ರೋಹಿತ್​ ಶರ್ಮಾ ಬೆಂಬಲಕ್ಕೆ ನಿಂತ ರವಿಶಾಸ್ತ್ರಿ  
ಕ್ರಿಕೆಟ್

ನಿವೃತ್ತಿ ಬಗ್ಗೆ ಮಾತನಾಡಿದವರಿಗೆ ಬ್ಯಾಟ್​ ಮೂಲಕ ಏಟು: ಅವನ ವಿರೋಧಿಗಳಿಗೆ 'ಶತಕ' ವೇ ಉತ್ತರ; ರೋಹಿತ್​ ಶರ್ಮಾ ಪರ ರವಿಶಾಸ್ತ್ರಿ ಬ್ಯಾಟಿಂಗ್​! Ravi Shastri on Rohit Sharma

ಪ್ರಮುಖ ಮುಖ್ಯಾಂಶಗಳು

  • ಲಾರ್ಡ್ಸ್‌ನಲ್ಲಿ 138 ರನ್‌ಗಳ ಅದ್ಭುತ ಶತಕ ಸಿಡಿಸಿದ ರೋಹಿತ್​ ಶರ್ಮಾ
  • ನಿವೃತ್ತಿ ವದಂತಿಗಳಿಗೆ ಬ್ರೇಕ್ ಹಾಕಿದ ಹಿಟ್​ಮ್ಯಾನ್​
  • ನಿವೃತ್ತಿ ಮಾತಾಡಿದೋರಿಗೆ ಬ್ಯಾಟ್‌ನಿಂದಲೇ ಏಟು ಎಂದ ರವಿಶಾಸ್ತ್ರಿ
ಲಾರ್ಡ್ಸ್: ಭಾರತೀಯ ಕ್ರಿಕೆಟ್‌ ತಂಡದಲ್ಲಿ 'ಹಿಟ್‌ಮ್ಯಾನ್' ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ, ನಿವೃತ್ತಿಯ ಬಗ್ಗೆ ಮಾತನಾಡುತ್ತಿದ್ದವರಿಗೆ ಈಗ ಅವರ ಬ್ಯಾಟ್​ ಮೂಲಕವೇ ಉತ್ತರ ಸಿಕ್ಕಿದೆ.
ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ರೋಹಿತ್ ಶರ್ಮಾ ಅಮೋಘ ಶತಕ (138 ರನ್) ಬಾರಿಸುವ ಮೂಲಕ ತಮ್ಮ ವಿರೋಧಿಗಳ ಬಾಯನ್ನು ಮುಚ್ಚಿಸಿದ್ದಾರೆ.
ಇತ್ತೀಚೆಗೆ 'ದಿ ಹಂಡ್ರೆಡ್' ಲೀಗ್ ಪಂದ್ಯದ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri on Rohit Sharma), ರೋಹಿತ್ ಶರ್ಮಾ ಅವರ ಈ ಮಾಸ್ಟರ್‌ಕ್ಲಾಸ್ ಇನ್ನಿಂಗ್ಸ್ ಬಗ್ಗೆ ನೀಡಿರುವ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ವೈರಲ್ ಆಗುತ್ತಿದೆ.

ಬ್ಯಾಟ್‌ನಿಂದಲೇ ಉತ್ತರ ನೀಡಿದ ರೋಹಿತ್!

ಮೂರನೇ ಏಕದಿನ ಪಂದ್ಯಕ್ಕೂ ಮುನ್ನ, ಇದು ರೋಹಿತ್ ಶರ್ಮಾ ಅವರ ಕೊನೆಯ ಏಕದಿನ ಪಂದ್ಯವೇ? ಎಂಬ ಊಹಾಪೋಹಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದವು. ಆದರೆ ಇದಕೆಲ್ಲಾ ತಲೆ ಕೆಡಿಸಿಕೊಳ್ಳದ ಹಿಟ್​ಮ್ಯಾನ್​ ಮನಮೋಹಕ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ: ರವಿಶಾಸ್ತ್ರಿ
ಓವಲ್ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ ಅವರನ್ನು ನೋಡಿ ಕಮೆಂಟರಿ ಮಾಡುತ್ತಿದ್ದ ರವಿಶಾಸ್ತ್ರಿ ತಮ್ಮದೇ ಶೈಲಿಯಲ್ಲಿ ಟೀಕಾಕಾರರಿಗೆ ಟಾಂಗ್ ನೀಡಿದ್ದಾರೆ.
ತಮ್ಮನ್ನು ಟೀಕಿಸುವವರ ಬಾಯಿ ಮುಚ್ಚಿಸಿದ ಮೇಲೆ ರೋಹಿತ್ ಈಗ ತುಂಬಾ ನಿರಾಳವಾಗಿ ಕಾಣುತ್ತಿದ್ದಾರೆ. ಪಂದ್ಯಕ್ಕೂ ಮುನ್ನ ಹೊರಗಿನಿಂದ ಎಷ್ಟೊಂದು ಬಹಳ ಶಬ್ದ ಕೇಳಿಬರುತ್ತಿತ್ತು. ಆದರೆ ಅವರು ಅದಕ್ಕೆ ಬ್ಯಾಟ್‌ನಿಂದಲೇ ಸೂಕ್ತ ಉತ್ತರ ಕೊಟ್ಟರು.
ಲಾರ್ಡ್ಸ್‌ನಲ್ಲಿ ಅವರ ಚೊಚ್ಚಲ ಶತಕ, ಅದೂ 138 ರನ್ ಬಾರಿಸಿದರು. ಮುಂಬೈ ಇಂಡಿಯನ್ಸ್‌ಗೆ ನಾಯಕನಾಗಿ ಐದು ಐಪಿಎಲ್ ಟ್ರೋಫಿ ಗೆದ್ದು ಕೊಟ್ಟಿರುವ ರೋಹಿತ್‌ಗೆ ಕ್ರಿಕೆಟ್‌ನಲ್ಲಿ ಅನುಭವಿಸದೇ ಇರುವುದು ಇನ್ನೇನೂ ಬಾಕಿ ಇಲ್ಲ ಎಂದು ರವಿಶಾಸ್ತ್ರಿ, ರೋಹಿತ್ ಬೆಂಬಲಕ್ಕೆ ನಿಂತಿದ್ದಾರೆ.

ಏಕದಿನ ಕ್ರಿಕೆಟ್‌ಗೆ ಮಾತ್ರ ಸೀಮಿತ

ಈಗಾಗಲೇ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್, ಪ್ರಸ್ತುತ ಭಾರತ ತಂಡದ ಪರ ಏಕದಿನ ಪಂದ್ಯಗಳಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಕೆಲ ಕಾಲ ಯಾವುದೇ ಸರಣಿಗಳಿಲ್ಲದ ಕಾರಣ ಆಟದಿಂದ ದೂರ ಉಳಿಯಲಿದ್ದರೂ, ಅವರ ಬ್ಯಾಟಿಂಗ್ ಲಯ ಮಾತ್ರ 'ಹಿಟ್‌ಮ್ಯಾನ್' ಫಾರ್ಮ್‌ನಲ್ಲೇ ಇದೆ ಎಂಬುದಕ್ಕೆ ಲಾರ್ಡ್ಸ್ ಶತಕವೇ ಸಾಕ್ಷಿ ಎನ್ನಲಾಗುತ್ತಿದೆ.
ನಿವೃತ್ತಿ ಚರ್ಚೆಗೆ ಬಿದ್ದಿತ ವಿರಾಮ!
ಲಾರ್ಡ್ಸ್‌ನಲ್ಲಿ ಬಂದ ಈ ಬಿರುಗಾಳಿ ಶತಕದ ನಂತರ, ರೋಹಿತ್ ನಿವೃತ್ತಿ ಪಡೆಯುತ್ತಾರೆ ಎಂಬ ಚರ್ಚೆಗಳೆಲ್ಲಾ ಧೂಳೀಪಟವಾಗಿವೆ. ರೋಹಿತ್ ಅವರಲ್ಲಿ ಇನ್ನೂ ಅಪಾರ ಕ್ರಿಕೆಟ್ ಬಾಕಿ ಇದೆ, ಅವರು ಭಾರತ ತಂಡಕ್ಕೆ ಮುಂಬರುವ ಸರಣಿಗಳಲ್ಲಿ ಮುಂದುವರಿಯಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯವಾಗಿದೆ, (ಏಜನ್ಸೀಸ್​).