ಕ್ರೀಡೆ

Border-Gavaskar ಟ್ರೋಫಿಯ ಮೂರನೇ ಪಂದ್ಯದ ಮೊದಲ ದಿನದಾಟ ಮಳೆಗೆ ಆಹುತಿ

ಬ್ರಿಸ್​​ಬೇನ್​: ಇಲ್ಲಿನ ದಿ ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್​ ಸರಣಿಯ ಮೂರನೇ ಪಂದ್ಯದ ಮೊದಲ ದಿನದಾಟ ಸಂಪೂರ್ಣ ಮಳೆಗೆ ಆಹುತಿಯಾಗಿದ್ದು, 13.2 ಓವರ್​​ಗಳನ್ನು ಆಡಲು ಮಾತ್ರ ಅವಕಾಶ ಸಿಕ್ಕಿದೆ.  ವರುಣನ ಅವಕೃಪೆಯಿಂದ ಮೊದಲ ದಿನದಾಟದವನ್ನು ರದ್ದುಗೊಳಿಸಲಾಗಿದೆ.

ಬಾರ್ಡರ್​-ಗವಾಸ್ಕರ್​ ಟ್ರೋಫಿ (Border-Gavaskar Trophy) ಟೆಸ್ಟ್​ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್​ ಗೆದದು ಟೀಮ್​ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು,  13.2 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೇ ಆಸ್ಟ್ರೇಲಿಯಾ 28ರನ್​ಗಳಿಸಿದೆ. ದ್ವಿತೀಯ ಹಾಗೂ ತೃತೀಯ ಸೆಷನ್​ ಸಂಪೂರ್ಣ ಮಳೆಗೆ ಆಹುತಿಯಾಗಿದ್ದು, ಹೀಗಾಗಿ ಮೊದಲ ದಿನದಾಟವನ್ನು ರದ್ದು ಮಾಡಲಾಗಿದೆ. ಇನ್ನೂ 4 ದಿನದಾಟಗಳು ಬಾಕಿ ಉಳಿದಿದ್ದು, ಮಳೆ ಕಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಾಗಿದೆ.

ಮೂರನೇ ಟೆಸ್ಟ್​ ಪಂದ್ಯದಲ್ಲಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿರುವ ಭಾರತ ತಂಡವು ಹರ್ಷಿತ್ ರಾಣಾ ಅವರ ಬದಲಿಗೆ ಆಕಾಶ್ ದೀಪ್ ಹಾಗೂ ಅಶ್ವಿನ್‌ ಬದಲಿಗೆ ರವೀಂದ್ರ ಜಡೇಜಾಗೆ ಅವಕಾಶ ನೀಡಿದೆ. ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಬೋಲ್ಯಾಂಡ್​ ಬದಲಿಗೆ ಜೋಶ್​ ಹೇಜಲ್​ವುಡ್​ಗೆ​ ಅವಕಾಶ ನೀಡಲಾಗಿದೆ.