ಕ್ರೀಡೆ

Champions Trophy ಕರಡು ವೇಳಾಪಟ್ಟಿ ಪ್ರಕಟ; ಭಾರತ-ಪಾಕ್​ ಪಂದ್ಯಕ್ಕೆ ಮುಹೂರ್ತ ಫಿಕ್ಸ್​

ನವದೆಹಲಿ: 2025ರ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಭುಗಿಲೆದ್ದಿದ ವಿವಾದ ಶಾಂತಗೊಂಡಿದ್ದು, ಭಾರತ ತಂಡವು ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿಯನ್ನು ಆಡಲಿದೆ. ಇನ್ನೂ ಟೂರ್ನಿಗೆ ಸಂಬಂಧಿಸಿದಂತೆ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಕರಡು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

2025ರ ಫೆಬ್ರವರಿ 19ರಂದು ಟೂರ್ನಿ ಆರಂಭವಾಗಲಿದ್ದು, ಮಾರ್ಚ್​ 09ರಂದು ಮುಕ್ತಾಯಗೊಳ್ಳಲಿದೆ. ಸದ್ಯ ಬಿಡುಗಡೆಯಾಗಿರುವ ಕರಡು ವೇಳಾಪಟ್ಟಿಯಲ್ಲಿ ಗ್ರೂಪ್​ ಎನಲ್ಲಿ ಟೀಮ್​ ಇಂಡಿಯಾ ಕಾಣಿಸಿಕೊಂಡಿದದ್ದು, ಫೆಬ್ರವರಿ 20ರಿಂದ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.

ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್​ ಸವಾಲನ್ನು ಎದುರಿಸಲಿರುವ ಭಾರತ ತಂಡವು ಮೂರನೇ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ. ಟೂರ್ನಿಯಲ್ಲಿ ಒಟ್ಟು ಎಂದು ತಂಡಗಳು ಭಾಗಿಯಾಗಲಿದ್ದು, ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದ್ದು ಇನ್ನಷ್ಟೇ ಖಚಿತವಾಗಬೇಕಿದೆ.

ಭಾರತದ ಎಲ್ಲಾ ಪಂದ್ಯಗಳು ಹೈಬ್ರಿಡ್​ ಮಾದರಿಯಲ್ಲಿ ನಡೆಯಲಿದ್ದು, ಒಂದು ವೇಳೆ ಟೀಮ್​ ಇಂಡಿಯಾ ಫೈನಲ್​ ಪ್ರವೇಶಿಸಿದರೆ ಆ ಪಂದ್ಯ ಕೂಡ ಹೈಬ್ರಿಡ್​ ಮಾದರಿಯಲ್ಲಿ ನಡೆಯಲಿದೆ. ಸದ್ಯ ಕರಡು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಅಂತಿಮ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಭಾರತದ ವೇಳಾಪಟ್ಟಿ

ಫೆಬ್ರವರಿ 20 ಭಾರತ vs ಬಾಂಗ್ಲಾದೇಶ

ಫೆಬ್ರವರಿ 23 ಭಾರತ vs ನ್ಯೂಜಿಲೆಂಡ್​

ಮಾರ್ಚ್​ 01 ಭಾರತ vs ಪಾಕಿಸ್ತಾನ