ಕ್ರೀಡೆ

ಮನು ಭಾಕರ್​,​ ಡಿ.ಗುಕೇಶ್​ಗೆ ಖೇಲ್​​ ರತ್ನ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರ; ಜ.17ರಂದು ಪ್ರಧಾನ

ನವದೆಹಲಿ:ಡಬಲ್​ ಒಲಂಪಿಕ್ ವಿಜೇತೆ ಮನುಬಾಕರ್​ ಮತ್ತು ವಿಶ್ವ ಚೆಸ್​ ಚಾಂಪಿಯನ್​ ಡಿ.ಗುಕೇಶ್​ಗೆ ಮೇಜರ್​ ಧ್ಯಾನ್​ಚಂದ್​ ಖೆಲ್​​ ರತ್ನ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ ಎಂದು ಕ್ರೀಡಾ ಸಚಿವಾಲಯ ಗುರುವಾರ(ಜ.02) ಘೋಷಿಸಿದೆ.

ಇದೇ ಜ.17ರಂದು ನವದೆಹಲಿಯ ರಾಷ್ಟ್ರಪತಿಭವನದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್ ಸೇರಿದಂತೆ ಮನುಬಾಕರ್ ಮತ್ತು​ ಡಿ.ಗುಕೇಶ್​ ಅವರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ​

ಮನುಭಾಕರ್​ ಕೈಬಿಟ್ಟಿದ್ದ ಕೇಂದ್ರ!

ಈ ಹಿಂದೆ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಮನು ಭಾಕ‌ರ್ ಅವರನ್ನು ಪರಿಗಣಿಸಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿವು. 12 ಸದಸ್ಯರ ಆಯ್ಕೆ ಸಮಿತಿಯು ಪ್ರಶಸ್ತಿಗೆ ಶಿಫಾರಸು ಮಾಡಿದ ಪಟ್ಟಿಯಲ್ಲಿ ಮನು ಭಾಕರ್ ಹೆಸರಿಲ್ಲ ಎಂದು ವರದಿ ಕೂಡ ಆಗಿತ್ತು. ಬಳಿಕ ಮನು ಭಾಕರ್ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಕ್ರೀಡಾ ಸಚಿವಾಲಯ ಹೇಳಿತ್ತು. ಇದಾದ ಬಳಿಕ ಅರ್ಜಿಯನ್ನು ಕಳುಹಿಸಲಾಗಿದೆ ಎಂದು ಮನು ಕುಟುಂಬ ಮತ್ತು ಆಪ್ತ ಮೂಲಗಳು ತಿಳಿಸಿವೆ. ಶಿಫಾರಸಿನ ಕುರಿತು ಕೇಂದ್ರವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿತ್ತು. ಇದನ್ನು ಸ್ವತ ಮನು ಭಾಕರ್​ ಕೂಡ ಅರ್ಜಿ ಸಲ್ಲಿಸಿರಲ್ಲಿಲ್ಲ ಎಂದು ಒಪ್ಪಿಕೊಂಡಿದ್ದರು.

ಇದೀಗ ಸರ್ಕಾರ ಸಮಿತಿ ಶಿಫಾರಸ್ಸುಗಳ ಆಧಾರ ಮೇಲೆ ಮತ್ತು ಸರಿಯಾದ ಪರಿಶೀಲನೆ ಬಳಿಕ ಈ ಕ್ರೀಡಾಪಟುಗಳಿಗೆ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)