ಕ್ರೀಡೆ

PHOTOS | ಸುನೀಲ್​ ಗಾವಸ್ಕರ್​ ಬರ್ತ್​​ಡೇಗೆ ಕ್ರಿಕೆಟ್​ ಜಗತ್ತಿನಿಂದ ಶುಭಾಶಯಗಳ ಸುರಿಮಳೆ

ಬೆಂಗಳೂರು: ಟೆಸ್ಟ್​ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ ಮೊದಲ ಬ್ಯಾಟ್ಸ್​ಮನ್​, ಪಂದ್ಯದ ಎರಡೂ ಇನಿಂಗ್ಸ್​ಗಳಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್​ಮನ್​ ಮತ್ತು ಈ ಸಾಧನೆಯನ್ನು 3 ಬಾರಿ ಮಾಡಿದ ಏಕೈಕ ಬ್ಯಾಟ್ಸ್​ಮನ್​, ಟೆಸ್ಟ್​ ಕ್ರಿಕೆಟ್​ನಲ್ಲಿ ಸರ್ವಾಧಿಕ ರನ್​ ಸಿಡಿಸಿದ ವಿಶ್ವದಾಖಲೆಯನ್ನು 2005ರವರೆಗೂ ಹೊಂದಿದ್ದ ಬ್ಯಾಟ್ಸ್​ಮನ್​ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ 100 ಕ್ಯಾಚ್​ ಹಿಡಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆ ಹೊಂದಿರುವ ಲಿಟ್ಟಲ್​ ಮಾಸ್ಟರ್​ ಸುನೀಲ್​ ಗಾವಸ್ಕರ್​ಗೆ ಶುಕ್ರವಾರ 71ನೇ ಜನ್ಮದಿನದ ಸಂಭ್ರಮ. ಈ ವೇಳೆ ಕ್ರಿಕೆಟ್​ ಜಗತ್ತಿನ ಹಾಲಿ&ಮಾಜಿ ಆಟಗಾರರು ಗಾವಸ್ಕರ್​ಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ನನ್ನ ಆದರ್ಶ ಬ್ಯಾಟ್ಸ್​ಮನ್​ ಸುನೀಲ್​ ಗಾವಸ್ಕರ್​ ಸರ್​ ಅವರನ್ನು 1987ರಲ್ಲಿ ನಾನು ಮೊದಲ ಬಾರಿಗೆ ಭೇಟಿಯಾಗಿದ್ದೆ. 13ನೇ ವಯಸ್ಸಿನಲ್ಲಿ ನನಗೆ ಸಿಕ್ಕ ಈ ಅದೃಷ್ಟವನ್ನು ನನಗೆ ನಂಬಲು ಸಾಧ್ಯವಾಗಿರಲಿಲ್ಲ. ನಾನು ಅವರಂತೆಯೇ ಆಗಲು ಬಯಸಿದ್ದೆ. ಎಂಥಾ ಅದ್ಭುತ ದಿನ ಅದಾಗಿತ್ತು. ಸರ್​ ನಿಮಗೆ 71ನೇ ಜನ್ಮದಿನದ ಶುಭಾಶಯಗಳು ಎಂದು ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಟ್ವೀಟ್​ ಮಾಡಿದ್ದಾರೆ. ಮುಂಬೈ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆ ಕೂಡ ಗಾವಸ್ಕರ್​ಗೆ ಶುಭಾಶಯ ತಿಳಿಸಿದ್ದಾರೆ. ಐಸಿಸಿ, ಬಿಸಿಸಿಐ ಕೂಡ ವಿವಿಧ ಸಂದೇಶಗಳ ಮೂಲಕ ಗಾವಸ್ಕರ್​ಗೆ ಜನ್ಮದಿನದ ಶುಭ ಹಾರೈಸಿದೆ.

ಮಾಜಿ ಬ್ಯಾಟ್ಸ್​ಮನ್​ ವಿವಿಎಸ್​ ಲ$್ಮಣ್​ ಅವರು, ನನಗೆ ನೀವು ಸಾಕಷ್ಟು ಸ್ಫೂತಿರ್ ತುಂಬಿದ್ದೀರಿ. ನಿಮ್ಮೊಂದಿಗೆ ಕಾಮೆಂಟರಿ ಬಾಕ್ಸ್​ ಹಂಚಿಕೊಂಡಿರುವುದು ನನಗೆ ಹೆಮ್ಮೆಯ ವಿಷಯ ಎಂದು ಬರೆದುಕೊಂಡಿದ್ದಾರೆ. ಮಾಜಿ ಆಟಗಾರ ಮೊಹಮ್ಮದ್​ ಕೈ್​ ಅವರು ಗಾವಸ್ಕರ್​ ಜತೆಗೆ ಈಜುಕೊಳದಲ್ಲಿ ಜತೆಯಾಗಿ ಈಜುತ್ತಿರುವ ವಿಡಿಯೋ ಪ್ರಕಟಿಸಿದ್ದು, ಹೆಲ್ಮೆಟ್​ ಇಲ್ಲದೆ ಕೆಚ್ಚೆದೆಯ ಬ್ಯಾಟಿಂಗ್​ ಪ್ರದಶಿರ್ಸಿದ ನಿಮ್ಮ ಬಗ್ಗೆ ಕೇಳುತ್ತಲೇ ನಾವು ಬೆಳೆದಿದ್ದೆವು. ಈಗ ನಿಮ್ಮೊಂದಿಗೆ ಮಾತನಾಡುತ್ತಲೇ ಆ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಅದೃಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.