ಕ್ರೀಡೆ

ಚಾಂಪಿಯನ್ಸ್​ ಟ್ರೋಫಿಯಲ್ಲಿ ಗರಿಷ್ಠ ರನ್​-ವಿಕೆಟ್ ಸಾಧಕರ ಗೌರವಕ್ಕೆ ಪೈಪೋಟಿ; ಫೈನಲ್​ ನಿರ್ವಹಣೆಯೇ ನಿರ್ಣಾಯಕ!

ದುಬೈ: ಇಂಗ್ಲೆಂಡ್​ನ ಬೆನ್​ ಡಕೆಟ್​ (225) ಮತ್ತು ಕಿವೀಸ್​ ವೇಗಿ ಮ್ಯಾಟ್​ ಹೆನ್ರಿ (10) ಸದ್ಯ ಟೂರ್ನಿಯ ಗರಿಷ್ಠ ರನ್​ ಮತ್ತು ವಿಕೆಟ್​ ಸಾಧಕರೆನಿಸಿದ್ದಾರೆ. ಆದರೆ ಫೈನಲ್​ ಪಂದ್ಯದ ನಂತರವೂ ಇವರು ಈ ಗೌರವ ಉಳಿಸಿಕೊಳ್ಳುವರು ಎನ್ನಲಾಗದು.

ಗರಿಷ್ಠ ರನ್​ಸ್ಕೋರರ್​ ಎನಿಸುವ ಪೈಪೋಟಿಯಲ್ಲಿರುವ ರಚಿನ್​ ರವೀಂದ್ರ (226), ವಿರಾಟ್​ ಕೊಹ್ಲಿ (217), ಶ್ರೇಯಸ್​ ಅಯ್ಯರ್​ (195), ಟಾಮ್​ ಲಾಥಮ್​ (191), ಕೇನ್​ ವಿಲಿಯಮ್ಸನ್​ (189), ಶುಭಮಾನ್​ ಗಿಲ್​ (157) ಫೈನಲ್​ನಲ್ಲೂ ಆಡಲಿದ್ದಾರೆ. ಮ್ಯಾಟ್​ ಹೆನ್ರಿ ಗಾಯದಿಂದಾಗಿ ಫೈನಲ್​ ಆಡುವ ಬಗ್ಗೆ ಅನುಮಾನವಿದೆ. ಹೀಗಾಗಿ ಅವರು ಗೈರಾದರೆ ಮೊಹಮದ್​ ಶಮಿ (8), ವರುಣ್​ ಚಕ್ರವರ್ತಿ (7), ಮಿಚೆಲ್​ ಸ್ಯಾಂಟ್ನರ್​ಗೆ (7) ಫೈನಲ್​ನಲ್ಲಿ ಮಿಂಚಿ ಗರಿಷ್ಠ ವಿಕೆಟ್​ ಟೇಕರ್​ ಎನಿಸುವ ಅವಕಾಶವಿದೆ. ಹೀಗಾಗಿ ಟೂರ್ನಿಯ ಗರಿಷ್ಠ ರನ್​-ವಿಕೆಟ್​ ಸಾಧಕರನ್ನು ನಿರ್ಧರಿಸುವಲ್ಲಿ ಫೈನಲ್​ ಪಂದ್ಯದ ನಿರ್ವಹಣೆ ಪ್ರಮುಖ ಪಾತ್ರ ವಹಿಸಲಿದೆ.