ಕಪ್ಪು ಹುಡುಗನಿಗೆ ಡಾರ್ಕ್ ಕೇಕ್ ಸರಿಯಾದ ಮ್ಯಾಚಿಂಗ್: ಕ್ರೀಡಾ ಲೋಕದ ಕಹಿ ಘಟನೆ ಬಿಚ್ಚಿಟ್ಟ ಲಕ್ಷ್ಮಣ್ ಶಿವರಾಮಕೃಷ್ಣನ್! Laxman Sivaramakrishnan
- ಇತ್ತೀಚೆಗೆ ಲಕ್ಷ್ಮಣ್ ಶಿವರಾಮಕೃಷ್ಣನ್ ಬಿಸಿಸಿಐ ಕಾಮೆಂಟರಿ ಲೋಕಕ್ಕೆ ವಿದಾಯ ಹೇಳಿದರು
- ಕ್ರಿಕೆಟ್ ಲೋಕದಲ್ಲಿ ತಮಗಾದ ವರ್ಣ ಬೇಧದ ಬಗ್ಗೆ ಕಹಿ ನೆನಪುಗಳನ್ನು ಬಿಚ್ಚಿಟ್ಟ ಮಾಜಿ ಆಟಗಾರ
- ಬಣ್ಣ ಕಂಡು ಸಿಬ್ಬಂದಿ ಎಂದುಕೊಂಡು ಶೂ ಕ್ಲೀನ್ ಮಾಡು ಎಂದಿದ್ರು ಎಂದ ಲಕ್ಷ್ಮಣ್ ಶಿವರಾಮಕೃಷ್ಣನ್
Laxman Sivaramakrishnan : ಹೇ ಸುನ್ನಿ ನೀನು ಸರಿಯಾದ ಬಣ್ಣದ ಕೇಕ್ ಅನ್ನೇ ಆರ್ಡರ್ ಮಾಡಿದ್ದೀಯ. ಕಪ್ಪು ಬಣ್ಣದ ಹುಡುಗನಿಗೆ ಡಾರ್ಕ್ ಚಾಕೋಲೇಟ್ ಸರಿಯಾದ ಮ್ಯಾಚಿಂಗ್ ಎಂದು ಅಪಹಾಸ್ಯ ಮಾಡಿದ್ದರು ಎನ್ನುವ ಮೂಲಕ ಭಾರತ ತಂಡದ ಮಾಜಿ ಲೆಗ್ ಸ್ಪಿನರ್ ಹಾಗೂ ಕಾಮೆಂಟೇಟರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಕ್ರೀಡಾ ಲೋಕದಲ್ಲಿ ಅನುಭವಿಸಿದ್ದ ಜನಾಂಗೀಯ ನಿಂದನೆ ಮತ್ತು ವರ್ಣಬೇಧ ನೀತಿಯನ್ನು ತೆರೆದಿಟ್ಟಿದ್ದಾರೆ.
ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು 2026 ಮಾರ್ಚ್ 20ರಂದು ಬಿಸಿಸಿಐ ಕಾಮೆಂಟರಿ ಹುದ್ದೆಗೆ ಗುಡ್ಬೈ ಹೇಳಿದ್ದರು. ಇದಕ್ಕೆ ಕಾರಣ ಏನು ಎಂಬುದನ್ನು ನೇರವಾಗಿಯೇ ತಿಳಿಸಿದ್ದರು. ಲಕ್ಷ್ಮಣ್ ಅವರು ಹದಿಹರೆಯದಲ್ಲಿ ಮೂಡಿಸಿದ್ದ ಭರವಸೆಯನ್ನು ಇಂದು ಪರಿಪೂರ್ಣ ಮಾಡಲಾಗುತ್ತಿಲ್ಲ. ಕಾರಣ ಅವರ ಮೇಲಾಗಿದ್ದ ವರ್ಣ ಭೇದ ಬಿಟ್ಟು ಮತ್ತೇನು ಇಲ್ಲ. ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ಕೊಟ್ಟ ಸಂದರ್ಶನವೇ ಇದಕ್ಕೆ ಉದಾಹರಣೆ.
1965ರಲ್ಲಿ ಚೈನ್ನೈನಲ್ಲಿ ಜನಿಸಿದ ಲಕ್ಷ್ಮಣ್ ಶಿವರಾಮಕೃಷ್ಣನ್, ಸಲೀಮ್ ಮಲಿಕ್ ಮತ್ತು ಇಮ್ರಾನ್ ಖಾನ್ರಂತಹ ಘಟಾನುಘಟಿ ಬ್ಯಾಟರ್ಗಳನ್ನೇ ಸ್ಪಿನ್ ಜಾಲದಲ್ಲಿ ಸಿಲುಕಿಸಿ ಬೆರಗಾಗುವಂತೆ ಮಾಡಿದ್ದ ಲೆಗ್ ಸ್ಪಿನ್ನರ್. 19ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 23 ವಿಕೆಟ್ ಪಡೆದು ಖ್ಯಾತಿ ಗಳಿಸಿದ್ದರು. ಲಕ್ಷ್ಮಣ್ ಶಿವರಾಮಕೃಷ್ಣನ್ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ಕೊಟ್ಟಂತಹ ಸಂದರ್ಶನದಲ್ಲಿ ತಮ್ಮ ಮೇಲಾದ ವರ್ಣಬೇಧ ನೀತಿ ಮತ್ತು ಜನಾಂಗೀಯ ನಿಂದನೆ ಬಗ್ಗೆ ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ಏನಿದೆ?
Laxman Sivaramakrishnan ಅವರು ಮೊದಲು ಜನಾಂಗೀಯ ಮತ್ತು ವರ್ಣಬೇಧ ಅನುಭವಿಸಿದ್ದು ಅವರು 14 ವರ್ಷವಿದ್ದಾಗ. ಚೆಪಾಕ್ ಕ್ರೀಡಾಂಗಣದಲ್ಲಿ ಭಾರತದ ಕ್ರಿಕೆಟ್ ತಂಡ ಆಯೋಜಿಸಿದ್ದ ಕ್ಯಾಂಪ್ನಲ್ಲಿ ನೆಟ್ ಬೌಲರ್ ಆಗಿ ಅವರು ಭಾಗವಹಿಸಿದ್ದರು. ಶಾಲೆ ಮುಗಿಸಿ ಬಂದಿದ್ದ ಅವರು ಕೋಣೆಯಲ್ಲಿ ಡ್ರೆಸ್ ಬದಲಿಸಲು ತೆರಳಿದಾಗ ಅಲ್ಲಿದ್ದ ಹಿರಿಯ ಬ್ಯಾಟರ್ ಅವರಿಗೆ ಶೂ ಒರೆಸಲು ಹೇಳಿದ್ದರಂತೆ. ಈ ವೇಳೆ ಕಪ್ಪು-ಬಿಳುಪಿನ ತಾರತಮ್ಯ ಅರಿಯದ ಅವರು, ಅದು ನನ್ನ ಕೆಲಸವಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಅಲ್ಲಿಂದ ಹೊರನಡೆದಿದ್ದರಂತೆ. ಅವ್ರು ಅಂದು ನನ್ನ ಬಣ್ಣ ಕಂಡು ಸಿಬ್ಬಂದಿ ಎಂದು ಗ್ರಹಿಸಿ ಆ ಕೆಲಸ ಹೇಳಿದ್ದರು.
ಚರ್ಮಕ್ಕೂ ಕೇಕಿನ ಬಣ್ಣಕ್ಕೂ ಹೋಲಿಕೆ ಮಾಡಿದ್ರು
ಮುಂದುವರೆದು, ನಾನು 17ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಕಾಲದಲ್ಲಿ ನನ್ನ ಬಣ್ಣ ಮತ್ತು ಕೇಕಿಗೆ ಹೋಲಿಸಿ ಅಪಹಾಸ್ಯ ಮಾಡಿದ್ದರು. ಹಿರಿಯ ಆಟಗಾರರೊಬ್ಬರು ಹುಡುಗನ ಬಣ್ಣಕ್ಕೂ ಡಾರ್ಕ್ ಚಾಕೋಲೇಟ್ ಕೇಕಿಗೂ ಒಳ್ಳೆಯ ಸಂಬಂಧ. "ಹೇ ಸುನ್ನಿ ಸರಿಯಾದ ಕೇಕ್ನ್ನೇ ಆರ್ಡರ್ ಮಾಡಿದ್ದೀಯಾ" ಎಂದು ಸುನೀಲ್ ಸುನಿಲ್ ಗವಾಸ್ಕರ್ ಅವರಿಗೆ ಹೇಳಿದ್ದರು. ಆಗ ನಾನು ಕೇಕ್ ಕತ್ತರಿಸೋದೆ ಇಲ್ಲ ಎಂದು ನಾನು ಅಳಲು ಶುರು ಮಾಡಿದೆ ಆಗ ಸುನಿಲ್ ಗವಾಸ್ಕರ್ ಅವರು ನನ್ನನ್ನು ಸಮಾಧಾನಿಸಲು ಒದ್ದಾಡಿದರು. ನಾನು ಅವರ ಒತ್ತಾಯಕ್ಕೆ ಅಳುತ್ತಲೇ ಕೇಕ್ ಕತ್ತರಿಸಿದೆ ಎಂದು ನಡೆದ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ತಮಿಳುನಾಡಿನವ್ರೇ ನನ್ನನ್ನ ಕರುಪ ಅಂತಿದ್ರು?
ತಮಿಳುನಾಡಿಲ್ಲಿಯೂ ನನಗೆ ಅವಮಾನ ತಪ್ಪಿರಲಿಲ್ಲ. ನನ್ನ ನಾಡಿನವರೇ ನನಗೆ ಕರುಪ ಎಂದು ನನ್ನ ಬಣ್ಣದ ಕಾಮೆಂಟ್ ಮಾಡಿ ಅವಹೇಳನ ಮಾಡುತ್ತಿದ್ದರು. ಮುಂಬೈ, ಚಂಡೀಗಢ, ಜಲಂಧರ್ನಲ್ಲಿ ಬೌಂಡರಿ ಬಳಿ ನಾನು ಫೀಲ್ಡಿಂಗ್ ಮಾಡಲು ನಿಂತರೆ, ಪ್ರೇಕ್ಷಕರು ನನ್ನನ್ನು ಅವಮಾನಿಸುತ್ತಿದ್ದರು. ಹೇ ಕರಿಯಾ ಏನಾಯಿತು ನಿನಗೆ ಎಂದು ಜೋರಾಗಿ ಅರಚುತ್ತಾ ನನ್ನನ್ನು ಹೀಯಾಳಿಸುತ್ತಿದ್ದರು ಎಂದಿದ್ದಾರೆ.
ಯಾರ್ಯಾರ ಮೇಲಾಗಿತ್ತು ವರ್ಣಬೇಧ ಮತ್ತು ಜನಾಂಗೀಯ ತಾರತಮ್ಯ?
ಕ್ರೀಡಾ ಲೋಕದಲ್ಲಿ ವರ್ಣಬೇಧ ಅಥವಾ ಜನಾಂಗೀಯ ತಾರತಮ್ಯ ಅನುಭವಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ತಮಿಳುನಾಡಿನ ಅಭಿನವ್ ಮುಕುಂದ್ ಹಾಗೂ ಮಾಜಿ ವೇಗಿ ಇರ್ಫಾನ್ ಪಠಾಣ್ ಅವರಿಗೂ ಕೂಡ ಬಣ್ಣದ ಬಗ್ಗೆ ಅವಮಾನ ಮಾಡಲಾಗಿತ್ತು. ಬಣ್ಣದ ಆಧಾರದ ಮೇಲೆ ಟೀಕೆಗಳನ್ನು ಅನುಭವಿಸಿದ್ದರು, (ಏಜೆನ್ಸೀಸ್).