ICC Champions Trophy 2025 ಈ ಬಾರಿಯ ಚಾಂಪಿಯನ್ ಟ್ರೋಫಿಯ ಉದ್ಘಾಟನಾ ಸಮಾರಂಭ ಪಾಕಿಸ್ತಾನದಲ್ಲಿ ನಡೆಯಲಿದ್ದು, ಅಲ್ಲಿಗೆ ಹೋಗಲು ನಾಯಕ ರೋಹಿತ್ ಶರ್ಮಾ ನಿರಾಕರಿದ ಬೆನ್ನಲ್ಲೆ ಬಿಸಿಸಿಐ ಮೇಲೆ ಪಾಕಿಸ್ತಾನ ಟೀಕೆ ಮಾಡಿದೆ.
ಇದೀಗ 'ICC Champions Trophy 2025 Pakistan' ಎಂದು ಟೀಮ್ ಇಂಡಿಯಾದ ಜರ್ಸಿ ಮೇಲೆ ಮುದ್ರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಅಧಿಕಾರಿಗಳು ನಿರಕಾರಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ(PCB) ಹೇಳಿಕೊಂಡಿದೆ. ಆದರೆ, ಇದಕ್ಕೆ ಬಿಸಿಸಿಐ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.
ಬಿಸಿಸಿಐ ಅಧಿಕಾರಿಗಳು ಕ್ರಿಕೆಟ್‌ನಲ್ಲಿ ರಾಜಕೀಯ ತರುತ್ತಿದ್ದಾರೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ಐಎಎನ್ಎಸ್ ಸುದ್ದಿ ಸಂಸ್ಥೆಗೆ ಹೇಳಿಕೊಂಡಿದ್ದಾರೆ.
''ಬಿಸಿಸಿಐ ಕ್ರಿಕೆಟ್‌ನಲ್ಲಿ ರಾಜಕೀಯವನ್ನು ತರುತ್ತಿದೆ, ಇದು ಆಟಕ್ಕೆ ಒಳ್ಳೆಯದಲ್ಲ. ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರು. ಉದ್ಘಾಟನಾ ಸಮಾರಂಭಕ್ಕೆ ತಮ್ಮ ನಾಯಕನನ್ನು ಕಳುಹಿಸಲು ಕೂಡ ಅವರು ಒಪ್ಪಲಿಲ್ಲ, ಇದೀಗ ಅವರು ತಮ್ಮ ಜೆರ್ಸಿಯಲ್ಲಿ ಆತಿಥೇಯ ರಾಷ್ಟ್ರದ (ಪಾಕಿಸ್ತಾನ) ಹೆಸರನ್ನು ಮುದ್ರಿಸಲು ಬಯಸುವುದಿಲ್ಲ ಎಂಬ ವರದಿಗಳಿವೆ. ಐಸಿಸಿ ಇದನ್ನು ಮಾಡಲು ಬಿಡುವುದಿಲ್ಲ ಎಂದು ನಾವು ನಂಬಿದ್ದೇವೆ'' ಎಂದು ಪಿಸಿಬಿ ಅಧಿಕಾರಿ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.(ಏಜೆನ್ಸೀಸ್)