ನ್ಯೂಯಾರ್ಕ್: ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿ ಅಮೆರಿಕಾದಲ್ಲಿ ನಡೆಯುತ್ತಿದ್ದು, ಗ್ರೂಪ್ ಸ್ಟೇಜ್ನ ಪ್ರತಿ ಪಂದ್ಯಗಳು ಉತ್ತಮವಾಗಿ ಸಾಗುತ್ತಿವೆ. ಈ ಪೈಕಿ ಆಯಾ ವಿಭಾಗದಲ್ಲಿ ಭಾರತ, ಯುಎಸ್ಎ, ಆಸ್ಟ್ರೇಲಿಯಾ, ಇಂಗ್ಲೆಂಡ್, ಆಫ್ಗಾನಿಸ್ತಾನ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳು ಸದ್ಯ ಸ್ಪರ್ಧೆಯಲ್ಲಿ ಸಖತ್ ಪೈಪೋಟಿಯಲ್ಲಿವೆ. ಇದೆಲ್ಲದರ ನಡುವೆ ಮಾಜಿ ಕ್ರಿಕೆಟಿಗರೊಬ್ಬರು ನೀಡಿದ ಹೇಳಿಕೆ ಮಾತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಅಪ್ಪ ನಿಮ್ಮನ್ನು ಮಿಸ್ ಮಾಡಿಕೊಳ್ತಿದ್ದೀನಿ, ನೀವೇ ನನ್ನ ಹೀರೊʼಎಂದು ಫಾದರ್ಸ್ ಡೇಗೆ ವಿಶ್ ಮಾಡಿದ ದರ್ಶನ್ ಪುತ್ರ ವಿನೀಶ್
ಟಿ20 ಪಂದ್ಯಾವಳಿಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಗ್, "ನನ್ನ ಪ್ರಕಾರ ಯುಎಸ್ಎ ಅದೃಷ್ಟ ತಂಡ ಎಂಬುದನ್ನು ನಾನು ಒಪ್ಪುವುದಿಲ್ಲ. ನೀವು ಹೇಳಿದಂತೆ ಕಳೆದ ಪಂದ್ಯದಲ್ಲಿ ಯುಎಸ್ಎ ಪಾಕಿಸ್ತಾನವನ್ನು ಮಣಿಸಿತು ಎಂಬ ಕಾರಣಕ್ಕೆ, ಅವರನ್ನು ಲಕ್ಕಿ ಎಂದು ನಿರ್ಧರಿಸುವುದು ಸೂಕ್ತವಲ್ಲ. ಪಾಕ್ ಒಂದು ಟೆಸ್ಟ್ ಆಡುವ ದೇಶ. ಸೂಪರ್ 8ನಲ್ಲಿ ಆಡುವ ಅರ್ಹತೆ ಅವರಿಗಿಲ್ಲ" ಎಂದು ಹೇಳಿದರು.
"ಈ ಬಾರಿಯ ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ಅತ್ಯಂತ ದುರದೃಷ್ಟಕರ ತಂಡವಾಗಿದೆ. ಅವರು ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಬಹಳ ಸಮೀಪಕ್ಕೆ ತೆಗೆದುಕೊಂಡು ಹೋದರು. ಬಾರ್ಬಡೋಸ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್ ಮೊದಲು ಇಂಗ್ಲೆಂಡ್ ವಿರುದ್ಧ ಆಡಿತ್ತು. 10 ಓವರ್‌ಗಳ ನಂತರ 90/0 ಆಗಿತ್ತು. ಬೌನ್ಸ್ ಇದ್ದ ಆ ವಿಕೆಟ್‌ನಲ್ಲಿ ಇಂಗ್ಲೆಂಡ್ ಸೋಲಿಸಲು ಅವರಿಗೆ ದೊಡ್ಡ ಅವಕಾಶವಿತ್ತು. ಆದ್ರೆ, ಅಂದುಕೊಂಡಂತೆ ಅದು ನಡೆಯಲಿಲ್ಲ. ಅಂದು ಅವರು ಆಡಿದಿದ್ದರೆ, ಖಂಡಿತ ಎರಡನೇ ಸುತ್ತಿಗೆ ಪ್ರವೇಶ ಪಡೆಯುತ್ತಿದ್ದರು" ಎಂದಿದ್ದಾರೆ.
ಇದನ್ನೂ ಓದಿ: ಶ್ರೀಗಂಧ ವಸ್ತುಸಂಗ್ರಹಾಲಯ ಮೃಗಾಲಯಕ್ಕೆ ಸ್ಥಳಾಂತರ
"ಸ್ಕಾಟ್ಲೆಂಡ್ ಐದು ಅಂಕಗಳೊಂದಿಗೆ ತನ್ನ ಅಭಿಯಾನವನ್ನು ಪೂರ್ಣಗೊಳಿಸಿದೆ. ಆದರೆ ಜೋಸ್ ಬಟ್ಲರ್ ನೇತೃತ್ವದ ತಂಡವು ಉತ್ತಮ ರನ್ ರೇಟ್ ಹೊಂದಿರುವ ಕಾರಣ ಮುಂದಿನ ಹಂತವನ್ನು ತಲುಪಿದೆ" ಎಂದು ಹಾಗ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).