ಭಾರತೀಯ ಗಾಯಕಿ ಸಾವಿಗೆ ಆಸ್ಟ್ರೆಲೀಯಾದ ವೇಗಿ ಕಂಬನಿ 
ಕ್ರಿಕೆಟ್

ಆಶಾ ಭೋಸ್ಲೆ ಅಸ್ತಂಗತ: ಇವರೊಟ್ಟಿಗೆ ಸಮಯ ಕಳೆದಿದ್ದೆ ನನ್ನ ಪುಣ್ಯ; ಭಾರತೀಯ ಗಾಯಕಿ ಸಾವಿಗೆ ಆಸ್ಟ್ರೆಲೀಯಾದ ವೇಗಿ ಸಂತಾಪ! Brett Lee on Asha Bhosle

ಪ್ರಮುಖ ಮುಖ್ಯಾಂಶಗಳು

  • ಏಷ್ಯಾದ ನೈಟಿಂಗೇಲ್​ ಆಶಾ ಭೋಸ್ಲೆ (92) ನಿಧನ
  • ಭಾರತೀಯ ಗಾಯಕಿ ಸಾವಿಗೆ ಆಸ್ಟ್ರೆಲೀಯಾದ ವೇಗಿ ಕಂಬನಿ
  • ನೀವು ತಲಮಾರಿಗೊಬ್ಬರು ಎಂದ ಬ್ರೆಟ್​ ಲೀ
ಆಸ್ಟ್ರೆಲೀಯಾ: ಗಾನಕೋಗಿಲೆ, ಏಷ್ಯಾದ ನೈಟಿಂಗೇಲ್​ ಖ್ಯಾತಿಯ ಆಶಾ ಭೋಸ್ಲೆ (92) ಭಾನುವಾರ (ಏ.12) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಇಂದು (ಏ.13) ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ಅವರ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ. ಆಶಾ ಭೋಸ್ಲೆ ಅವರ ಖ್ಯಾತಿ ಕೇವಲ ಭಾರತಕಷ್ಟೇ ಸೀಮಿತವಾಗಿರದೆ ಅದು ಇಡೀ ಜಗತ್ತನ್ನೇ ಆವರಿಸಿತ್ತು ಎನ್ನಲು ಅವರ ಸಾವಿಗೆ ಕಂಬನಿ ಸುರಿಸುತ್ತಿರುವ ಅಭಿಮಾನಿಗಳೇ ಸಾಕ್ಷಿಯಾಗಿದ್ದಾರೆ.

ಆಶಾ ತಲಮಾರಿಗೊಬ್ಬರು!

ಭಾರತದ ದಿಗ್ಗಜ ಹಿನ್ನಲೆ ಗಾಯಕಿ, ಆಶಾ ಭೋಸ್ಲೆ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಆಸ್ಟೆಲೀಯಾ ಕ್ರಿಕೆಟ್​ ತಂಡದ ಮಾಜಿ ಆಟಗಾರ ಬ್ರೆಟ್​ ಲೀ (Brett Lee on Asha Bhosle), ಆಶಾ ಅವರು ತಲಮಾರಿಗೆ ಒಬ್ಬರು ಜನಿಸುತ್ತಾರೆ ಅಂತಾರಲ್ಲ, ಆ ರೀತಿಯ ವ್ಯಕ್ತಿತ್ವವೆಂದು ಹೇಳಿದ್ದಾರೆ.
2006 ರಲ್ಲಿ ಆಶಾ ಭೋಸ್ಲೆ ಅವರೊಂದಿಗೆ "ಯು ಆರ್ ದಿ ಒನ್ ಫಾರ್ ಮಿ" ಹಾಡನ್ನು ಬರೆಯುವಲ್ಲಿ ಮತ್ತು ರೆಕಾರ್ಡ್ ಮಾಡುವ ಅವಕಾಶ ನನಗೆ ಸಿಕ್ಕಿತು. ಈ ಅವಕಾಶಕ್ಕೆ ನಾನು ಸದಾ ಕಾಲ ಕೃತಜ್ಞನಾಗಿರುತ್ತೇನೆ ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ಅವರು ಕೇವಲ ಒಬ್ಬ ಗಾಯಕಿ ಆಗಿರಲಿಲ್ಲ, ಅವರ ವಿನಮ್ರ ವ್ಯಕ್ತಿತ್ವವನ್ನು ನಾನು ಮರೆಯಲು ಸಾಧ್ಯವಿಲ್ಲ. ಅವರು ಮಾಡಿರುವ ಸಾಧನೆಗೆ ಅವರೆ ಸರಿಸಾಟಿ ಎಂದು ಹೇಳಿದ್ದಾರೆ.

ಸಂಗೀತ ಮತ್ತು ಆಶಾ ಭೋಸ್ಲೆ!

ಭಾರತದ ಗಾನಕೋಗಿಲೆ ಎಂದೇ ಪ್ರಖ್ಯಾತರಾದ ಆಶಾ ಭೋಸ್ಲೆ ಅವರ ಗಾಯನ ಪರಂಪರೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ಅದ್ಭುತ ಅಧ್ಯಾಯವಾಗಿದೆ. ಎಂಟು ದಶಕಗಳಿಗೂ ಹೆಚ್ಚು ಕಾಲದ ಸುದೀರ್ಘ ವೃತ್ತಿಜೀವನದಲ್ಲಿ ಅವರು ಹಿಂದಿ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಸರಿ ಸುಮಾರು 12,000 ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಇವರನ್ನು ಏಷ್ಯಾದ ನೈಟಿಂಗೇಲ್​ ಎಂದೇ ಸಂಭೋದಿಸಲಾಗುತ್ತದೆ.

ಸಂಗೀತ ಕ್ಷೇತ್ರಕ್ಕೆ ಕೊಡುಗೆ ಮತ್ತು ಪ್ರಶಸ್ತಿ

1933 ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಭೋಸ್ಲೆ ಅವರು, ತಮ್ಮ ಒಂಬತ್ತನೇ ವಯಸ್ಸಿನಲ್ಲೇ ಸಂಗೀತ ಯಾತ್ರೆ ಆರಂಭಿಸಿದ್ದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಹಿಂದಿ ಸೇರಿದಂತೆ ಕನ್ನಡ, ಮರಾಠಿ, ಬೆಂಗಾಲಿ ಮುಂತಾದ 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇವರ ಈ ಸಂಗೀತ ಸೇವೆಗೆ ಭಾರತ ಸರ್ಕಾರವು ಅವರಿಗೆ ಪದ್ಮವಿಭೂಷಣ ಮತ್ತು ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ, (ಏಜನ್ಸೀಸ್).