ಕ್ರೀಡೆ

ಪ್ಯಾರಿಸ್​ ಒಲಿಂಪಿಕ್ಸ್​ ವೀಕ್ಷಿಸಲು ಸೈಕಲ್​ನಲ್ಲಿ ಎರಡು ಸಾವಿರ ಕಿ.ಮೀ. ಪ್ರಯಾಣಿಸಿದ ಕೇರಳ ಯುವಕ!

ಪ್ಯಾರಿಸ್​: ಕೇರಳದ ಸೈಕ್ಲಿಸ್ಟ್​ ಒಬ್ಬರು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ನೀರಜ್​ ಚೋಪ್ರಾರ ಜಾವೆಲಿನ್​ ಎಸೆತ ಸ್ಪರ್ಧೆಯನ್ನು ವೀಕ್ಷಿಸುವ ಸಲುವಾಗಿ ಕಲ್ಲಿಕೋಟೆಯಿಂದ 22 ಸಾವಿರ ಕಿಲೋಮೀಟರ್​ ದೂರದ ಪ್ಯಾರಿಸ್​ವರೆಗೆ 2 ವರ್ಷಗಳಲ್ಲಿ ಸೈಕಲ್​ ಮೂಲಕ ಪ್ರಯಾಣಿಸಿದ್ದಾರೆ.

2022ರ ಆಗಸ್ಟ್​ 15ರಂದು ಸೈಕಲ್​ ತುಳಿಯಲಾರಂಭಿಸಿದ ಫಯಿಸ್​ ಅಶ್ರಫ್​ ಅಲಿ 30 ದೇಶಗಳನ್ನು ಸುತ್ತಿ ಫ್ರಾನ್ಸ್​ ತಲುಪಿದ್ದಾರೆ. 17 ದೇಶಗಳನ್ನು ಸುತ್ತಿನ ಕಳೆದ ವರ್ಷ ಆಗಸ್ಟ್​ನಲ್ಲಿ ಅವರು ಬುಡಾಪೆಸ್ಟ್​ ತಲುಪಿದ್ದರು. ಆಗ ಅಲ್ಲಿ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಭಾಗವಹಿಸಿದ ನೀರಜ್​ ಚೋಪ್ರಾರನ್ನು ಭೇಟಿಯಾಗಿದ್ದರು. ಇದಕ್ಕೆ ಕೇರಳದ ಅಥ್ಲೆಟಿಕ್ಸ್​ ಕೋಚ್​ ಒಬ್ಬರೂ ನೆರವಾಗಿದ್ದರು.

ಮೊದಲಿಗೆ 13 ಸಾವಿರ ರೂ. ಮೌಲ್ಯದ ಸೈಕಲ್​ನಲ್ಲಿ ಪ್ರಯಾಣ ಆರಂಭಿಸಿದ್ದ ಅಶ್ರಫ್​ ಅಲಿ, ಸಿಂಗಾಪುರ ತಲುಪಿದ ಬಳಿಕ 1 ಲಕ್ಷ ರೂ. ಮೌಲ್ಯದ ಸೈಕಲ್​ ಖರೀದಿಸಿದ್ದರು. ಅಂತಿಮವಾಗಿ ಪ್ಯಾರಿಸ್​ಗೆ ಪ್ರಯಾಣಿಸಲು ಅಶ್ರಫ್​​ ಅಲಿ 2.5 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ಸೈಕಲ್​ ಖರೀದಿಸಿದ್ದರು. ಪ್ರತಿದಿನ ಸರಾಸರಿ 150 ಕಿಲೋಮೀಟರ್​ ಪ್ರಯಾಣಿಸುತ್ತಿದ್ದರು. 4 ಜೊತೆ ಬಟ್ಟೆಯೊಂದಿಗೆ ಒಂದು ಟೆಂಟ್​, ಮಲಗುವ ಬ್ಯಾಗ್​ ಜತೆಗೆ ಸೈಕಲ್​ನಲ್ಲಿ ಸುಮಾರು 50 ಕೆಜಿ ಭಾರದ ವಸ್ತುಗಳೊಂದಿಗೆ ಪ್ರಯಾಣಿಸಿದ್ದಾರೆ.