ಟೀಂ ಇಂಡಿಯಾ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ನೇಮಕಾತಿ ಸಾಧ್ಯತೆ
- ಟೀಂ ಇಂಡಿಯಾ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ನೇಮಕಾತಿ ಸಾಧ್ಯತೆ
- ಟೆಸ್ಟ್ ಕ್ರಿಕೆಟ್ಗೆ ವಿವಿಎಸ್ ಲಕ್ಷ್ಮಣ್ ಕೋಚ್ ಸಾಧ್ಯತೆ
- ಏಕದಿನ ಹಾಗೂ ಟಿ-20 ಕೋಚ್ ಆಗಿ ಗಂಭೀರ್ ಮುಂದುವರಿಕೆ
ನವದೆಹಲಿ: ಸದ್ಯ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರಿಗಿಂತ ಕೋಚ್ಗಳ ಸುದ್ದಿಯೇ ಎಲ್ಲೆಡೆ ಹರಡುತ್ತಿದೆ. ಟೀ ಇಂಡಿಯಾ ಜಿಂಬಾಬ್ವೆ ವಿರುದ್ಧ ಮಾತ್ರ ಗೆದ್ದಿದ್ದು, ಸತತ ಸೋಲಿನ ಬಗ್ಗೆ ಬಿಸಿಸಿಐ ಆಡಳಿತ ಮಂಡಳಿಯಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ತಂಡ ಸತತವಾಗಿ ವಿಫಲತೆ ಕಾಣುತ್ತಿರುವ ಹಿನ್ನಲೆ, ಕೋಚ್ಗಳನ್ನು (Coach Appointment) ಬದಲಾಯಿಸುವ ಕುರಿತು ಮ್ಯಾನೇಜ್ಮೆಂಟ್ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಟೆಸ್ಟ್ ಕ್ರಿಕೆಟ್ಗೆ ಹೊಸ ಕೋಚ್?
ಲಭ್ಯ ಮಾಹಿತಿ ಪ್ರಕಾರ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಟೆಸ್ಟ್ನಲ್ಲಿ ಹೀನಾಯವಾಗಿ ಸೋತಿತ್ತು. ಇದರಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಮ್ಮ ಪ್ರಭಾವವನ್ನು ಕಡೆಮೆ ಮಾಡಿಕೊಂಡಿದೆ ಎಂದು ವಿಶ್ವ ಕ್ರಿಕೆಟ್ಗೆ ತಿಳಿದಿದೆ.
ತಂಡದ ಪ್ರದರ್ಶನ ಹೀಗೆ ಮುಂದುವರಿದರೆ 2027 ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ನಲ್ಲಿ ಭಾರತದ ಖಂಡಿತವಾಗಿ ಮಗ್ಗರಿಸಲಿದೆ. ಮೊದಲೇ ರೋಹಿತ್, ವಿರಾಟ್ ಮತ್ತು ಅಶ್ವಿನ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವುದು ಇನ್ನಷ್ಟು ಸಂಕಷ್ಟಕ್ಕೆ ಕಾರಣವಾಗಿದೆ.
ಆದ್ದರಿಂದ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ನನ್ನು ಕೆಳಗಿಳಿಸಿ, ಟೆಸ್ಟ್ ಕ್ರಿಕೆಟ್ಗೆ ಬೇರೊಬ್ಬರನ್ನು ಕೋಚ್ ಸ್ಥಾನಕ್ಕೆ ಕುಳಿಸುವ ಕುರಿತು ಬಿಸಿಸಿಐ ಚಿಂತನೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಏಕದಿನ ಮತ್ತು ಟಿ-20 ಗೆ ಗಂಭೀರ್ ಮುಂದುವರಿಕೆ!
ಸದ್ಯ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಭಾರತದ ಏಕದಿನ ಮತ್ತು ಟಿ-20 ಪಂದ್ಯಾವಳಿಯನ್ನು ಸೋತಿದ್ದರೂ ಕೂಡ ಗೌತಮ್ ಕುರ್ಚಿಗೆ ಕುತ್ತು ಬಂದಿಲ್ಲ ಎಂದು ಹೇಳಲಾಗುತ್ತಿದೆ. 2027 ರಲ್ಲಿ ಏಕದಿನ ವಿಶ್ವಕಪ್ ಮುಗಿಯುವವರೆಗೆ ಗಂಭೀರ್ ಭಾರತ್ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಟೆಸ್ಟ್ಗೆ ವಿವಿಎಸ್?
ಈಗ ಟೆಸ್ಟ್ಗೆ ನೂತನ ಕೋಚ್ ಹುಡುಕಾಟದಲ್ಲಿರುವ ಬಿಸಿಸಿಐ ಭಾರತದ ಅನುಭವಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರನ್ನು ಟೆಸ್ಟ್ ತಂಡದ ಕೋಚ್ರನ್ನಾಗಿ ನೇಮಿಸಲಿದೆ ಎಂದು ಹೇಳಲಾಗುತ್ತದೆ. ಸದ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನ ಮುಖ್ಯಸ್ಥನಾಗಿರುವ ಲಕ್ಷ್ಮಣ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮುಗಿಯುವವರೆಗೆ ಕೋಚ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಬಿಸಿಸಿಐ ಅಧಿಕೃತ ಪ್ರಕರಣೆ ಹೊರಡಿಸದ ಕಾರಣ, ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಕಂಡುಬರಲಿದೆ, (ಏಜನ್ಸೀಸ್).