ದರು. ಆದರೆ, ಎರಡೇ ದಿನಕ್ಕೆ ಪಂದ್ಯ ಅಂತ್ಯಗೊಂಡ ಹಿನ್ನೆಲೆ ಲಾಭದ ಹರಿವು ಅಲ್ಲಿಗೆ ನಿಂತಿತು.