ಎರಡೂ ಕೈಗಳಿಲ್ಲದಿದ್ದರೂ ಬೌಲಿಂಗ್ ಮಾಡುವ ಅಮೀರ್ ಹುಸೇನ್
- ಎರಡೂ ಕೈಗಳಿಲ್ಲದಿದ್ದರೂ ಬೌಲಿಂಗ್ ಮಾಡುವ ಅಮೀರ್ ಹುಸೇನ್
- ಕಾಶ್ಮೀರದ ಈ ಹುಡುಗನ ಬೌಲಿಂಗ್ಗೆ ಮನಸೋತ ಸಚಿನ್ ತೆಂಡೂಲ್ಕರ್
- ಗೌತಮ್ ಅದಾನಿಯಿಂದ 67 ಲಕ್ಷ ಧನ ಸಹಾಯ
ಜಮ್ಮು-ಕಾಶ್ಮೀರ: ಕ್ರಿಕೆಟ್ನಲ್ಲಿ ಕೈಕಾಲುಗಳು ಸರಿಯಿದ್ದರೂ ಸರಿಯಾಗಿ ಆಟವಾಡಲು ಕಷ್ಟಪಡುವ ಆಟಗಾರರನ್ನು ನಾವು ನೋಡಿದ್ದೆವೆ. ಈ ಕ್ರೀಡೆಯಲ್ಲಿ ಮಾನಸಿಕವಾಗಿ ಎಷ್ಟೇ ಸಹಿಷ್ಣುತೆ ಹೊಂದಿದ್ದರೂ ಸಹ ದೈಹಿಕ ಸಾಮರ್ಥ್ಯ ಬಹಳ ಮುಖ್ಯವಾಗಿರುತ್ತದೆ.
ಆದರೆ, ಎರಡು ಕೈಗಳನ್ನು ಹೊಂದಿಲ್ಲದಿದ್ದರೂ ಸಹ ತನ್ನ ಕಾಲಿನ ಮೂಲಕವೇ ಖರಾರುವಕ್ಕಾಗಿ ಬೌಲಿಂಗ್ ಮಾಡುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಹಾಗೆಯೇ ಇತನ ವಿಡಿಯೋ ನೋಡಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರೇ ಇವನನ್ನು ಬಾಯ್ತುಂಬ ಹೊಗಳಿದ್ದಾರೆ.
ಯಾರು ಈ ಅಮೀರ್ ಹುಸೇನ್?
ವೈರಲ್ ಆಗುತ್ತಿರುವ ವಿಡಿಯೋನಲ್ಲಿರುವ ಆಟಗಾರನ ಹೆಸರು ಅಮೀರ್ ಹುಸೇನ್ (Amir Hussain), ಇವನು ಜಮ್ಮು-ಕಾಶ್ಮೀರ ಪಾರಾ ಕ್ರಿಕೆಟ್ ತಂಡದ ನಾಯಕನಾಗಿದ್ದಾನೆ. ಇವನು ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದು, ಕಾಲಿನ ಸಹಾಯದಿಂದ ಇವನು ಮಾಡುವ ಕರಾರುವಕ್ಕ್ ಬೌಲಿಂಗ್ಗೆ ನೆಟ್ಟಿಗರು ಆಶ್ಚರ್ಯ ಚಕಿತರಾಗಿದ್ದಾರೆ.
ಇವನ ಈ ವಿಶಿಷ್ಟ ಕೌಶಲ್ಯವನ್ನು ಗಮನಿಸಿದ ಉದ್ಯಮಿ ಗೌತಮ್ ಅದಾನಿ ಇತನಿಗೆ ಸುಮಾರು 67 ಲಕ್ಷ ರೂಪಾಯಿ ಧನ ಸಹಾಯ ಮಾಡಿದ್ದು, ಇದನ್ನು ಬಳಸಿಕೊಂಡಿ ಅಮೀರ್ ತನ್ನದೆ ಆದ ಒಂದು ಕ್ರಿಕೆಟ್ ತರಬೇತಿ ಕೇಂದ್ರವನ್ನು ತೆರೆಯುವ ಯೋಜನೆ ರೂಪಿಸಿದ್ದಾನೆ.
ಅಮೀರ್ ತನ್ನ ಕೈಗಳನ್ನು ಹೇಗೆ ಕಳೆದುಕೊಂಡ?
ಅದು 1997 ನೇ ಇಸವಿ, ಒಂದು ದಿನ ಅಮೀರ್ ತನ್ನ ಸಹೋದರ ಕೆಲಸ ಮಾಡುವ ಕಾರ್ಖಾನೆಗೆ ತೆರಳಿ ಊಟ ನೀಡಲು ಹೋಗಿದ್ದ. ಆ ಸಂದರ್ಭದಲ್ಲಿ ಅಲ್ಲಿದ್ದ ಗರಗಸದಿಂದ ಉಂಟಾದ ಅಪಘಾತದಲ್ಲಿ ಅಮೀರ್ ತನ್ನೆರಡು ಕೈಗಳನ್ನು ಕಳದುಕೊಂಡ.
ಈ ಘಟನೆ ಬಳಿಕ ಊರ ಜನರು ಇವನನ್ನು ಬಿಟ್ಟುಬಿಡಿ, ಇವನ ಮೇಲೆ ಏಕೆ ಹಣವನ್ನು ಖರ್ಚು ಮಾಡುತ್ತಿರಿ ಎಂದು ನೆರೆ ಹೊರೆಯವರು ನನ್ನ ತಂದೆ ಬಳಿ ಹೇಳುತ್ತಿದ್ದರು ಎಂದು ಅಮೀರ್ ನೆನಪಿಸಿಕೊಳ್ಳುತ್ತಾರೆ. ಹಾಗೆಯೇ, ಒಮ್ಮೆ ಒಬ್ಬ ಶಿಕ್ಷಕರು ಅಂಗವಿಕಲ ಮಕ್ಕಳು ಶಾಲೆಗೆ ಬರಬಾರದು ಎಂದು ಅಮೀರ್ಗೆ ಹೇಳಿದ್ದರಂತೆ.
ಕ್ರಿಕೆಟ್ ದೇವರನ್ನು ಬೇಟಿ ಮಾಡಿದ ಅಮೀರ್!
2024 ರಂದು ಕ್ರಿಕೆಟ್ ದೇವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನನ್ನನ್ನು ಅವರು ಮಾತನಾಡಿಸಿದರು ಎಂದು ಅಮೀರ್ ಹೇಳಿದ್ದಾರೆ. ನೀನು ಕ್ರಿಕೆಟ್ ಆಡಲೆಂದೇ ಹುಟ್ಟಿದ್ದಿಯಾ, ಯಾವತ್ತು ಈ ಕ್ರೀಡೆಯನ್ನು ನೀನು ಬಿಡಬೇಡ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದರು ಎಂದು ಅಮೀರ್ ತಿಳಿಸಿದ್ದಾರೆ, (ಏಜನ್ಸೀಸ್).