ಕ್ರೀಡೆ

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 62ನೇ ಶತಕ ಸಿಡಿಸಿದ ಚೇತೇಶ್ವರ ಪೂಜಾರ

ಪ್ರಸಾದ್​ ಶೆಟ್ಟಿಗಾರ್​

ಜೈಪುರ: ಅನುಭವಿ ಬ್ಯಾಟರ್​ ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 62ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಜೈಪುರದಲ್ಲಿ ನಡೆಯುತ್ತಿರುವ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ಪರ 36 ವರ್ಷದ ಪೂಜಾರ ಮೊದಲ ದಿನ 110 ರನ್​ ಬಾರಿಸಿದರು. ಇದು ರಣಜಿ ಟ್ರೋಫಿಯಲ್ಲಿ ಅವರ 23ನೇ ಶತಕವಾಗಿದೆ.

ಪೂಜಾ ಅವರು 103 ಟೆಸ್ಟ್​ಗಳಲ್ಲಿ 19ಶತಕ ಸಿಡಿಸಿದ್ದಾರೆ. ಸಚಿನ್​ ತೆಂಡುಲ್ಕರ್​, ಸುನೀಲ್​ ಗಾವಸ್ಕರ್​ (ತಲಾ 81) ಮತ್ತು ರಾಹುಲ್​ ದ್ರಾವಿಡ್​ (68) ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಪೂಜಾರಗಿಂತ ಅಧಿಕ ಶತಕ ಸಿಡಿಸಿರುವ ಭಾರತೀಯರಾಗಿದ್ದಾರೆ. 2023ರ ಜೂನ್​ನಲ್ಲಿ ಪೂಜಾರ ಭಾರತ ತಂಡದ ಪರ ಕೊನೆಯದಾಗಿ ಆಡಿದ್ದು, ಇಂಗ್ಲೆಂಡ್​ ವಿರುದ್ಧದ ತವರಿನ ಸರಣಿಯಲ್ಲಿ ಪುನರಾಗಮನ ನಿರೀಕ್ಷಿಸುತ್ತಿದ್ದಾರೆ.

ಪೃಥ್ವಿ ಷಾ ಬಿರುಸಿನ ಶತಕ

ಮುಂಬೈ ಆರಂಭಿಕ ಪೃಥ್ವಿ ಷಾ (159 ರನ್​, 185 ಎಸೆತ, 18 ಬೌಂಡರಿ, 3 ಸಿಕ್ಸರ್​) ಛತ್ತೀಸ್​ಗಢ ವಿರುದ್ಧದ ರಣಜಿ ಪಂದ್ಯದಲ್ಲಿ ಬಿರುಸಿನ ಶತಕ ಸಿಡಿಸುವ ಮೂಲಕ ಗಮನಸೆಳೆದಿದ್ದಾರೆ. ಗಾಯದಿಂದ ಚೇತರಿಸಿಕೊಂಡು 6 ತಿಂಗಳ ಬಳಿಕ ಇತ್ತೀಚೆಗಷ್ಟೇ ಮರಳಿ ಕಣಕ್ಕಿಳಿದಿರುವ ಪೃಥ್ವಿ ಷಾ, 102 ಎಸೆತಗಳಲ್ಲೇ ಶತಕ ಪೂರೈಸಿದರು. ಮುಂಬೈ ನಾಯಕ ಹಾಗೂ ಅನುಭವಿ ಬ್ಯಾಟರ್​ ಅಜಿಂಕ್ಯ ರಹಾನೆ (1) ರನ್​ಬರ ಮುಂದುವರಿದಿದೆ.