ಕ್ರೀಡೆ

VIDEO: ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಸಹ ಆಟಗಾರರನ್ನೇ ಹೊರ ಕಳಿಸಿದ ಬಟ್ಲರ್!

ಮೆಲ್ಬೋರ್ನ್​​: ಪಾಕಿಸ್ತಾನವನ್ನು ಸೋಲಿಸುವ ಮೂಲಕ ಈ ಬಾರಿಯ ಟಿ-20 ವಿಶ್ವಕಪ್​ನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿದೆ. ಪಂದ್ಯ ಗೆಲ್ಲುತ್ತಿದ್ದಂತೆ ಇಂಗ್ಲೆಂಡ್ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ನಾಯ ಜೋಸ್ ಬಟ್ಲರ್, ತಂಡದ ಸಹ ಆಟಗಾರರಾದ, ಮೊಯಿನ್ ಅಲಿ ಹಾಗೂ ಆದಿಲ್ ರಶೀದ್ ಅವರನ್ನು ಸಂಭ್ರಮಾಚರಣೆಯಿಂದ ಹೊರ ಹೋಗುವಂತೆ ಹೇಳಿದ್ದಾರೆ. ಇದೀಗ ಬಟ್ಲರ್ ಸಹ ಆಟಗಾರರಿಬ್ಬರನ್ನು ಹೊರ ಹೋಗಿ ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನು ನೋಡಿದ ಅನೇಕರ ಬಟ್ಲರ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹಾ, ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದು ಹೇಳಿದ್ದಕ್ಕೆ ಮೆಚ್ಚುಗೆ ಯಾಕೆ ಎಂದು ಯೋಚಿಸುತ್ತಿದ್ದರೆ ನಿಮ್ಮ ಊಹೆ ತಪ್ಪು. ಅಸಲಿಗೆ ಬಟ್ಲರ್ ನಡೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ತಂಡದ ಸಹ ಆಟಗಾರರಾದ ಮೊಯಿನ್ ಅಲಿ ಹಾಗೂ ಆದಿಲ್ ರಶೀದ್, ಇಸ್ಲಾಂ ಧರ್ಮಕ್ಕೆ ಸೇರಿದವರು. ಈ ಧರ್ಮದಲ್ಲಿ ಇವರಿಗೆ ಶಾಂಪೇನ್(ಮದ್ಯ) ನಿಷೇಧ.

ಇಸ್ಲಾಂ ಧರ್ಮದಲ್ಲಿ ಮದ್ಯ ನಿಷೇಧ ಎಂಬುವುದನ್ನು ಅರಿತಿದ್ದ ಬಟ್ಲರ್, ಸಂಭ್ರಮಾಚರಣೆ ವೇಳೆ ಮೊಯಿನ್ ಅಲಿ ಹಾಗೂ ಆದಿಲ್ ರಶೀದ್ ಅವರನ್ನು ಹೊರ ಕಳುಹಿಸಿದ್ದಾರೆ. ನಂತರ ಎಲ್ಲರೂ ಸೇರಿಕೊಂಡು ಶಾಂಪೇನ್ ಬಾಟಲ್ ತೆರೆದು ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ಮುಂದುವರಿಸಿದ್ದಾರೆ.