ಅಭಿಷೇಕ್ ಶರ್ಮಾ ತಮ್ಮ ಶತಕವನ್ನು ಸಂಭ್ರಮಿಸುತ್ತಾ ಪಿಚ್ ಮೇಲೆ ಧ್ಯಾನ ಮಾಡುತ್ತಿದ್ದಾರೆ. 
ಕ್ರಿಕೆಟ್

30 ಎಸೆತಗಳಲ್ಲಿ ಶತಕ, ಬಳಿಕ ಪಿಚ್‌ನಲ್ಲೇ ಧ್ಯಾನ! ಅಭಿಷೇಕ್ ಶರ್ಮಾ ಹೀಗೆ ಮಾಡಿದ್ದೇಕೆ? ತಂದೆ ಕೊಟ್ಟ ಉತ್ತರ ವೈರಲ್! Abhishek Sharma

ನವದೆಹಲಿ: ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಅಭಿಷೇಕ್​ ಶರ್ಮಾ (Abhishek Sharma) ಅದ್ಭುತ ಪ್ರದರ್ಶನ ನೀಡಿದ ಹಿನ್ನಲೆ 3-0 ಅಂತರದಲ್ಲಿ ಟೀಮ್​ ಇಂಡಿಯಾ ಸರಣಿಯನ್ನು ವೈಟ್​ವಾಶ್​ ಮಾಡಿದೆ.

ಮೈದಾನದಲ್ಲಿ ರನ್​ 'ಅಭಿಷೇಕ'!

ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತವು ನಿಗದಿತ ಇಪ್ಪತ್ತು ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 221 ರನ್​ಗಳ ದೊಡ್ಡ ಮೊತ್ತದ ಟಾರ್ಗೆಟ್​ ನೀಡಿತು. ಈ ಭಾರಿ ಮೊತ್ತವನ್ನು ಕಲೆಹಾಕುವುದರಲ್ಲಿ ಓಪನರ್​​ ಅಭಿಷೇಕ್​ ಶರ್ಮಾ ಪಾತ್ರ ಪ್ರಮುಖವಾಗಿತ್ತು.
ಎದುರಿಸಿದ ಮೊದಲ ಬಾಲ್​ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್​ಗೆ ಮೊರೆಹೋದ ಅಭಿಷೇಕ್​ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟು 33 ಎಸೆಗಳಲ್ಲಿ 11 ಸಿಕ್ಸರ್​ ಹಾಗೂ 9 ಬೌಂಡರಿ ಬಾರಿಸಿ 108 ರನ್​ ಕಲೆಹಾಕಿ ವಿಕೆಟ್​ ಒಪ್ಪಿಸಿದರು.

ಪಿಚ್​ನಲ್ಲೇ ಓಂ ನಮಃ ಶಿವಾಯ!

ಕೇವಲ 30 ಎಸೆಗಳಲ್ಲಿ ಶತಕ ಸಿಡಿಸುತ್ತಿದ್ದಂತೆ, ಅಭಿಷೇಕ್​ ಶರ್ಮಾ ಸಂಭ್ರಮಿಸಿದ ರೀತಿ ಈಗ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ. ಮೂರಂಕಿ ತಲುಪುತ್ತಿದ್ದಂತೆ ಹೆಲ್ಮೆಟ್​, ಗ್ಲೌಸ್​ ಕಳಚಿ, ಬ್ಯಾಟ್​ ಅನ್ನು ಕೆಳಗಿಟ್ಟು, ನೇರವಾಗಿ ಧ್ಯಾನದ ಭಂಗಿಯಲ್ಲಿ ಕುಳಿತ ಅಭಿಷೇಕ್​ ಮೈದಾನದಲ್ಲಿಯೇ ಓಂ ನಮಃ ಶಿವಾಯ ಜಪ ಮಾಡಿದ್ದಾರೆ. ಈಗ ಅಭಿಷೇಕ್​ ಶರ್ಮಾ ಅವರ ಈ ಧ್ಯಾನದ ಭಂಗಿಯಲ್ಲಿರುವ ಫೋಟೊಗಳು ಸಕ್ಕತ್​ ಟ್ರೆಂಡಿಗ್​ನಲ್ಲಿದೆ. ಅಭಿಷೇಕ್​ ಶರ್ಮಾ 30 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ನೂತನ ದಾಖಲೆ ಬರೆಯುವ ಮೊದಲು ಜಿಂಬಾಬ್ವೆಯ ಸಿಕಂದರ್​ ರಾಜಾ ಹಾಗೂ ನ್ಯೂಜಿಲೆಂಡ್‌ನ ಫಿನ್ ಅಲೆನ್ ಕೇವಲ 33 ಎಸೆತಗಳಲ್ಲಿ ಸೆಂಚುರಿ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ನನ್ನ ಮಗ ಬಹಳ ಧ್ಯಾನ ಮಾಡುತ್ತಾನೆ!
ಇನ್ನೂ, ಅಭಿಷೇಕ್​ ಶರ್ಮಾ ಕ್ರಿಕೆಟ್​ ಪಿಚ್​ ಮೇಲೆ ಕುಳಿತು ಜಪ ಮಾಡಿರುವ ಫೋಟೊ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ, ಅವರ ತಂದೆ ರಾಜಕುಮಾರ್ ಶರ್ಮಾ, ನನ್ನ ಮಗ ದಿನಾಲೂ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಧ್ಯಾನ ಮಾಡುತ್ತಾನೆ. ಇದರಿಂದ ಅವನ ದಿನ ತುಂಬಾ ಚೆನ್ನಾಗಿ ಇರುತ್ತದೆ. ಕ್ರಿಕೆಟ್​ ಅವನಿಗೆ ದೇವರಾದರೆ, ಪಿಚ್​ ಅವನಿಗೆ ಗುರುದ್ವಾರ ಇದ್ದಂತೆ ಹೀಗಾಗಿ ತನ್ನ ಶತಕದ ಸಂಭ್ರಮವನ್ನು ಅಲ್ಲಿಯೇ ಧ್ಯಾನ ಮಾಡುವ ಮೂಲಕ ಆಚರಿಸಿದ್ದಾನೆ ಎಂದಿದ್ದಾರೆ.
ಅವನಿಗೆ ನಾವು, ಮನೆಗೆ ಬರುವಂತೆ ಬಹಳ ಸಲ ಒತ್ತಾಯ ಮಾಡಿದ್ದೇವೆ. ಆದರೆ ಅವನಿಗೆ ಕ್ರಿಕೆಟ್​ ಮೇಲೆ ಬಹಳ ಆಸಕ್ತಿಯಿದೆ. ಹೀಗಾಗಿ ದಿನಾಲೂ ತರಬೇತಿ, ಕಠಿಣ ಅಭ್ಯಾಸವನ್ನು ಮಾಡುತ್ತಾನೆ. ಈಗ ಅವನು ನಿರ್ಮಿಸಿರುವ ದಾಖಲೆ ಅವನ ಪರಿಶ್ರಮಕ್ಕೆ ದೊರೆತ ಫಲವಾಗಿದೆ ಎಂದಿದ್ದಾರೆ, (ಏಜೆನ್ಸೀಸ್​).