ಕ್ರೀಡೆ

ಐಪಿಎಲ್​ಗೆ ಯುಎಇ ಕೂಡ ಸುರಕ್ಷಿತ ಅಲ್ಲವಂತೆ!

ನವದೆಹಲಿ: ಐಪಿಎಲ್​ 13ನೇ ಆವೃತ್ತಿಯನ್ನು ಸಂಪೂರ್ಣವಾಗಿ ಭಾರತದಲ್ಲೇ ನಡೆಸಿ. ಕರೊನಾ ವೈರಸ್​ ಹಾವಳಿಯಿಂದ ಯುಎಇ ಕೂಡ ಸುರಕ್ಷಿತವಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರಿಗೆ ಮನವಿಯೊಂದು ಸಲ್ಲಿಕೆಯಾಗಿದೆ. ಐಪಿಎಲ್​ ಸ್ಪಾಟ್​-ಫಿಕ್ಸಿಂಗ್​ ಪ್ರಕರಣದ ಮೂಲ ದೂರುದಾರ ಆದಿತ್ಯ ವರ್ಮ, ಐಪಿಎಲ್​ ಆಡಳಿತ ಮಂಡಳಿಯ ಮಹತ್ವದ ಸಭೆಗೆ ಪೂರ್ವಭಾವಿಯಾಗಿ ಈ ಮನವಿಯನ್ನು ಸಲ್ಲಿಸಿದ್ದಾರೆ.

ಐಪಿಎಲ್​ ಟೂರ್ನಿಯನ್ನು ಸೆಪ್ಟೆಂಬರ್​ 19ರಿಂದ ಯುಎಇಯಲ್ಲಿ ನಡೆಸಲು ಬಿಸಿಸಿಐ ಎಲ್ಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಕೇಂದ್ರ ಸರ್ಕಾರದಿಂದ ಅಂತಿಮ ಅಂಗೀಕಾರ ಸಿಗುವುದಷ್ಟೇ ಬಾಕಿ ಇದೆ. 'ದುಬೈ ರಗ್ಬಿ ಸೆವೆನ್ಸ್​ ಟೂರ್ನಿಯು ಯುಎಇಯಲ್ಲಿ ನಡೆಯುವ ಅತಿದೊಡ್ಡ ಕ್ರೀಡಾಕೂಟವಾಗಿದೆ. ಆದರೆ ನವೆಂಬರ್​ನಲ್ಲಿ ನಡೆಯಬೇಕಿರುವ ಟೂರ್ನಿಯನ್ನು ಈಗಾಗಲೆ ಮುಂದೂಡಲಾಗಿದೆ. ಹೀಗಾಗಿರುವಾಗ ನಾವು ಐಪಿಎಲ್​ ಟೂರ್ನಿಯನ್ನು ಯುಎಇಗೆ ತೆಗೆದುಕೊಂಡು ಹೋಗುವುದು ಎಷ್ಟರಮಟ್ಟಿಗೆ ಸರಿ? ಭಾರತದಲ್ಲೇ ಐಪಿಎಲ್​ ಟೂರ್ನಿಯನ್ನು ಆಯೋಜಿಸುವಂತೆ ನಾನು ಸೌರವ್​ ಗಂಗೂಲಿ ಅವರಿಗೆ ಪತ್ರ ಬರೆದಿರುವೆ' ಎಂದು ಆದಿತ್ಯ ವರ್ಮ ಶನಿವಾರ ತಿಳಿಸಿದ್ದಾರೆ.

ಯುಎಇಯ 3 ನಗರಗಳಲ್ಲಿ ಪ್ರತ್ಯೇಕವಾದ ಜೈವಿಕ-ಸುರಕ್ಷಾ ವಾತಾವರಣವನ್ನು ನಿರ್ಮಿಸಿಕೊಳ್ಳುವುದಕ್ಕಿಂತ ಮುಂಬೈ ನಗರದಲ್ಲಿ ಇಂಥ ಜೈವಿಕ ಬಬಲ್​ ನಿರ್ಮಿಸಿಕೊಳ್ಳುವುದು ಸುಲಭ ಎಂದು ಆದಿತ್ಯ ವರ್ಮ ಅಭಿಪ್ರಾಯಪಟ್ಟಿದ್ದಾರೆ. 'ಮುಂಬೈನಲ್ಲಿ ಟೂರ್ನಿಯನ್ನು ಆಯೋಜಿಸಲು ಪ್ರಯತ್ನಿಸುವುದು ಉತ್ತಮವೆನಿಸುತ್ತದೆ' ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಈಗ 5 ಲಕ್ಷಕ್ಕೂ ಅಧಿಕ ಸಕ್ರಿಯ ಕರೊನಾ ಪ್ರಕರಣಗಳಿವೆ. ಹೀಗಾಗಿ ವಿದೇಶಿ ಆಟಗಾರರು ಭಾರತಕ್ಕೆ ಬರಲು ಹಿಂದೇಟು ಹಾಕಬಹುದು ಎಂಬ ವಾದಕ್ಕೆ ಪ್ರತಿಕ್ರಿಯಿಸಿರುವ ಆದಿತ್ಯ ವರ್ಮ, 'ಐಪಿಎಲ್​ನಲ್ಲಿ ಸುಮಾರು 60 ವಿದೇಶಿ ಆಟಗಾರರಷ್ಟೇ ಇದ್ದಾರೆ. ಅವರು ಬರಲು ಒಪ್ಪದಿದ್ದರೆ ಭಾರತೀಯ ಆಟಗಾರರನ್ನೇ ಬದಲಿ ಆಟಗಾರರನ್ನಾಗಿ ಸೇರಿಸಿಕೊಳ್ಳಲಿ. ಐಪಿಎಲ್​ ಟೂರ್ನಿ ಭಾರತದಲ್ಲೇ ನಡೆದರೆ ಜನರ ಮನೋಬಲವೂ ಹೆಚ್ಚಲಿದೆ. ಇಂಥ ಸಮಯದಲ್ಲಿ ನಾವು ಭಾರತದಲ್ಲಿ ಯಶಸ್ವಿ ಐಪಿಎಲ್​ ಟೂರ್ನಿ ಆಯೋಜಿಸಿದರೆ, ಅದೊಂದು ದೊಡ್ಡ ಸಾಧನೆಯಾಗಲಿದೆ'